Get Updates
Get notified of breaking news, exclusive insights, and must-see stories!

ಆಂಧ್ರದ ಮಾಜಿ ಮುಖ್ಯಮಂತ್ರಿ ಕೋಟ್ಲಾ ವಿಜಯ ಭಾಸ್ಕರ್‌ರೆಡ್ಡಿ ಇನ್ನಿಲ್ಲ

ಹೈದರಾಬಾದ್‌ : ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ ಗುರುವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಕಾರಣ ಕಳೆದ ತಿಂಗಳು ಅವರನ್ನು ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ದೀರ್ಘ ಕಾಲದ ಅಸ್ವಸ್ಥತೆಯ ನಂತರ ಗುರುವಾರ ಆಸ್ಪತ್ರೆಯಲ್ಲೇ ಅವರು ಕೊನೆಯುಸಿರೆಳೆದರು. ಲೋಕಸಭೆಗೆ ಆರು ಬಾರಿ ಆಯ್ಕೆಯಾಗಿರುವ ವಿಜಯ ಭಾಸ್ಕರ್‌ ರೆಡ್ಡಿ, ಸಿಡಬ್ಲ್ಯುಸಿ ಸದಸ್ಯರಾಗಿದ್ದರು. ಪಕ್ಷದ ಶಿಸ್ತು ಕ್ರಿಯಾ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ರಾಜಕಾರಣದಲ್ಲಿ ಕಾಂಗ್ರೆಸ್‌ನಲ್ಲಿ ಹೆಸರು ಮಾಡಿದ ಇವರು ಎರಡು ಅವಧಿಯಲ್ಲಿ (1982-82 ಮತ್ತು 1992-94) ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು.

ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಗಂಡು ಮಕ್ಕಳ ಪೈಕಿ ಕೆ.ಸೂರ್ಯಪ್ರಕಾಶ್‌ ಪ್ರಸ್ತುತ ಕರ್ನೂಲ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು. ಮಾಜಿ ಸಂಸದರೂ ಹೌದು. ರಾಯಲಸೀಮಾ ಶಕ್ತಿವಂತ ಎಂದು ರಾಜಕೀಯ ವಲಯದಲ್ಲಿ ಗುರ್ತಿಸಿಕೊಂಡ ವಿಜಯ ಭಾಸ್ಕರ್‌ ರೆಡ್ಡಿ ಅವರಿಗೆ ಆಂಧ್ರಪ್ರದೇಶದಲ್ಲಿ ಶ್ರದ್ಧಾಂಜಲಿಯ ಮಹಾಪೂರ ಹರಿದುಬರುತ್ತಿದೆ.

ಚಂದ್ರಬಾಬು ಶ್ರದ್ಧಾಂಜಲಿ : ಕೋಟ್ಲಾ ವಿಜಯ ಭಾಸ್ಕರ್‌ ರೆಡ್ಡಿ ಸಾವನ್ನು ಒಂದು ಶಾಕ್‌ ಎಂದು ಹೇಳಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇಶ ಒಬ್ಬ ದಕ್ಷ ಆಡಳಿತಕಾರನನ್ನು ಕಳಕೊಂಡಿದೆ ಎಂದಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+