ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಯೋಜನಾ ವೆಚ್ಚ 8,941.56 ಕೋಟಿ ರುಪಾಯಿಗಳಿಗೆ ನಿಗದಿ

By Staff
|
Google Oneindia Kannada News

ನವದೆಹಲಿ: 8,941.56 ಕೋಟಿ ರುಪಾಯಿಗಳಿಗೆ 2001-2002 ಇಸವಿಯ ರಾಜ್ಯ ಯೋಜನಾ ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಇದರಿಂದಾಗಿ ರಾಜ್ಯ ಯೋಜನಾ ಗಾತ್ರ ಪ್ರತಿಶತ 23.3 ರಷ್ಟು ಪ್ರಗತಿ ಸಾಧಿಸಿದಂತಾಗಿದೆ.

ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಗುರುವಾರ ನಡೆಸಿದ ಸುದೀರ್ಘ ಚರ್ಚೆಯ ನಂತರ ರಾಜ್ಯ ಯೋಜನಾ ಗಾತ್ರದ ವೆಚ್ಚವನ್ನು 8,941.56 ಕೋಟಿ ರುಪಾಯಿಗಳಿಗೆ ಅಂತಿಮಗೊಳಿಸಲಾಯಿತು. ಈ ಮೊತ್ತ ಕಳೆದ ವರ್ಷ 7250 ಕೋಟಿ ರುಪಾಯಿಗಳಷ್ಟಿತ್ತು .

ಯೋಜನಾ ವೆಚ್ಚದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೇ.31.9 ರಷ್ಟು ಹಣಕಾಸನ್ನು ನೀರಾವರಿಗೆ ಮೀಸಲಿಟ್ಟಿರುವ ಮುಖ್ಯಮಂತ್ರಿಗಳ ನಿಧಾರದ ಕುರಿತು ಕೆ.ಸಿ.ಪಂತ್‌ ಸಂತೋಷ ವ್ಯಕ್ತಪಡಿಸಿದರು. ಆದರೆ, ರಾಜ್ಯದಲ್ಲಿ ನ ವಿದ್ಯುತ್‌ ಪರಿಸ್ಥಿತಿಯ ಬಗೆಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪಂತ್‌ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 2340.1 ಕೋಟಿ ರುಪಾಯಿ ನಷ್ಟವನ್ನು ವಿದ್ಯುತ್‌ ವಲಯ ಅನುಭವಿಸಿದೆ ಎಂದರು. ರೈತರಿಗೆ ಅಲ್ಪ ಶುಲ್ಕದಲ್ಲಿ ವಿದ್ಯುತ್‌ ಒದಗಿಸಲು ಇ್ತತೀಚೆಗೆ ಜರುಗಿದ ಮುಖ್ಯಮಂತ್ರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಕರ್ನಾಟಕ ಈಡೇರಿಸಲು ವಿಫಲವಾಗಿರುವುದಾಗಿ ಪಂತ್‌ ವಿಷಾದಿಸಿದರು.

ವಿವಿಧ ಕ್ಷೇತ್ರಗಳಿಗೆ ನಿಗದಿಪಡಿಸಿರುವ ಹಣ-

ವಿದ್ಯುತ್‌ ಕ್ಷೇತ್ರಕ್ಕೆ ಶೇ.11.1,
ನೀರು ಪೂರೈಕೆ, ವಸತಿ ಹಾಗೂ ನಗರಾಭಿವೃದ್ಧಿಗೆ ಶೇ.17.3
ಸಾರಿಗೆಗೆ ಶೇ.9.2
ಶಿಕ್ಷಣಕ್ಕೆ 6.3

ಉದ್ದೇಶಿದ ವೆಚ್ಚಕ್ಕಿಂತ ದೊಡ್ಡದಾದ ಯೋಜನಾಗಾತ್ರ

ಯೋಜನಾವೆಚ್ಚ ಇದೇ ಮೊದಲಬಾರಿಗೆ ಉದ್ದೇಶಿತ ವೆಚ್ಚಕ್ಕಿಂತ 353.28 ಕೋಟಿ ರು.ಗಳಷ್ಟು ಹೆಚ್ಚಿರುವುದು ವಿಶೇಷ. ಉದ್ದೇಶಿತ ಯೋಜನೆ 8588.28 ಕೋಟಿ ರು. ಇತ್ತಾದರೂ, ಆಯೋಗ 8,941.56 ಕೋಟಿ ರುಪಾಯಿಗಳಿಗೆ ಯೋಜನಾ ವೆಚ್ಚವನ್ನು ಅಂತಿಮಗೊಳಿಸಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X