ಅಮೆರಿಕನ್ನರು ಎಲ್ಲಿದ್ದಾರೆ? ಗೊಂದಲದಲ್ಲಿ ಆಪ್ಘನ್‌ನ ಬಂಡು ಬಣಗಳು
ನ್ಯೂಯಾರ್ಕ್ : ನಿಧಾನನೀತಿಯನ್ನು ಅನುಸರಿಸುತ್ತಿರುವ ಅಮೆರಿಕಾದ ಯುದ್ಧತಂತ್ರದ ಸುಳಿವೇ ಗೊತ್ತಾಗದೆ ಆಪ್ಘಾನಿಸ್ತಾನದ ಬಂಡು ಬಣಗಳ ನಾಯಕರು ಚಕಿತರಾಗಿದ್ದಾರೆ. ಆಪ್ಘಾನಿಸ್ತಾನದಲ್ಲಿನ ಆಡಳಿತಾರೂಢ ತಾಲಿಬಾನ್ ಸರ್ಕಾರದ ವಿರುದ್ಧದ ದಾಳಿಗೆ ತಮ್ಮ ಸಲಹೆ, ಸಹಾಯವನ್ನು ಅಮೆರಿಕ ಕೋರದಿರುವ ಬಗೆಗೆ ಇವರಿಗೆಲ್ಲ ಅಚ್ಚರಿ. ಜೊತೆಗೆ ತಮ್ಮ ನೆರವು ಪಡೆಯದಿದ್ದಲ್ಲಿ ಅಮೆರಿಕನ್ನರು ಗೆಲುವು ಸಾಧಿಸಲಾರರು ಎನ್ನುವ ವಿಶ್ವಾಸ.
ತಾಲಿಬಾನ್ ಮಿಲಿಟರಿ ಹಾಗೂ ಅದರ ಯುದ್ಧತಂತ್ರದ ಬಗ್ಗೆ ಪೂರ್ಣ ಮಾಹಿತಿಯಿಲ್ಲದೆ ಅಮೆರಿಕನ್ನರ ದಾಳಿ ಯಶಸ್ವಿಯಾಗುವುದು ಕಷ್ಟ. ಗೊತ್ತು ಗುರಿಯಿಲ್ಲದೆ ಬಾಂಬ್ ದಾಳಿಯ ಉಪಯೋಗವೂ ಅಷ್ಟಕ್ಕಷ್ಟೇ ಎಂದು ಬಂಡುಕೋರರ ಅಧಿಕೃತ ಪ್ರತಿನಿಧಿಗಳು ಹೇಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ವರದಿ ಮಾಡಿದೆ.
ನಾವಿಲ್ಲದೆ ಅಮೆರಿಕಾ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಒಕ್ಕೂಟದ ಜನರಲ್ ಬಾಬ ಖಾನ್ ಹೇಳಿರುವುದಾಗಿ ಪತ್ರಿಕೆಯ ವರದಿ ತಿಳಿಸಿದೆ.
ಗೆರಿಲ್ಲಾ ಕದನ ಕಷ್ಟ - ಬುಷ್
ಆಪ್ಘನಿಸ್ತಾನದ ಕಣಿವೆ ಕಂದರಗಳ ನಡುವೆ ತಾಲಿಬಾನ್ ಮಿಲಿಟರಿಯಾಂದಿಗೆ ಗೆರಿಲ್ಲಾ ಕದನ ಕಷ್ಟಕರವಾದುದು ಎನ್ನುವುದನ್ನು ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಒಪ್ಪಿಕೊಂಡಿದ್ದಾರೆ. ಕದನ ಕಷ್ಟ ಎನ್ನುವುದರ ಅರಿವು ನಮಗಿದೆ. ಆದರೆ, ಆಪ್ಘಾನಿಸ್ತಾನ ಹಾಗೂ ರಷ್ಯಾ ನಡುವಣ ತಿಕ್ಕಾಟದ ಸಂದರ್ಭದಲ್ಲಿ ಈ ಬಗೆಯ ಯುದ್ಧದ ಬಗೆಗೆ ನಾವು ಅನುಭವ ಹೊಂದಿದ್ದೇವೆ ಎಂದು ಬುಷ್ ಹೇಳಿದ್ದಾರೆ.
(ಏಜೆನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications