ರಾಜ್ಯದಲ್ಲಿ ಮಳೆ ಬಂದಿದೆ ಎಂದರೆ ಮನ ತುಂಬ ಖುಷಿ ಅಲ್ಲವಾ ?
ಬೆಂಗಳೂರು : ಮಳೆ ಬಂದಿದೆ. ಕರಾವಳಿಯಿಂದ ಹಿಡಿದು ಕೋಲಾರದ ಪುಟ್ಟ ಹಳ್ಳಿಯವರೆಗೆ ಮಳೆ ದಯಮಾಡಿಸಿದೆ. ಬೆಂಗಳೂರು ನಗರದಲ್ಲಂತೂ ಶಾಲೆಯ ಟೈಂ ಟೇಬಲ್‌ನ್ನು ಅನುಸರಿಸುವ ಹಾಗೆ ಪ್ರತಿದಿನ ಮಳೆ ಸುರಿಯುತ್ತಿದೆ.
ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮತ್ತೆ ಆಷಾಢವನ್ನು ಜ್ಞಾಪಿಸುವ ಮಳೆಗಾಲ ಶುರುವಾಗಿದೆ. ಭಾನುವಾರ ಮಂಗಳೂರಿನ ಪೇಟೆಯಲ್ಲಿ ಜನಸಂಚಾರ ಕಡಿಮೆಯಾಗಿತ್ತು. ಭತ್ತದ ಕೃಷಿಯೇ ಹೆಚ್ಚಾಗಿರುವ ಕರಾವಳಿಯಲ್ಲಿ, ಸುಗ್ಗಿ ಬೆಳೆಯ ರೈತರಿಗೆ ಮಳೆ ಖುಷಿ ನೀಡಿದರೆ, ಮಳೆಗಾಲದ ಮೊದಲ ಬೆಳೆ ತೆಗೆಯುವ ರೈತರು ಪೈರು ನೀರಿನಲ್ಲಿ ತೋಯುತ್ತಿರುವುದನ್ನು ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಮಳೆಯ ಜೊತೆಗೆ ಕರಾವಳಿಯ ಸಮುದ್ರವೂ ಕೈಜೋಡಿಸಿದೆ. ಕಾಸರಗೋಡಿನ ಕಾಂಞಗಾಡು ಭಾಗದ ಸಮುದ್ರದಲ್ಲಿ ಭಾನುವಾರ ಅನಿರೀಕ್ಷಿತವಾಗಿ ಭಾರೀ ಪ್ರಮಾಣದ ಅಲೆಗಳೆದ್ದು ಸಮುದ್ರ ಅಪಾಯಕಾರಿ ರೂಪ ತಾಳಿತ್ತು. ಬೆಳಗಿನ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು ಬೆಸ್ತರು ಸಮುದ್ರದಲ್ಲಿ ಬಹಳ ದೂರ ಕ್ರಮಿಸಿರಲಿಲ್ಲವಾದ್ದರಿಂದ ಅಪಘಾತಗಳು ನಡೆದ ವರದಿಯಾಗಿಲ್ಲ. ಸಮುದ್ರದ ಇಂಗಿತವರಿಯದೆ ಕಂಗಾಲಾಗಿರುವ ಕಲವು ಬೆಸ್ತರು ಮೀನುಗಾರಿಕೆಯನ್ನು ಸ್ವ ಇಚ್ಛೆಯಿಂದ ಒಂದರೆಡು ದಿನಗಳ ಕಾಲ ಕೈಬಿಟ್ಟಿದ್ದಾರೆ. ಆದರೆ ಇಲ್ಲಿನ ನೀಲೇಶ್ವರ ಸಮೀಪ ಮೀನುಗಾರಿಕೆಗೆ ತೆರಳಿದ 3 ಬೋಟುಗಳ ಪೈಕಿ ಒಂದು ಬೋಟು
ನಾಪತ್ತೆಯಾಗಿದೆ.
ಅಪರೂಪಕ್ಕೆ ಕೆರೆಗಳು ತುಂಬಿವೆ
ರಾಜ್ಯದಲ್ಲೇ ಅಧಿಕವೆನಿಸಿದ ಮಳೆ ಸುರಿದುದು ಕಾರ್ಕಳದಲ್ಲಿ (11 ಸೆಂ.ಮೀ.). ಕೋಲಾರ, ಹುಬ್ಬಳ್ಳಿ, ಶಿಗ್ಗಾಂವ್‌ಗಳಲ್ಲಿಯೂ ಮಳೆಯಾಗಿ ಕೆರೆ ಕಟ್ಟೆಗಳು ತುಂಬಿವೆ. ಮಳೆಗಾಲದ ಅವಧಿ ಮುಗಿಯುತ್ತಿದ್ದಂತೆಯೇ ಶುರುವಾದ ಮಳೆ ಊರಿನ ಕೆರೆಗಳನ್ನು ತುಂಬಿಸಿದ್ದು, ಈ ಅಪರೂಪದ ದೃಶ್ಯ ನೋಡಲು ನೋಡಲು ನೂರಾರು ಸಂಖ್ಯೆಯಲ್ಲಿಯೇ ಜನರು ಬಂದಿರುವ ವರದಿ ತುಮಕೂರಿನಿಂದ ಬಂದಿದೆ.
ಮಂಗಳವಾರ ಮುಂಜಾನೆವರೆಗಿನ ಹವಾಮುನ್ಸೂಚನೆ ಪ್ರಕಾರ ಒಳನಾಡಿನ ಹಲವೆಡೆ ಹಾಗೂ ಕರಾವಳಿಯ ಕೆಲವೆಡೆ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯ ಅಲ್ಲಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯೂ ಇದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications