ಮುಂದಿನ 48 ಗಂಟೆಯ ಯಾವುದೇ ಕ್ಷಣದಲ್ಲಿ ರಣಕಹಳೆ
ಲಂಡನ್ : ಸೆ.11ರಂದು ಅಮೆರಿಕದ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪ್ರತೀಕಾರದ ಕ್ರಮವಾಗಿ ಭಯೋತ್ಪಾದಕತೆ ವಿರುದ್ಧ ಸಮರ ಸಾರಿರುವ ಅಮೆರಿಕ, ಬ್ರಿಟನ್ ಜೊತೆಗೂಡಿ ಶಂಕಿತ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್ ನೆಲೆಗಳ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.
ಮುಂದಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಸಮಯದಲ್ಲಾದರೂ ದಾಳಿ ನಡೆಯಬಹುದು ಎಂದು ಲಂಡನ್ ಪತ್ರಿಕೆಗಳು ಸೆ.30ರಂದು ವರದಿ ಮಾಡಿವೆ. ಅಮೆರಿಕ ಮತ್ತು ಬ್ರಿಟಿಷ್ ಮೂಲಗಳನ್ನು ಉಲ್ಲೇಖಿಸಿರುವ ದಿ ಅಬ್ಸರ್‌ವರ್ ಪತ್ರಿಕೆಯು ಲಾಡೆನ್‌ನನ್ನು ಮುಗಿಸುವ ತನಕ ಸಮರ ನಡೆಯಲಿದ್ದು, ಆಫ್ಘನ್ ಮೇಲೆ ಭೂ ಹಾಗೂ ವಾಯು ದಾಳಿ ನಡೆಯಲಿದೆ ಎಂದು ತಿಳಿಸಿದೆ.
ಈ ಮಧ್ಯೆ ಉತ್ತರ ಮೈತ್ರಿಕೂಟ (ನಾರ್ಥನ್ ಅಲಯನ್ಸ್) ಒಂದೆರಡು ದಿನದಲ್ಲಿ ಆಫ್ಘನ್ ವಿರುದ್ಧ ಹೊಸ ಕಾರ್ಯಾಚರಣೆ ನಡೆಸಲಿದೆ ಎಂದು ದಿ ಮೇಲ್ ಪತ್ರಿಕೆಯ ವರದಿ ತಿಳಿಸಿದೆ.
- ಆಫ್ಘಾನಿಸ್ತಾನದ ತಾಲಿಬಾನ್ ಆಳ್ವಿಕೆ ವಿರುದ್ಧ ಉತ್ತಮ ಮೈತ್ರಿಕೂಟ ಅಕ್ಟೋಬರ್ 1ರಂದು ಹೊಸ ಆಕ್ರಮಣ ನಡೆಸಲಿದೆ. ಇದಕ್ಕಾಗಿ ಅದು ಮಾಸ್ಕೋದಿಂದ ಭಾರಿ ಪ್ರಮಾಣದ ಶಸ್ತ್ರಸ್ತ್ರ ಪಡೆದುಕೊಂಡಿದೆ.
- ಹೊಸ ದಾಳಿ ನಡೆಯುವ ಆ ದಿನವನ್ನು ಅದು ‘ಡಿ -ಡೇ’ ಎಂದು ಕರೆದಿದೆ. (ಡಿ ಡೇ ಎಂದರೆ ಪ್ರಮುಖ ಘಟನೆ ಘಟಿಸುವ ದಿನ)
- ಹೊಸ ಕಾರ್ಯಾಚರಣೆಗೆ ಉತ್ತರ ಮೈತ್ರಿಕೂಟ ತನ್ನ ಪಡೆಗಳನ್ನು ಮರು ಜಮಾವಣೆ ಮಾಡಿದೆ.
- ಈ ಮಧ್ಯೆ ಬಿನ್ ಲಾಡೆನ್‌ನನ್ನು ವಶಕ್ಕೊಪ್ಪಿಸುವುದನ್ನು ಬಿಟ್ಟು ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆಗೆ ಸಿದ್ಧ ಎಂದು ತಾಲಿಬಾನ್ ಹೇಳಿದೆ.
- ತಾಲಿಬಾನ್ ವಿರುದ್ಧದ ಅಮೆರಿಕದ ಉದ್ದೇಶಿತ ದಾಳಿ ಕುರಿತಂತೆ ತಮ್ಮ ಸಲಹೆ ಕೇಳದಿರುವುದಕ್ಕೆ ಉತ್ತರ ಮೈತ್ರಿ ಕೂಟ ದಿಗ್ಭ್ರಮೆ ವ್ಯಕ್ತಪಡಿಸಿದೆ.
- ಅಮೆರಿಕದ ವಿರುದ್ಧ ಪ್ರತಿದಾಳಿಗೆ ಸಿದ್ಧವಾಗಿರುವ ತಾಲಿಬಾನ್, ಜಲಾಲುದ್ದೀನ್ ಹಕ್ಕಾನಿ ಅವರನ್ನು ಆಪ್ಘನ್‌ನ ದಂಡನಾಯಕನನ್ನಾಗಿ ನೇಮಿಸಿದ್ದಾರೆ. ಮುಲ್ಲಾ ಮೊಹಮ್ಮದ್ ಓಮರ್ ಈ ನೇಮಕ ಮಾಡಿದ್ದಾರೆ.
- ಸಂಭವನೀಯ ಯುದ್ಧ ತಪ್ಪಿಸಲು ಪಾಕ್ ಧಾರ್ಮಿಕ ಮುಖಂಡರು ಮತ್ತೊಂದು ಸುತ್ತಿನ ಮನವೊಲಿಕೆ ಪ್ರಯತ್ನದಲ್ಲಿ ತೊಡಗಿದ್ದಾರೆ.
- ಅಮೆರಿಕ ವಿಶೇಷ ಪಡೆಗಳು ಪಾಕಿಸ್ತಾನದಲ್ಲಿ ಬೇಹುಗಾರಿಕೆ ಸುದ್ದಿ ಸಂಗ್ರಹದಲ್ಲಿ ತೊಡಗಿದ್ದು, ಇದು ಯುದ್ಧದ ಕ್ಷಣಗಣನೆ ಎಂದು ಹೇಳಲಾಗಿದೆ.
- ದೆಹಲಿಯ ವಿಮಾನದಲ್ಲಿ ಅಮೆರಿಕದ ಸಮರ ವಿಮಾನಕ್ಕೆ ಇಂಧನ ತುಂಬಲಾಯಿತು ಎಂಬ ಊಹಾಪೋಹಕ್ಕೆ ಈಗ ತೆರೆ ಬಿದ್ದಿದೆ.
- ದೆಹಲಿಯಲ್ಲಿ ಇಳಿದದ್ದು ಅಮೆರಿಕ ಸೈನ್ಯದ ಹರ್ಕ್ಯುಲೆಸ್ ಸಿ.130 ವಿಮಾನವೇ ಆದರೂ ಅದು, ಇಲ್ಲಿನ ರಾಯಭಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು 6 ಮಂದಿ ಅಧಿಕಾರಿಗಳನ್ನು ಕರೆತಂದಿದೆ. ಇದಕ್ಕೂ ಆಫ್ಘನ್ ವಿರುದ್ಧದ ಸಮರಕ್ಕೂ ಸಂಬಂಧ ಇಲ್ಲ ಎಂದು ಸರಕಾರದ ಅಧಿಕೃತ ಹೇಳಿಕೆ ತಿಳಿಸಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಯೋತ್ಪಾದನೆ ದಮನಕ್ಕೆ ನಿರ್ಣಯ ಅಂಗೀಕರಿಸಿದ್ದು, ಭಯೋತ್ಪಾದಕರಿಗೆ ಆರ್ಥಿಕ ನೆರವು ಸ್ಥಗಿತ, ಆಸ್ತಿಪಾಸ್ತಿ ಮುಟ್ಟುಗೋಲು, ವಿಶ್ವಸಂಸ್ಥೆ ಪಾತ್ರ ವಿಸ್ತರಣೆ ಹಾಗೂ ಕಾಶ್ಮೀರ ಭಯೋತ್ಪಾದನೆ ವಿಷಯ ಪ್ರಸ್ತಾಪಿಸಿದೆ.
- ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ನೆರವಾಗುತ್ತಿರುವ ಪಾಕ್‌ಗೆ ಅಮೆರಿಕವು 50 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.
- ಈ ವರ್ಷದ ಆದಿಯಲ್ಲಿ ಅಕ್ರಮವಾಗಿ ಪಾಕ್‌ಗಡಿ ಪ್ರವೇಶಿಸಿದ್ದ 31 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಲು ಪಾಕ್ ಒಪ್ಪಿದ್ದು, ಅಕ್ಟೋಬರ್ 1ರಂದು ಇವರನ್ನು ವಾಘಾ ಗಡಿಯಲ್ಲಿ ಬಿಡುಗಡೆ ಮಾಡುತ್ತಿದೆ.
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications