Get Updates
Get notified of breaking news, exclusive insights, and must-see stories!

ಬ್ಯಾಂಡ್‌ವಿಡ್ತ್‌ನಲ್ಲಿ ಬಾಂಬೆಯನ್ನು ಹಿಂದೆ ಹಾಕಿದ ಬೆಂಗಳೂರು

ಬೆಂಗಳೂರು : ಪರ್ವೇಸಿವ್‌ ಕಂಪ್ಯೂಟಿಂಗ್‌ (ವಿಸ್ತುತ ಗಣಕೀಕರಣ) ವಿಧಾನದಿಂದ ಇ - ಮೇಲ್‌ ಅನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಬಳಸುವ ಅವಕಾಶ ಇದೆ ಎಂದು ವಿಪ್ರೋ ಅಧ್ಯಕ್ಷ ಅಜೀಮ್‌ ಪ್ರೇಮ್‌ಜೀ ತಿಳಿಸಿದ್ದಾರೆ.

ವಿಸ್ತುತ ಗಣಕೀಕರಣ ಕುರಿತು ಸಿಐಐ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ಚಲನಚಿತ್ರ ಟಿಕೆಟ್‌ ಕಾದಿರಿಸಲು, ಹವಾಮಾನ ವರದಿ ತಿಳಿಯಲು , ವಾಹನ ಸಂಚಾರ ನಿಯಂತ್ರಿಸಲು ಈ ವಿಧಾನ ಬಳಸಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಾಹಿತಿ ತಂತ್ರಜ್ಞಾನ ಖತೆ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಮಾತನಾಡಿ, ಮಾಹಿತಿ ತಂತ್ರಜ್ಞಾನ ವಿದ್ಯಾರ್ಥಿಗಳು ಕೋರ್ಸ್‌ ಪೂರ್ಣವಾದ ನಂತರ ಕಂಪನಿಗಳಲ್ಲಿ 6 ತಿಂಗಳ ತರಬೇತಿಗೆ ಹೋಗುವುದನ್ನು ತಪ್ಪಿಸಲು ಪಠ್ಯಕ್ರಮದಲ್ಲೇ ಸೂಕ್ತ ಬದಲಾವಣೆ ಮಾಡಲಾಗುವುದು ಎಂದರು.

ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆ ಮಾಡಲು ಉನ್ನತ ಶಿಕ್ಷಣ ಸಚಿವ ಡಾ. ಜಿ. ಪರಮೇಶ್ವರ್‌ ಅವರೊಂದಿಗೆ ಸಮಾಲೋಚಿಸುವುದಾಗಿ ಬಿಕೆಸಿ ತಿಳಿಸಿದರು. ಪ್ರಸಕ್ತ ಶಿಕ್ಷಣ ಕ್ರಮದ ಪ್ರಕಾರ ವಿದ್ಯಾರ್ಥಿ ಕೋರ್ಸ್‌ ಮುಗಿದ ಬಳಿಕ ಕಡ್ಡಾಯವಾಗಿ 6 ತಿಂಗಳ ಕಾಲ ಐ.ಟಿ. ಕಂಪನಿ ಅಥವಾ ಕೈಗಾರಿಕೆಗಳಲ್ಲಿ ವೃತ್ತಿ ತರಬೇತಿ ಪಡೆದ ಬಳಿಕವಷ್ಟೇ ಉದ್ಯೋಗಕ್ಕೆ ಅರ್ಹನಾಗುತ್ತಾನೆ. ಅವರಿಗೆ ಅಗತ್ಯವಾದ ತರಬೇತಿಯನ್ನು ಶಿಕ್ಷಣದ ಜೊತೆಗೇ ನೀಡುವಂತೆ ಪಠ್ಯಕ್ರಮವನ್ನೇ ಬದಲಿಸುವುದು ಉತ್ತಮ ಎಂದು ಅವರು ಹೇಳಿದರು.

ಓ.ಎಫ್‌.ಸಿ : 4845 ಕಿ.ಮೀ ಆಪ್ಟಿಕ್‌ ಫೈಬರ್‌ ಕೇಬಲ್‌ ಅಳವಡಿಕೆಗೆ ಯೋಜನೆ ಹಾಕಿಕೊಳ್ಳಲಾಗಿದ್ದು, 2617 ಕಿ.ಮೀ ಓಎಫ್‌ಸಿ ಅಳವಡಿಸಲಾಗಿದೆ ಎಂದ ಅವರು, ಮುಂದಿನ 9 ವರ್ಷಗಳ ಅವಧಿಯಲ್ಲಿ ಕಂಪ್ಯೂಟರ್‌ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದರು.

ಬ್ಯಾಂಡ್‌ವಿಡ್ತ್‌: ವೇಗವಾಗಿ ಬೆಳೆಯುತ್ತಿರುವ ಇಂಟರ್‌ನೆಟ್‌ ಕ್ಷೇತ್ರದಲ್ಲಿ ವೇಗದ ಸಂಪರ್ಕಕ್ಕೆ ಅಗತ್ಯವಾದ ಬ್ಯಾಂಡ್‌ವಿಡ್ತ್‌ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಈ ವರೆಗೆ 150 ಮೆಗಾಬೈಟ್‌ ಬ್ಯಾಂಡ್‌ವಿಡ್ತ್‌ ಹೊಂದಿದ್ದ ಮುಂಬಯಿಯನ್ನು 370 ಮೆಗಾಬೈಟ್‌ ಬ್ಯಾಂಡ್‌ವಿಡ್ತ್‌ ಹೊಂದಿರುವ ಬೆಂಗಳೂರು ಹಿಂದೆ ಹಾಕಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+