• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟೀಷ್‌ ಕೌನ್ಸಿಲ್‌ ಲೈಬ್ರರಿ ಆಧುನೀಕರಣ

By Staff
|

ಬೆಂಗಳೂರು: ಹೊಸ ಜಮಾನದ ಪರಿಣತರಿಗೆ ಅನುವಾಗುವಂತೆ ಬ್ರಿಟೀಷ್‌ ಕೌನ್ಸಿಲ್‌ ತನ್ನ ಕಚೇರಿ ಹಾಗೂ ಲೈಬ್ರರಿಗಳ ಸೇವೆಗೆ ಆಧುನಿಕತೆಯ ಮೆರುಗನ್ನು ನೀಡಿದೆ. ಪರಿಣಾಮವಾಗಿ ಅಖಿಲ ಭಾರತ ಬ್ರಿಟೀಷ್‌ ಕೌನ್ಸಿಲ್‌ ಲೈಬ್ರರಿ ಕೆಟಲಾಗ್‌ ಇದೀಗ ನಿಮ್ಮ ಕೈ ಅಳತೆಯಲ್ಲೇ ಲಭ್ಯ.

ಭಾರತದಲ್ಲಿನ ಬ್ರಿಟೀಷ್‌ ಕೌನ್ಸಿಲ್‌ ಲೈಬ್ರರಿಯ ಎಲ್ಲ 13 ಶಾಖೆಗಳಿಗೂ ಈಗ ಅಂತರ್ಜಾಲ ಬಂಧ ಪ್ರಾಪ್ತಿ. www.bclindia.org ಮೂಲಕ ಪುಸ್ತಕಗಳ ಶಿರೋನಾಮೆ, ವಿಡಿಯೋಗಳು, ಸಿಡಿಗಳು.. ಇನ್ನಿತರೆ ಎಲ್ಲ ವೂ ಕ್ಲಿಕ್ಕಿಸಿದಾಗ ಕಣ್ಣೆದುರು. ಇದೊಂದು ಜ್ಞಾನಭಂಡಾರ, ಮಾಹಿತಿಯ ಬ್ಯಾಂಕು. ಈ ಜಾಲದಲ್ಲಿ ಎರಡೂವರೆ ಲಕ್ಷ ಕ್ಕೂ ಮಿಕ್ಕ ಐಟಂಗಳು. 30 ಸಾವಿರಕ್ಕೂ ಹೆಚ್ಚಿನ ಪುಸ್ತಕ/ವಿಡಿಯಾ ಮತ್ತು ಸಿಡಿಗಳನ್ನು ಪ್ರತಿವರ್ಷ ಸೇರಿಸಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕೆಟಲಾಗ್‌ ಪರಿಷ್ಕರಣೆಗೆ ಒಳಪಡುತ್ತದೆ.

ನೀವು ದಾರಿ ತಪ್ಪುವ ಪ್ರಶ್ನೆಯೇ ಇಲ್ಲಿಲ್ಲ

ಪುಸ್ತಕದ ಶಿರೋನಾಮೆ, ಲೇಖಕನ ಹೆಸರು, ವಿಷಯ ಇನ್ನಾವುದೇ ಮಾಹಿತಿಯ ತುಣುಕು ಗೊತ್ತಿದ್ದರೂ ಸಾಕು, ಮಾಹಿತಿ ಅಂಗೈನೆಲ್ಲಿ . ವಿಳಾಸಗಳು, ದೂರವಾಣಿ ಸಂಖ್ಯೆ, ಫ್ಯಾಕ್ಸ್‌, ಇ ಮೇಲ್‌, ಸದಸ್ಯತ್ವ, ಕೆಲಸದ ವೇಳೆ, ಇತ್ಯಾದಿ ವಿವರಗಳು ವೆಬ್‌ಸೈಟ್‌ನಲ್ಲುಂಟು.

ಹೆಚ್ಚು ಜನರನ್ನು ತಲುಪುವುದು ಬ್ರಿಟೀಷ್‌ ಕೌನ್ಸಿಲ್‌ ಗುರಿ

A new British Council in the new India - ಎನ್ನುವ ಪ್ರಾಸ್ಪೆಕ್ಟಸ್‌ನ್ನು ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಮಾಡಿದ ಇಯೂನಿಸ್‌ ಕ್ರೂಕ್‌ (ದಕ್ಷಿಣ ಭಾರತ ಬ್ರಿಟೀಷ್‌ ಕೌನ್ಸಿಲ್‌ನ ನಿರ್ದೇಶಕಿ) ಹಾಗೂ ಜಯರಾಜನ್‌ ( ಬ್ರಿಟೀಷ್‌ ಕೌನ್ಸಿಲ್‌ನ ಭಾರತದಲ್ಲಿನ ಲೈಬ್ರರಿಗಳು ಹಾಗೂ ಮಾಹಿತಿ ಸೇವೆಗಳ ಮುಖ್ಯಸ್ಥ) ಅವರು, ಬ್ರಿಟೀಷ್‌ ಕೌನ್ಸಿಲ್‌ನ ಸೇವೆಗಳು ನವೀಕೃತಗೊಂಡಿರುವುದನ್ನು ವಿವರಿಸಿದರು. ಯಥಾ ಪ್ರಕಾರ ಆಧುನೀಕರಣದಲ್ಲೂ ಬೆಂಗಳೂರಿಗೆ ಮೊದಲ ಸ್ಥಾನ.

ಕ್ರೂಕ್‌ ಹೇಳುವಂತೆ, ಆಧುನೀಕರಣದ ಪ್ರಯತ್ನಗಳು ಭಾರತದೊಂದಿಗಿನ ಸಂಬಂಧವನ್ನು ಬ್ರಿಟನ್‌ ಆಧುನೀಕರಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷ್ಯ. ಮಾಹಿತಿಗೆ ಸಂಬಂಧಿಸಿದಂತೆ ಜನರನ್ನು ಕಲೆ ಹಾಕುವ ಕಾರ್ಯದಲ್ಲಿ ಹಿಂದೆಂದಿಗಿಂತ ಬ್ರಿಟೀಷ್‌ ಕೌನ್ಸಿಲ್‌ ಹೆಚ್ಚು ಸಕ್ರಿಯವಾಗಿದೆ ಎನ್ನುತ್ತಾರವರು. ಅಂತರ್ಜಾಲದ ಮಂದಿಗಾಗಿ ಹಾಗೂ ಬದಲಾಗುತ್ತಿರುವ ಜೀವನ ಶೈಲಿಗನುಗುಣವಾಗಿ ಆಧುನಿಕ ಗ್ರಂಥಾಲಯಗಳನ್ನು ಪರಿಚಯಿಸಲು ಭಾರತವನ್ನು ಬ್ರಿಟೀಷ್‌ ಕೌನ್ಸಿಲ್‌ ಆರಿಸಿಕೊಂಡಿದೆ ಎನ್ನುತ್ತಾರೆ ಜಯರಾಜನ್‌.

ಜನವರಿಯಲ್ಲಿ ಇಂಗ್ಲೆಂಡ್‌-ಭಾರತ ವಿಜ್ಞಾನ ಹಬ್ಬ

ಬಯೋಟೆಕ್ನಾಲಜಿ, ಡಿಜಿಟಲ್‌ ಕಮ್ಯುನಿಕೇಶನ್ಸ್‌ ಮತ್ತು ಬಯೋಮೆಡಿಕಲ್‌ ರಿಸರ್ಚ್‌ ಸೇರಿದಂತೆ ವಿವಿಧ ವಿಷಯಗಳ ಕುರಿತು ಬರುವ ಜನವರಿಯಲ್ಲಿ ಇಂಗ್ಲೆಂಡ್‌-ಭಾರತ ವಿಜ್ಞಾನ ಹಬ್ಬ ಬೆಂಗಳೂರಿನಲ್ಲಿ ನಡೆಯಲಿದೆ.

ವಿಜ್ಞಾನದ ಹಬ್ಬ ಮಾತ್ರವಲ್ಲದೆ ಇತರ ಕಾರ್ಯಕ್ರಮಗಳನ್ನೂ ಬ್ರಿಟೀಷ್‌ ಕೌನ್ಸಿಲ್‌ ಹಮ್ಮಿಕೊಂಡಿದೆ. ನೃತ್ಯ ಹಬ್ಬ , ರಂಗಭೂಮಿ ಯುವ ನಿರ್ದೇಶಕರಿಗೆ ಕಮ್ಮಟ ಮುಂತಾದ ಸೃಜನಶೀಲ ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಿದೆ.

ಬೆಂಗಳೂರಿನಿಂದ ಪ್ರಾರಂಭ, ಯಾತ್ರೆ ಇನ್ನೂ ಇದೆ..

ನಾಲ್ಕು ಮೆಟ್ರೋಗಳ ಜೊತೆಗೆ ಬೆಂಗಳೂರು, ಹೈದರಾಬಾದ್‌, ತಿರುವನಂತಪುರಂ, ಅಹಮದಾಬಾದ್‌, ಭೂಪಾಲ್‌, ಚಂಡೀಗರ್‌ ಹಾಗೂ ಪುಣೆಗಳಲ್ಲಿ ಕೂಡ ಬ್ರಿಟೀಷ್‌ ಕೌನ್ಸಿಲ್‌ ಕಚೇರಿಗಳಿವೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಕಲ್ಚರಲ್‌ ರಿಲೇಷನ್ಸ್‌ ಸಹಯೋಗದಲ್ಲಿ ಈ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ಬೆಂಗಳೂರಿನ ಕಚೇರಿಯನ್ನು ಆಧುನೀಕರಿಸಿದ ನಂತರ ಮುಂಬಯಿ ಮತ್ತು ಕೋಲ್ಕತಾಗಳತ್ತ ಬ್ರಿಟೀಷ್‌ ಕೌನ್ಸಿಲ್‌ ತನ್ನ ಗಮನ ಹರಿಸಿದೆ. ದೆಹಲಿಯಲ್ಲಿನ ಕಚೇರಿಯಲ್ಲಿ ಈಗಾಗಲೇ ಆಧುನೀಕರಣ ಪ್ರಯತ್ನಗಳು ನಡೆಯುತ್ತಿವೆ. ಇನ್ನೆರಡು ವರ್ಷಗಳಲ್ಲಿ ಭಾರತದ ಎಲ್ಲ ಕೇಂದ್ರಗಳನ್ನೂ ಸುಸಜ್ಜಿತಗೊಳಿಸುವುದು ಕೌನ್ಸಿಲ್‌ನ ಉದ್ದೇಶ. ಶುಭವಾಗಲಿ ಎನ್ನೋಣವಾ!!

(ಇನ್ಫೋ ಇನ್‌ಸೈಟ್‌)

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : sumathi.jayaraman@in.britishcouncil.org or ih.jahagirdar@in.britishcouncil.org

ಬಿಸಿಎಲ್‌: ಬೆಂಗಳೂರಿನಲ್ಲಿ ಈ ವರ್ಷದ ಕಾರ್ಯಕ್ರಮ

Click here to go to topಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more