ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೂರು ತಾಲ್ಲೂಕಿನ ಟೇಕಲ್‌ ಹೋಬಳಿಯಲ್ಲಿ 15 ಮನೆ ಕುಸಿತ

By Staff
|
Google Oneindia Kannada News

ಟೇಕಲ್‌ : ಕಳೆದೆರಡು ದಿನಗಳಿಂದ ಪ್ರತಿ ರಾತ್ರಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಾಲೂರು ತಾಲ್ಲೂಕಿನ ಟೇಕಲ್‌ ಹೋಬಳಿಯಲ್ಲಿ 15 ಮನೆಗಳು ಕುಸಿದು ಬಿದ್ದಿವೆ.

ಶೆಟ್ಟಿಹಳ್ಳಿಯಲ್ಲಿ 2, ಕೋಮನಹಳ್ಳಿಯಲ್ಲಿ 2, ಬನಹಳ್ಳಿಯಲ್ಲಿ 5, ಕೆಜಿ ಹಟ್ಟಿಯಲ್ಲಿ 2 ಹಾಗೂ ಹುಣಸೇಕೋಟೆಯಲ್ಲಿ 4 ಮನೆಗಳು ಬಿದ್ದಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇನ್ನೂ ಕೆಲವು ಮನೆಗಳು ಬಿರುಕು ಬಿಟ್ಟಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಮನೆ ಕಳಕೊಂಡವರು ಹಳ್ಳಿಗಳ ಶಾಲಾ ಕಟ್ಟಡದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದರಿಂದ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X