Get Updates
Get notified of breaking news, exclusive insights, and must-see stories!

ಸೆಕ್ಸ್‌ ಹತ್ತಿಕ್ಕಿದ ಲ್ಯಾಡೆನ್‌

*ರಘುನಾಥ ಚ.ಹ.

ಸರ್ವವ್ಯಾಪಿ ಹಾಗೂ ಸರ್ವಋತುಗಳ ಸರಕೆಂದು ಇದುವರೆಗೂ ನಂಬಲಾಗಿದ್ದ ಸೆಕ್ಸ್‌ಗೆ ಇಂಥ ಗತಿ ಬರುತ್ತದೆಂದು ಯಾರು ನಂಬಿದ್ದರು. ಸೆಕ್ಸ್‌ ಎಂಬ ನಿತ್ಯವಸಂತವನ್ನು ಮೂಲೆಗೆ ತಳ್ಳಿದ ದೈತ್ಯಶಕ್ತಿ ನಾಲ್ವರು ಹೆಂಡಿರ ಗಂಡನಾದ ಒಸಾಮ ಬಿನ್‌ ಲ್ಯಾಡೆನ್ನನೆಂಬ ದೈತ್ಯನಿಗಲ್ಲದೆ ಇನ್ನಾರಿಗಿದ್ದೀತು.

ಕೊಳ್ಳ ಕಣಿವೆಗಳ ನಡುವೆ ಸಪರಿವಾರ ಸಮೇತನಾಗಿ ಒಸಾಮ ಸಂಸಾರ ಮಾಡುತ್ತಿರುವಾಗ, ಸೆಕ್ಸು ಕಾಲು ಮುರಿದುಕೊಂಡಿರುವುದನ್ನು ಏನನ್ನುವುದು? ಇನ್ನುಮುಂದೆ ಪಮೇಲಾಗೊಂದು ಕಾಲ, ಲ್ಯಾಡೆನ್‌ಗೊಂದು ಕಾಲ ಅನ್ನುವ ಮಾತು ಹುಟ್ಟಿಕೊಂಡೀತು. ಜಗತ್ತೆಲ್ಲ ಲ್ಯಾಡೆನ್‌ ಪಾರಾಯಣ ಮಾಡುತ್ತಿರುವಾಗ, ಪಾಪದವರಾದ ಪಮೇಲಾ ಆ್ಯಂಡರ್‌ಸನ್‌, ಬ್ರಿಟ್ನಿ ಸ್ಪಿಯರ್ಸ್‌ ಮೊದಲಾದ ನಾಚದ ನೀರೆಯರನ್ನು ಯಾರು ಮೂಸಿಯಾರು!?

ಅಂತರ್ಜಾಲಿಗರಾದ ನೀವೆಲ್ಲ ಕುತೂಹಲದ ಊಟೆಯಲ್ಲಿ ಯಾವತ್ತಾದರೂ ಒಮ್ಮೆ , ಜಾಲದಲ್ಲಿ ಸೆಕ್ಸ್‌ ಇರುವುಗಳನ್ನು ಕಂಡಿಯೇ ಇರುತ್ತೀರಿ. ಪಮೇಲಾ ಎನ್ನುವ ಹೆಣ್ಣುಮಗಳ ಅಂಗಾಂಗ ವೈಭವವನ್ನು ಇಷ್ಟವಿದ್ದೋ, ಇಲ್ಲದೆಯೋ ಕಣ್ಣು ತುಂಬಿಕೊಂಡೂ ಇದ್ದೀರಿ. ಪಾಪ, ಆ ಹೆಣ್ಣುಮಗಳಿಗೀಗ ಕೇಡುಗಾಲ ಬಂದಿದೆ. ಇಷ್ಟುದಿನ ಅಂತರ್ಜಾಲಿಗರ ಮನದನ್ನೆಯಾಗಿ ಮೆರೆದಿದ್ದ ಪಮೇಲಾ, ಏಕಾಏಕಿ ಜಾಲಿಗರ ಅಸಡ್ಡೆಗೆ ಪಾತ್ರಳಾಗಿದ್ದಾಳೆ. ಅದೇನು ಮಾಯೆಯೋ, ಎಲ್ಲರ ಕಣ್ಣೂ ಲ್ಯಾಡೆನ್‌ನತ್ತ !

ಪಮೇಲಾ ಒಸಿ ಪಕ್ಕಕ್ಕೆ ಸರಿ, ಒಸಾಮ ನೀನ್ಯಾರೋ!?

ಅಮೆರಿಕದ ಪ್ರತಿಷ್ಠೆಯ ಕಳಸಗಳಂತೆ ಗಗನಮುಖಿಯಾಗಿದ್ದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳೆರಡು ಯಾವ ಗಳಿಗೆಯಲ್ಲಿ ಕುಸಿದುಬಿದ್ದವೋ- ಆ ಗಳಿಗೆಯಿಂದಲೇ ಲ್ಯಾಡೆನ್‌ ಎನ್ನುವ ಹೆಸರು ಎಲ್ಲರ ನಾಲಗೆಗಳ ಮೇಲೂ ಸುಳಿದಾಡತೊಡಗಿತು. ಅಂತರ್ಜಾಲಿಗರಂತೂ, ಅಮೆರಿಕಾಗೆ ನೀರು ಕುಡಿಸಿದ ದೈತ್ಯ ಯಾರೀ ಒಸಾಮ ಅನ್ನುವ ಭಯಾಶ್ಚರ್ಯಗಳಿಂದಲೇ ಸರ್ಚ್‌ ಇಂಜಿನ್‌ಗಳಿಗೆ ಮುಗಿಬಿದ್ದರು. ಪರಿಣಾಮವಾಗಿ ಪಮೇಲಾ ಹಿಂದಾದಳು, ಬ್ರಿಟ್ನಿ ಮಂಕಾದಳು. ಅಂಗಾಂಗಳನ್ನು ಕಣ್ತುಂಬಿಸುವ ವ್ಯಾಪಾರವನ್ನು ನಂಬಿಕೊಂಡು ಮಿಲಿಯಗಟ್ಟಲೆ ದುಡ್ಡು ಸುರಿದವರಂತೂ ವಿಶ್ವ ವ್ಯಾಪಾರ ಕೇಂದ್ರ ಕುಸಿದುಬಿದ್ದದ್ದು ತಮ್ಮ ಮೇಲೆಯೇ ಎನ್ನುವ ಮಟ್ಟಿಗೆ ಮೂಕರಾಗಿಬಿಟ್ಟರು. ಒಂದೆ ಮಾತಲ್ಲಿ ಹೇಳುವುದೆಂದರೆ, ಇದು ಅವರಿಗೆ ಕೆಟ್ಟಕಾಲ!

ಅಮೆರಿಕಾದ ಮೇಲೆ ಭಯೋತ್ಪಾದಕರ ದಾಳಿಯ ನಂತರ ಸೆಕ್ಸ್‌ ಗೀಳು ಹಿಂದಾಗಿರುವುದನ್ನು ಅಲ್ಟಾವಿಸ್ಟಾ ಸರ್ಚ್‌ ಇಂಜಿನ್‌ ದೃಢಪಡಿಸಿದೆ. ಎಲ್ಲರ ಧ್ಯಾನವೂ ಅಮೇರಿಕನ್‌ ಫ್ಲಾಗ್‌, ಲ್ಯಾಡೆನ್‌, ತಾಲಿಬಾನ್‌, ಪೆಂಟಗನ್‌, ಎಫ್‌ಬಿಐ ಅತ್ತಲೆ. ಈ ಮುನ್ನ ‘ಟಾಪ್‌ 10’ ಲಿಸ್ಟ್‌ನಲ್ಲಿ ಯಾವತ್ತೂ ಸ್ಥಾನ ಕಳಕೊಳ್ಳದ ಸೆಕ್ಸ್‌ 17 ನೇ ರ್ಯಾಂಕಿಂಗ್‌ಗೆ ಕುಸಿಯುವುದೆಂದರೆ, ಲ್ಯಾಡೆನ್‌ ಸಮ್ಮೋಹಿನಿ ಎಷ್ಟು ಜೋರಿರಬೇಕು.

ಗೂಗ್‌ಲ್‌ ಕೂಡ ಸೆಕ್ಸ್‌ಗೊದಗಿರುವ ದುರ್ಗತಿಯ ಕುರಿತು ಮಾಹಿತಿ ಒದಗಿಸಿದೆ. ಸೆಕ್ಸ್‌ ಮಾತ್ರವಲ್ಲ , ಟೀವಿ, ಕಂಪ್ಯೂಟರ್‌ ಇನ್ನಿತರೆ ವಿಷಯಗಳು ಕೂಡ ಹಿಂದೆಂದಿಗಿಂತ ಕಳಪೆ ರ್ಯಾಂಕಿಂಗ್‌ ಸಾಧನೆ ಮಾಡಿವೆ. ಅಂದಹಾಗೆ, ಅಂತರ್ಜಾಲಿಗರು ಜಾಲಾಡುತ್ತಿರುವ ಮತ್ತೊಂದು ಜನಪ್ರಿಯ ಹೆಸರು- ನಾಸ್ಟ್ರೋಡಾಮಸ್‌, ಈತ 16 ನೇ ಶತಮಾನದ ಫ್ರೆಂಚಿಗ, ಭವಿಷ್ಯತ್ತನ್ನು ಹೇಳುವುದರಲ್ಲಿ ಭಾರೀ ಗಟ್ಟಿಗನೆಂದು ಪ್ರಸಿದ್ಧ . ಒಸಾಮಾ ಕಟ್ಟಡಗಳನ್ನು ಉಡಾಯಿಸುವುದನ್ನು ಆತ 16 ನೇ ಶತಮಾನದಲ್ಲಿಯೇ ಊಹಿಸಿ, ಬರೆದಿರಿಸಿದ್ದನಂತೆ. ಅಂದಹಾಗೆ, ಈ ಬಗ್ಗೆ ನಮ್ಮ ಕೈವಾರದ ನಾರಾಣಪ್ಪ ಏನೂ ಹೇಳಿರಲಿಲ್ಲವೇ? ಯಾರಿಗೆ ಗೊತ್ತು .. ನಾರಾಣಪ್ಪ ಇನ್ನೂ ಇಂಟರ್ನೆಟ್‌ ತಲುಪಿಲ್ಲ ವಲ್ಲ .

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+