ಶ್ರೀಕ್ಷೇತ್ರ ಗೊಮ್ಮಟಗಿರಿಯ ಬಾಹುಬಲಿಗೆ 52ನೇ ಮಸ್ತಕಾಭಿಷೇಕ
ಮೈಸೂರು : ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಗೊಮ್ಮಟ ಗಿರಿಯ ಗೊಮ್ಮಟೇಶ್ವರ (ಬಾಹುಬಲಿ)ನಿಗೆ ಭಾನುವಾರ ಮಧ್ಯಾಹ್ನ 52ನೇ ಮಸ್ತಕಾಭಿಷೇಕ ನೆರವೇರಲಿದೆ. ಮಸ್ತಕಾಭಿಷೇಕ ನೋಡಲೆಂದೇ ದೇಶದ ನಾನಾ ಮೂಲೆಗಳಿಂದ ಸಾವಿರಾರು ಜೈನಧರ್ಮೀಯರು ಇಲ್ಲಿಗೆ ಆಗಮಿಸಿದ್ದಾರೆ.
ಹುಣಸೂರಿನಿಂದ 25 ಕಿ.ಮೀಟರ್ ದೂರದಲ್ಲಿರುವ ಶ್ರೀಕ್ಷೇತ್ರದಲ್ಲಿ ನೂರು ಅಡಿ ಎತ್ತರದ ಬೆಟ್ಟದ ಮೇಲೆ ಕೃಷ್ಣವರ್ಣದ ಏಕಶಿಲೆಯಲ್ಲಿ 16 ಅಡಿ ಎತ್ತರದ ಸುಂದರ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಬೆಟ್ಟವೇರಲು 80 ಮೆಟ್ಟಿಲುಗಳೂ ಇವೆ.
ದೂರದಿಂದ ನೋಡಿದರೆ ರಥದಂತೆ ಗೋಚರಿಸುವ ಈ ಬೆಟ್ಟ, ಬೆಟ್ಟದೂರು ಎಂದೂ ಕರೆಸಿಕೊಂಡಿದೆ. 16 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಬಲಪಾರ್ಶ್ವದಲ್ಲಿ ಅಂದರೆ ಬೆಟ್ಟದ ಕೆಳಗೆ 24ನೇ ತೀರ್ಥಂಕರ ನೇಮಿನಾಥರ ಪಾದಕೂಟವೂ ಇದೆ. ಇದರ ಮಗ್ಗುಲಲ್ಲೇ ಕೈಲಾಸಗಿರಿ, ಜಿನಮಂದಿರಗಳೂ ಇವೆ.
ಮೈಸೂರಿಗೆ ಕೇವಲ 20 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ಹಾಗೂ ರಮಣೀಯ ಬೆಟ್ಟದ ಮೇಲೆ ನಿಂತು ಸುತ್ತಲ ಪರಿಸರದತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಿಗುವ ಆನಂದ ವರ್ಣನಾತೀತ. ಕೃಷ್ಣರಾಜ ಸಾಗರ ಜಲಾಶಯವೂ ಬೆಟ್ಟದಿಂದ ಸುಂದರವಾಗಿ ಕಾಣುತ್ತದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications