ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್‌ ಮನವೊಲಿಸಲು ಪಾಕ್‌ ಪ್ರಯತ್ನ ವ್ಯರ್ಥ,ಯುದ್ಧ ಸನ್ನಿಹಿತ

By Staff
|
Google Oneindia Kannada News

ಇಸ್ಲಮಾಬಾದ್‌/ವಾಷಿಂಗ್ಟನ್‌: ಸಂಭವನೀಯ ಯುದ್ಧವನ್ನು ತಪ್ಪಿಸಿಕೊಳ್ಳಲು ಮುಂದಾಗುವಂತೆ ತಾಲಿಬಾನ್‌ ಆಡಳಿತದ ಮನವೊಲಿಸಲು ಆಪ್ಘಾನಿಸ್ತಾನಕ್ಕೆ ತೆರಳಿದ್ದ ಪಾಕಿಸ್ತಾನದ ನಿಯೋಗ ತನ್ನ ಪ್ರಯತ್ನದಲ್ಲಿ ವಿಫಲವಾಗಿದೆ. ಈ ನಡುವೆ ಆಪ್ಘಾನಿಸ್ತಾನದ ಮೇಲೆ ದಾಳಿ ನಡೆಸಲು ಅಮೆರಿಕಾ ಹಾಗೂ ಇಂಗ್ಲೆಂಡ್‌ ಪಡೆಗಳು ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಶುಕ್ರವಾರ ತಾಲಿಬಾನ್‌ನ ಮುಖ್ಯಸ್ಥ ಮುಲ್ಲಾ ಮೊಹಮದ್‌ ಓಮರ್‌ ಅವರೊಂದಿಗೆ ಮಾತುಕತೆ ನಡೆಸಿ ಕಾಂದಹಾರ್‌ನಿಂದ ವಾಪಸ್ಸಾದ ಪಾಕಿಸ್ತಾನಿ ಧಾರ್ಮಿಕ ನಾಯಕರ ನಿಯೋಗ ತಮ್ಮ ಮಧ್ಯಸ್ಥಿಕೆ ವಿಫಲವಾದ ಬಗ್ಗೆ ತಿಳಿಸಿದೆ. ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಮೆಹಮೂದ್‌ ಅಹ್ಮದ್‌ ಸೇರಿದಂತೆ 10 ಮಂದಿ ಸದಸ್ಯರನ್ನು ಈ ನಿಯೋಗ ಒಳಗೊಂಡಿತ್ತು .

ಒಸಾಮ ಬಿನ್‌ ಲ್ಯಾಡೆನ್‌ ಒಪ್ಪಿಸಲು ನೈತಿಕ ಅಥವಾ ಧಾರ್ಮಿಕ ನೆಲೆಯಲ್ಲಿ ಅವಕಾಶವಿಲ್ಲ ಎಂದು ಪಾಕ್‌ ನಿಯೋಗಕ್ಕೆ ತಾಲಿಬಾನ್‌ ಸ್ಪಷ್ಟ ಮಾತುಗಳಲ್ಲಿ ತಿಳಿಸಿದೆ. ಯುದ್ಧ ತಪ್ಪಿಸುವ ನಿಟ್ಟಿನಲ್ಲಿ ಒಂದೇ ವಾರದಲ್ಲಿ ತಾಲಿಬಾನ್‌ ಜೊತೆ ಪಾಕಿಸ್ತಾನ ನಡೆಸುತ್ತಿರುವ ಎರಡನೇ ಮಾತುಕತೆ ಇದಾಗಿದೆ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X