Get Updates
Get notified of breaking news, exclusive insights, and must-see stories!

ಅಂತರರಾಷ್ಟ್ರೀಯ ಕಾಫಿ ಕೌನ್ಸಿಲ್‌ ಅಧ್ಯಕ್ಷೆಯಾಗಿ ಲಕ್ಷ್ಮಿವೆಂಕಟಾಚಲಂ

ಬೆಂಗಳೂರು: ಅಂತರರಾಷ್ಟ್ರೀಯ ಕಾಫಿ ಕೌನ್ಸಿಲ್‌(ಐಸಿಓ) ನ 2001-2002 ಇಸವಿಯ ಅಧ್ಯಕ್ಷರಾಗಿ ಕಾಫಿ ಬೋರ್ಡ್‌ನ ಅಧ್ಯಕ್ಷೆ ಲಕ್ಷ್ಮಿ ವೆಂಕಟಾಚಲಂ ಆಯ್ಕೆಯಾಗಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು ಪ್ರತಿಷ್ಠಿತ ಅಂತರರಾಷ್ಟ್ರೀಯ ಕಾಫಿ ಕೌನ್ಸಿಲ್‌ನ ಅಧ್ಯಕ್ಷ ಪೀಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಸಭೆಯಲ್ಲಿ , ಲಕ್ಷ್ಮಿ ವೆಂಕಟಾಚಲಂ ಐಸಿಓ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಕಾಫಿ ಕೌನ್ಸಿಲ್‌ ಅಧ್ಯಕ್ಷ ಪದ ಅಲಂಕರಿಸುತ್ತಿರುವ ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ. ಈ ಮುನ್ನ 1982-1983 ರಲ್ಲಿ ಬ್ರಿಟನ್‌ನ ಅಟ್ರಿಡ್ಜ್‌ ಅವರು ಅಂತರರಾಷ್ಟ್ರೀಯ ಕಾಫಿ ಕೌನ್ಸಿಲ್‌ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು ಎಂದು ರಾಜ್ಯ ಕಾಫಿ ಬೋರ್ಡ್‌ ಪ್ರಕಟಣೆ ಸೋಮವಾರ ತಿಳಿಸಿದೆ.

ತಮ್ಮ ಮೇಲೆ ನಂಬುಗೆಯಿಟ್ಟು ಮಹತ್ವದ ಜವಾಬ್ದಾರಿ ವಹಿಸಿರುವ ಐಸಿಓ ಸದಸ್ಯರಿಗೆ ಲಕ್ಷ್ಮಿ ವೆಂಕಟಾಚಲಂ ಅವರು ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ಕರ್ತವ್ಯವನ್ನು ನಿರ್ವಹಿಸುವಲ್ಲಿ ಎಲ್ಲರ ಸಹಕಾರವನ್ನು ಅಪೇಕ್ಷಿಸುವುದಾಗಿ ಅವರು ತಿಳಿಸಿದ್ದಾರೆ ಎಂದೂ ಪ್ರಕಟಣೆ ಹೇಳಿದೆ.

ಉತ್ತಮ ಗುಣಮಟ್ಟದ ಕಾಫಿ- ಅಧ್ಯಯನಕ್ಕೆ ಸಮಿತಿ ರಚನೆ

ಐಸಿಓ ಸಭೆ ಕಾಫಿಯ ಗುಣಮಟ್ಟವನ್ನು ಉತ್ತಮ ಪಡಿಸುವ ಕುರಿತು ಚರ್ಚಿಸಿದ್ದು , ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲು ಸಮಿತಿಯಾಂದನ್ನು ನೇಮಿಸಲು ತೀರ್ಮಾನಿಸಿತು. ಕಾಫಿ ಉತ್ಪಾದಕ ಹಾಗೂ ಗ್ರಾಹಕ ರಾಷ್ಟ್ರಗಳ ಸದಸ್ಯರನ್ನು ಹೊಂದಿರುವ ಈ ಸಮಿತಿ ರಫ್ತು ಗುಣಮಟ್ಟದ ಕಾಫಿಯ ನೀತಿಗಳನ್ನು ಗುಣಮಟ್ಟ ಮಾನದಂಡಗಳಾಗಿ ಅನುಷ್ಠಾನಗೊಳಿಸುವ ಕುರಿತು ತನ್ನ ವರದಿ ಸಲ್ಲಿಸಲಿದೆ. ಬರುವ ಜನವರಿಯಲ್ಲಿ ಈ ವರದಿಯ ನಿರೀಕ್ಷೆಯಲ್ಲಿದ್ದು , ಆನಂತರದಲ್ಲಿ ವರದಿಯ ಕುರಿತು ಚರ್ಚೆ ನಡೆಸಲು ಓಸಿಓ ತೀರ್ಮಾನಿಸಿತು.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+