ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ ಸರ್ಕಾರದ ಅಂತ್ಯ ಸನ್ನಿಹಿತ- ವೈಟ್‌ಹೌಸ್‌ ಘೋಷಣೆ

By Staff
|
Google Oneindia Kannada News

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ಗೆ ತನ್ನ ರಕ್ಷಣಾ ವಲಯದಲ್ಲಿ ನೆಲೆ ಕಲ್ಪಿಸಿರುವ ಆಪ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್‌ ಸರ್ಕಾರ ತುಂಬಾ ಕಾಲ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಶ್ವೇತ ಭವನ ಹೇಳಿದೆ.

ಲ್ಯಾಡೆನ್‌ ಹಾಗೂ ಅಲ್‌-ಕ್ವಯೇದ ಸಂಘಟನೆಯಾಂದಿಗೆ ತಾಲಿಬಾನ್‌ ಕೆಲಸ ಮಾಡುತ್ತಿದೆ. ಲ್ಯಾಡೆನ್‌ಗೆ ತಾಲಿಬಾನ್‌ ಮಾನ್ಯತೆ ನೀಡಿದೆ, ಇದು ಸರಿಯಾದ ಕ್ರಮವಲ್ಲ . ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವವರು ಅಧಿಕಾರದಲ್ಲಿರಲು ಸಾಧ್ಯವಿಲ್ಲ ಎಂದು ವೈಟ್‌ಹೌಸ್‌ನ ಸಿಬ್ಬಂದಿಯ ಮುಖ್ಯಸ್ಥ ಆಂಡ್ರ್ಯೂ ಕಾರ್ಡ್‌ ಫಾಕ್ಸ್‌ ನ್ಯೂಸ್‌ಗೆ ತಿಳಿಸಿದ್ದಾರೆ. ತಾಲಿಬಾನ್‌ ಭಯೋತ್ಪಾದಕರನ್ನು ತಯಾರು ಮಾಡುತ್ತಿದೆ ಎಂದು ಕೂಡ ಅವರು ಆಪಾದಿಸಿದ್ದಾರೆ.

ಈ ಮುನ್ನ , ಒಸಾಮ ಬಿನ್‌ ಲ್ಯಾಡೆನ್‌ ಆಪ್ಘಾನಿಸ್ತಾನದಲ್ಲೇ ಇದ್ದಾನೆ. ಒಸಾಮ ಇರುವ ತಾವು ತಾಲಿಬಾನ್‌ನ ಕೆಲವೇ ಕೆಲವು ರಕ್ಷಣಾ ಅಧಿಕಾರಿಗಳಿಗೆ ಮಾತ್ರ ಗೊತ್ತು ಎಂದು ಅಬ್ದುಲ್‌ ಸಲಂ ಝಹೀಫ್‌ ಭಾನುವಾರ ಹೇಳಿದ್ದರು. ಝಹೀಫ್‌ ಹೇಳಿಕೆಯ ಬೆನ್ನಿಗೇ ತಾಲಿಬಾನ್‌ ಆಡಳಿತ ಹೆಚ್ಚು ಕಾಲ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎನ್ನುವ ವೈಟ್‌ಹೌಸ್‌ ಪ್ರಕಟಣೆ ಹೊರಬಿದ್ದಿರುವುದು ಗಮನಾರ್ಹ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X