Get Updates
Get notified of breaking news, exclusive insights, and must-see stories!

ಜೋಗದ ಸಿರಿ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಇಲ್ಲ

Jog Fallsಬೆಂಗಳೂರು : ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌, ರ್ಯಾಕೆಟ್‌ಗಳ ಅರ್ಭಟವೂ ಕ್ಷೀಣಿಸಿತ್ತು. ರಾಜ್ಯದಲ್ಲಿ ಹಿಂಗಾರು ಚುರುಕಾದ ಬಳಿಕ ಈಹೊತ್ತು ಜೊಗ ಜಲಪಾತ ಕೊಂಚ ಮೈದುಂಬಿ ಧುಮ್ಮಿಕ್ಕುತ್ತಿದೆ.

ಆದರೆ, ಇದನ್ನು ನೋಡುವ ಭಾಗ್ಯ ಪ್ರವಾಸಿಗರಿಗೆ ಇಲ್ಲ ಅಷ್ಟೇ. ಅಮೆರಿಕದಲ್ಲಿ ನಡೆದ ವಿಧ್ವಂಸಕ ದಾಳಿಯ ಕರಿನೆರಳು ಜೋಗಕ್ಕೂ ಮುಸುಕಿದೆ. ಭದ್ರತೆಯ ದೃಷ್ಟಿಯಿಂದ ಜೋಗದ ರಮಣೀಯತೆಯ ಸವಿಯಲು ಪ್ರವಾಸಿಗರಿಗೆ ತಡೆಯಾಡ್ಡಲಾಗಿದೆ.

ಈ ವಿಷಯವನ್ನು ಕರ್ನಾಟಕ ವಿದ್ಯುತ್‌ ನಿಗಮದ ವಕ್ತಾರರು ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿಗಳು, ಪೂರ್ವಾನುಮತಿ ಪಡೆದ ವಿದೇಶೀ ಪ್ರವಾಸಿಗರು ಹಾಗೂ ಕೆಲವು ಗಣ್ಯರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ. ಸಾಮಾನ್ಯ ಪ್ರವಾಸಿಗರಿಗೆ ಮಾತ್ರ ಅನಿರ್ದಿಷ್ಟಾವಧಿವರೆಗೆ ಪ್ರವೇಶಾವಕಾಶ ನಿಷೇಧಿಸಲಾಗಿದೆ.

ವಿದ್ಯಾರ್ಥಿಗಳಿಗೆ ರಿಯಾಯಿತಿ : ಶೈಕ್ಷಣಿಕ ಪ್ರವಾಸಕ್ಕಾಗಿ ಜೋಗ ಮತ್ತು ಶರಾವತಿ ವಿದ್ಯುತ್‌ ಯೋಜನೆಯ ವೀಕ್ಷಣೆಗೆ ಬರುವ ಮಕ್ಕಳಿಗೆ ರಿಯಾಯಿತಿ ನೀಡಲಾಗಿದೆ. ಆದರೆ, ಇವರು, ತಮ್ಮ ಶಾಲೆಯ ಮುಖ್ಯಸ್ಥರಿಂದ ಪತ್ರತಂದು, ಪೂರ್ವಾನುಮತಿ ಪಡೆಯಬೇಕು. ಆದರೆ, ವಿದ್ಯಾರ್ಥಿಗಳಿಗೆ ಕೂಡ ಟ್ರಾಲಿಯಲ್ಲಿ ಕೆಳಗಿಳಿದು ವಿದ್ಯುತ್‌ ಘಟಕ ವೀಕ್ಷಿಸುವ ಅವಕಾಶ ನಿರಾಕರಿಸಲಾಗಿದೆ.

ಇದೇ ರೀತಿ ರಾಯಚೂರು ಥರ್ಮಲ್‌ ವಿದ್ಯುತ್‌ ಘಟಕ, ಕಾಳಿಯೋಜನೆ ಮತ್ತು ವಾರಾಹಿಗಳಿಗೂ ನಿರ್ಬಂಧ ಅನ್ವಯಿಸುತ್ತದೆ. ಗೃಹಇಲಾಖೆಯಿಂದ ಅನುಮತಿಪಡೆದ ಸಾಗರೋತ್ತರ ವಿದ್ಯಾರ್ಥಿಗಳಿಗೆ ಜೋಗದ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ಕೆಪಿಸಿಯ ವಕ್ತಾರರು ರಾಜ್ಯದ ಆಂಗ್ಲ ಪತ್ರಿಕೆಯಾಂದಕ್ಕೆ ತಿಳಿಸಿದ್ದಾರೆ. ಈ ಮಧ್ಯೆ ಏಷ್ಯಾದ ಪ್ರಪ್ರಥಮ ಜಲವಿದ್ಯುತ್‌ ಯೋಜನೆಯಾದ ಶಿಂಷಾ ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲೂ ಬಿಗಿ ಭದ್ರತೆಗೆ ಸೂಚಿಸಲಾಗಿದೆ.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+