Get Updates
Get notified of breaking news, exclusive insights, and must-see stories!

ಗ್ವಾಲಿಯರ್‌ನಲ್ಲಿ ಬುಧವಾರ ಸಿಂಧಿಯಾ ಅಂತ್ಯಸಂಸ್ಕಾರ

Madhavarao scindiaನವದೆಹಲಿ : ಮೈನ್‌ಪುರಿ ಬಳಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವ ಮಾಧವರಾವ್‌ ಸಿಂಧ್ಯಾ ಅವರ ಮೃತ ದೇಹವನ್ನು ಕೇಂದ್ರ ಸರಕಾರದ ವಿಶೇಷ ವಿಮಾನದಲ್ಲಿ ಆಗ್ರಾದಿಂದ ದೆಹಲಿಗೆ ಸೋಮವಾರ ತರಲಾಗಿದೆ.

ಸಿಂಧ್ಯಾ ಅವರ ಕಳೇಬರವನ್ನು ಸಾರ್ವಜನಿಕರ ದರ್ಶನಕ್ಕಾಗಿ ದೆಹಲಿಯ ಅವರ ನಿವಾಸದಲ್ಲಿ ಇಡಲಾಗಿದೆ. ಸರಕಾರದ ಪರವಾಗಿ ಅರುಣ್‌ಜೈಟ್ಲಿ, ವಿಜಯ್‌ ಗೋಯಲ್‌, ಕಾಂಗ್ರೆಸ್‌ ನಾಯಕರಾದ ಸಲ್ಮಾನ್‌ ಖುರ್ಷಿದ್‌ ಅವರು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಸಿಂಧ್ಯಾ ಅವರ ಮೃತದೇಹವನ್ನು ದೆಹಲಿಗೆ ತಂದರು.

ಬುಧವಾರ ಅಂತ್ಯಕ್ರಿಯೆ: ಬುಧವಾರ ಸಿಂಧ್ಯಾ ಅವರ ಅಂತ್ಯ ಸಂಸ್ಕಾರ ಗ್ವಾಲಿಯರ್‌ನಲ್ಲಿ ನಡೆಯಲಿದೆ. ಗ್ವಾಲಿಯರ್‌ ರಾಜಮನೆತನದ ವಿಧಿ ವಿಧಾನಗಳ ರೀತ್ಯ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.

ಗೌರವಾರ್ಥ ಬಂದ್‌: ಮಧ್ಯಪ್ರದೇಶದ ಗ್ವಾಲಿಯರ್‌ ಮನೆತನದ ರಾಜಕುವರ ಹಾಗೂ ಕ್ರಿಯಾಶೀಲ ರಾಜಕಾರಣಿ ಸಿಂಧ್ಯಾ ಅವರ ನಿಧನ ಸುದ್ದಿ ತಿಳಿದ ಮಧ್ಯಪ್ರದೇಶದ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಪ್ರತಿಕೂಲ ಹವಾಮಾನ ಹಾಗೂ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಸಿಂಧಿಯಾ ಅವರ ಜತೆ ಪ್ರಯಾಣಿಸುತ್ತಿದ್ದ ಪತ್ರಕರ್ತರಾದ ಅಂಜುಶರ್ಮಾ (ಹಿಂದೂಸ್ತಾನ್‌ ಟೈಮ್ಸ್‌), ಸಂಜೀವ್‌ ಸಿನ್ಹಾ (ಇಂಡಿಯನ್‌ ಎಕ್ಸ್‌ಪ್ರೆಸ್‌), ರಾಜನ್‌ ಝಾ (ಆಜ್‌ತಕ್‌), ಗೋಪಾಲ್‌ ಬಿಸ್ಟ್‌ (ಛಾಯಾಗ್ರಾಹಕ) ಹಾಗೂ ಪೈಲಟ್‌ ರಾಯ್‌ ಗೌತಮ್‌ ಮತ್ತು ಸಹ ಪೈಲಟ್‌ ರಿತು ಕೂಡ ಸಾವನ್ನಪ್ಪಿದ್ದಾರೆ.

ಪಾರು: ಕಾನ್ಪುರದ ಸಾರ್ವಜನಿಕ ರ್ಯಾಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಂಧ್ಯಾ ಅವರ ಜೊತೆ ತೆರಳಬೇಕಿದ್ದ ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತ್‌ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ ಅಯ್ಯರ್‌ ಅವರು, ಕೊನೆ ಕ್ಷಣದಲ್ಲಿ ತಮ್ಮ ಪ್ರಯಾಣ ರದ್ದು ಪಡಿಸಿದ ಕಾರಣ ಸಾವಿನ ದವಡೆಯಿಂದ ಪಾರಾಗಿದ್ದಾರೆ.

(ಪಿಟಿಐ/ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+