ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಅಮೆರಿಕ, ಯುಕೆ ಟಿಕೆಟ್‌ ರದ್ದಾದೀತು ಏರ್‌ ಇಂಡಿಯಾ ಸಂಪರ್ಕಿಸಿ

By Staff
|
Google Oneindia Kannada News

ಬೆಂಗಳೂರು : ಸೆಪ್ಟೆಂಬರ್‌ 12ನೇ ತಾರೀಖಿಗೆ ಮುನ್ನ ತನ್ನ ವಿಮಾನಗಳಲ್ಲಿ ಅಮೆರಿಕಾ ಮತ್ತು ಯು.ಕೆ. ಪ್ರಾಂತ್ಯಗಳಿಗೆ ತೆರಳಲು ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರು, ಆ ಟಿಕೆಟ್‌ಗಳನ್ನು ಉಳಿಸಿಕೊಳ್ಳಲು ಹಾಗೂ ಅದೇ ದಿನ ಪ್ರಯಾಣಿಸಲು ಇಚ್ಛಿಸಿದಲ್ಲಿ ಬೆಂಗಳೂರಿನ ಕಚೇರಿಯನ್ನು ಸಂಪರ್ಕಿಸುವಂತೆ ಏರ್‌ ಇಂಡಿಯಾ ಸೂಚಿಸಿದೆ.

ಅಮೆರಿಕದಲ್ಲಿ ಸೆ.11ರಂದು ನಡೆದ ದುರ್ಘಟನೆಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಸೆ.12ಕ್ಕೆ ಮೊದಲು ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ಜೆ.ಸಿ.ರಸ್ತೆಯ ಯೂನಿಟಿ ಕಟ್ಟಡದಲ್ಲಿರುವ ಏರ್‌ ಇಂಡಿಯಾ ಕಚೇರಿಯನ್ನು ಸಂಪರ್ಕಿಸಿ ಸ್ಥಳೀಯ ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಏರ್‌ಇಂಡಿಯಾದ ಕರ್ನಾಟಕ ವಲಯ ಮೇನೇಜರ್‌ ಎಲ್‌. ಕಪೂರ್‌ ತಿಳಿಸಿದ್ದಾರೆ.

ಪ್ರಯಾಣಿಕರು 227 7747ರಿಂದ 54ರವರೆಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸಹ ಅವರು ಕೋರಿದ್ದಾರೆ. ಸೆ.12ಕ್ಕೆ ಮೊದಲು ಟಿಕೆಟ್‌ ಕಾಯ್ದಿರಿಸಿರುವ ಪ್ರಯಾಣಿಕರು ಪ್ರಯಾಣದ ದಿನಕ್ಕೆ ಕನಿಷ್ಠ 5 ದಿನಗಳ ಮೊದಲು ಏರ್‌ ಇಂಡಿಯಾ ಕಚೇರಿ ಸಂಪರ್ಕಿಸಿ ತಮ್ಮ ಟಿಕೆಟ್‌ಗಳನ್ನು ಪುನರ್‌ ಸ್ಥಿರೀಕರಿಸಿಕೊಳ್ಳದಿದ್ದರೆ, ಅಂತಹ ಟಿಕೆಟ್‌ಗಳನ್ನು ರದ್ದುಪಡಿಸುವುದಾಗಿಯೂ ಏರ್‌ ಇಂಡಿಯಾ ತಿಳಿಸಿದೆ.

ಯು.ಕೆ. ಮತ್ತು ಅಮೆರಿಕೆಗೆ ತೆರಳಲು ಏರ್‌ ಇಂಡಿಯಾ ಮೂಲಕ ಸೆಪ್ಟೆಂಬರ್‌ನಿಂದ ನವೆಂಬರ್‌ 30ರವರೆಗೆ ಟಿಕೆಟ್‌ ಕಾಯ್ದಿರಿಸಿರುವವರು ಕಡ್ಡಾಯವಾಗಿ ಏರ್‌ ಇಂಡಿಯಾ ಕಚೇರಿಯನ್ನು ಸಂಪರ್ಕಿಸಲೇ ಬೇಕು ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ದೂರವಾಣಿ, ಫ್ಯಾಕ್ಸ್‌ ಹಾಗೂ ಇ ಮೇಲ್‌ ವಿವರ :

ಬೆಂಗಳೂರಿನ ಫ್ಯಾಕ್ಸ್‌ ಸಂಖ್ಯೆ - 2273300/2271017 email ID : [email protected], [email protected]. ಮಂಗಳೂರು ಕಚೇರಿ ವಿಳಾಸ - ಏರ್‌ ಇಂಡಿಯಾ, ಕೆಳ ಅಂತಸ್ತು, ಸ್ವಾಗತ್‌ ಹೋಟೆಲ್‌ ಪಂಚಮಹಲ್‌, 4-9-822, ಕೋಡಿಯಾಲಬೈಲ್‌, ಮಂಗಳೂರು - 575003, ದೂರವಾಣಿ ಸಂಖ್ಯೆ - 493875 ಮತ್ತು ಫ್ಯಾಕ್ಸ್‌ - 496809.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X