ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕರಿಂದ ರಾಸಾಯನಿಕ ದಾಳಿಯ ಭೀತಿಯಲ್ಲಿ ಅಮೆರಿಕಾ

By Staff
|
Google Oneindia Kannada News

ನ್ಯೂಯಾರ್ಕ್‌: ಭಯೋತ್ಪಾದಕರಿಂದ ಸಂಭಾವ್ಯ ರಾಸಾಯನಿಕ ಅಸ್ತ್ರಗಳ ದಾಳಿಯ ನಿರೀಕ್ಷೆಯಲ್ಲಿ ಅಮೆರಿಕನ್ನರು ರಾಸಾಯಿನಿಕ ಅಸ್ತ್ರ ನಿರೋಧಕ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅಮೆರಿಕಾದ ಇಂಧನ ಇಲಾಖೆ (ಡಿಓಇ) ವಾಷಿಂಗ್ಟನ್‌ ಮೆಟ್ರೋದ ರೈಲ್ವೆ ನಿಲ್ದಾಣದಲ್ಲಿ ಡಿಟೆಕ್ಟರ್‌ಗಳನ್ನು ಅಳವಡಿಸಿದೆ. ಟಾಕ್ಸಿಕ್‌ ರಾಸಾಯಿನಿಕಗಳನ್ನು ಪತ್ತೆ ಹಚ್ಚುವ ಈ ಯಂತ್ರಗಳನ್ನು ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಕ್ರೀಡಾಂಗಣಗಳು ಸೇರಿದಂತೆ ಬೃಹತ್‌ ಸಮುಚ್ಛಯ ಪ್ರದೇಶಗಳಲ್ಲಿ ಬಯೋ- ಡಿಟೆಕ್ಟರ್‌ಗಳನ್ನು ಅಳವಡಿಸುವ ಅಧಿಕ ವೆಚ್ಚದ ಯೋಜನೆಯನ್ನು ಅಮೆರಿಕನ್‌ ಆಡಳಿತ ಸ್ಥಳೀಯ ಆಡಳಿತಗಳ ಸಹಯೋಗದಲ್ಲಿ ಕೈಗೆತ್ತಿಕೊಂಡಿದೆ. ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ನ ಅಲ್‌- ಕ್ವಯೆದ ಭಯೋತ್ಪಾದಕ ಸಂಘಟನೆ ರಾಸಾಯನಿಕ ಅಸ್ತ್ರಗಳನ್ನು ಅಮೆರಿಕಾದ ಮೇಲೆ ಪ್ರಯೋಗಿಸುವ ಭೀತಿಯಲ್ಲಿ ಈ ಸಿದ್ಧತೆಗಳನ್ನು ನಡೆಸಲಾಗಿದೆ.

ಅಂಥ್ರಾಕ್ಸ್‌ ಹಾಗೂ ಬೊಟುಲಿನಂ ರಾಸಾಯಿನಕಗಳನ್ನು ಯುರೋಪಿನ ರಾಷ್ಟ್ರವೊಂದರಿಂದ ಪಡೆಯಲು ಅಲ್‌-ಕ್ವಯೆದ ಪ್ರಯತ್ನ ನಡೆಸಿರುವ ಸುಳಿವು ಎಫ್‌ಬಿಐಗೆ ದೊರಕಿದೆ ಎಂದು ನ್ಯೂಸ್‌ವೀಕ್‌ ತಿಳಿಸಿದೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X