ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಡೆನ್‌ನ ಕಸದಬುಟ್ಟಿಗೆಸೆಯಿರಿ- ಬುಷ್‌ಗೆ ಶಾಲಾ ವಿದ್ಯಾರ್ಥಿಗಳ ಪತ್ರ

By Staff
|
Google Oneindia Kannada News

ನವದೆಹಲಿ : ‘ಆ ಸುದ್ದಿಯನ್ನು ಕೇಳಿದಾಗ ನನಗೆ ತುಂಬಾ ನೋವಾಯಿತು. ದಯವಿಟ್ಟು ಆ ಪಾತಕಿಯನ್ನು ಬಲಿಹಾಕಿ. ಭಾರತ ನಿಮ್ಮ ಜೊತೆಗಿದೆ. ಒಸಾಮ ಬಿನ್‌ ಲ್ಯಾಡೆನ್‌ನನ್ನು ನೀವು ಖಂಡಿತವಾಗಿಯೂ ಕಸದ ಬುಟ್ಟಿಗೆ ಎಸೆಯುವ ಕುರಿತು ನನಗೆ ನಂಬಿಕೆಯಿದೆ’.

ತನಯ್‌ ಚಕ್ರವರ್ತಿ ಎನ್ನುವ 6 ವರ್ಷದ ಹುಡುಗ ಅಮೆರಿಕಾದ ಅಧ್ಯಕ್ಷ ಜಾರ್ಜ್‌ ಬುಷ್‌ ಅವರಿಗೆ ಬರೆದ ಪತ್ರದ ಸಾಲುಗಳಿವು. ದೆಹಲಿಯ ಶಾಲೆಯಾಂದರಲ್ಲಿ ಓದುತ್ತಿದ್ದಾನೆ. ತನಯ್‌ ಮಾತ್ರವಲ್ಲ, ಆತನ ಸಹಪಾಠಿಗಳು ಕೂಡ ಅಂತರರಾಷ್ಟ್ರೀಯ ಭಯೋತ್ಪಾದಕತೆಯ ವಿರುದ್ಧ ಹೋರಾಡಲು ಕೈಗೂಡಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದ್ದಾರೆ.

ತನಯ್‌ ಹಾಗೂ ಗೆಳೆಯರಿಗೆ ಮೊನ್ನೆ ನ್ಯೂಯಾರ್ಕ್‌ ಹಾಗೂ ವಾಷಿಂಗ್ಟನ್‌ಗಳಲ್ಲಿ ನಡೆದ ಉಗ್ರರ ಕೃತ್ಯಗಳನ್ನು ಟೀವಿಯಲ್ಲಿ ಕಂಡಾಗ ದುಃಖ ಉಮ್ಮಳಿಸಿ ಬಂತು. ಆ ದುಸ್ವಪ್ನ ಈಗಲೂ ಕಾಡುತ್ತಿದೆ. ಅದೇನು ಸಣ್ಣ ಗಾಯವೇ? ಮಾನವೀಯತೆಗೆ ಸೀಮೆ, ವಯಸ್ಸು , ಲಿಂಗಭೇದ ವಿದ್ದೀತೆ?

ದೇವರು ನಿಮಗೆ ಒಳ್ಳೆಯದು ಮಾಡಲಿ

ದೆಹಲಿಯ ಬಿರ್ಲಾ ವಿದ್ಯಾ ನಿಕೇತನ್‌ ಶಾಲೆಯ ವಿದ್ಯಾರ್ಥಿಗಳು ಅಮೆರಿಕನ್ನರಿಗೆ ತಮ್ಮ ಸಂತಾಪಗಳನ್ನು ಸೂಚಿಸಿ ಪತ್ರಗಳನ್ನು ಬರೆದಿದ್ದಾರೆ, ಶುಭಾಶಯ ಪತ್ರಗಳನ್ನು ಕಳುಹಿಸಿದ್ದಾರೆ. ಪ್ರತೀಕಾರ ಕೈಗೊಳ್ಳುವಂತೆ ಅಮೆರಿಕಾದ ಅಧ್ಯಕ್ಷರನ್ನು ಒತ್ತಾಯಿಸಿದ್ದಾರೆ, ಭಯೋತ್ಪಾದಕ ದಮನ ಕೃತ್ಯದಲ್ಲಿ ಯಶಸ್ವಿಯಾಗಿರೆಂದು ಹಾರೈಸಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿಯಾಬ್ಬ- ಈ ಸುದ್ದಿ ಕೇಳಿದ ನಂತರ ನನಗೆ ಆಡುವುದರಲ್ಲಿ ಹಾಗೂ ವಿನೋದದಲ್ಲಿ ಆಸಕ್ತಿಯೇ ಕಳೆದುಹೋಗಿದೆ. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬರೆದಿದ್ದಾನೆ.

ಭಯೋತ್ಪಾದಕ ರಹಿತ ವಿಶ್ವವನ್ನು ಸೂಚಿಸುವ ಚಿತ್ರಪತ್ರ ಕಳುಹಿಸಿದ್ದಾಳೆ, ಅಂಬಿಕಾ ಸೇಥಿ. ವಿವಿಧ ರಾಷ್ಟ್ರಗಳ ಧ್ವಜಗಳು ಹಾರಾಡುತ್ತಿವೆ. ಜಗತ್ತಿನಲ್ಲೆಲ್ಲ ಶಾಂತಿ ಅನ್ನುವುದು ಆಕೆಯ ಹಾರೈಕೆ. ಆಕಾಂಕ್ಷ ಮಹೇಶ್ವರಿ ಎನ್ನುವ ಮತ್ತೊಬ್ಬ ವಿದ್ಯಾರ್ಥಿನಿ ದುರ್ದೈವಿಗಳ ಆತ್ಮಕ್ಕೆ ಶಾಂತಿ ಕೋರಿದ್ದಾನೆ.

ನಗುವ ಉಳಿಸಿಕೊಂಡಿರಿ, ನಾವು ಜೊತೆಗಿದ್ದೇವೆ

ವಿದ್ಯಾರ್ಥಿಗಳು ಪ್ರಚಲಿತ ಘಟನೆಗಳ ಬಗ್ಗೆ ತೆರೆದ ಕಣ್ಣವರಾಗಿದ್ದಾರೆ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದಕತೆಯ ವಿರುದ್ಧ ಆತಂಕ ಹೊಂದಿದ್ದಾರೆ ಎನ್ನುತ್ತಾರೆ ಶಿಕ್ಷಕರಾದ ಪಿಯಾ ನರಂಗ್‌. ದುರಂತದ ದಿನ ಅಮಾಯಕರ ಮರಣಕ್ಕೆ ಮಕ್ಕಳು ಸಾಮೂಹಿಕವಾಗಿ ಪ್ರತಿಕ್ರಿಯಿಸಿದ್ದನ್ನು ನಾನು ಕಂಡಿರುವೆ ಎನ್ನುತ್ತಾರವರು. ಶಾಲೆಯ ಮಕ್ಕಳು ಹಾಗೂ ಶಾಲಾಡಳಿತ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಪತ್ರಗಳನ್ನು ದೆಹಲಿಯಲ್ಲಿನ ಅಮೆರಿಕ ರಾಯಭಾರ ಕಚೇರಿಗೆ ತಲುಪಿಸಿದ್ದಾರೆ. ಓರ್ವ ವಿದ್ಯಾರ್ಥಿ ಬರೆದಿರುವ ಕೆಳಗಿನ ಸಾಲುಗಳು ನಮ್ಮ ನಿಮ್ಮೆಲ್ಲರ ಮಾತುಗಳಂತೆಯೂ ಇವೆ-

ನೀವು ಒಂಟಿಗರಲ್ಲ
ನಾವು ಜೊತೆಗಿದ್ದೇವಲ್ಲ
ನಗುವನ್ನು ಉಳಿಸಿಕೊಂಡಿರಿ
ಬದುಕನ್ನು ಮತ್ತೆ ಪ್ರಾರಂಭಿಸಿ.
- ನಿಮ್ಮ ಹಾರೈಕೆಯೂ ಇದೇ ತಾನೇ?

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X