ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ಘನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡ ಸೌದಿ

By Staff
|
Google Oneindia Kannada News

ದುಬೈ : ಅಮೆರಿಕ ವಿರುದ್ಧ ಪ್ರತಿದಾಳಿಗೆ ಸಜ್ಜಾಗುತ್ತಿರುವ ತಾಲಿಬಾನ್‌ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಸೌದಿ ಅರೇಬಿಯಾ ಕೂಡ ಕಡಿದುಕೊಂಡಿದೆ. ಈಗ ಆಫ್ಘಾನಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಏಕೈಕ ರಾಷ್ಟ್ರ ಪಾಕಿಸ್ತಾನವಾಗಿದೆ.

ಆಫ್ಘಾನಿಸ್ತಾನದೊಂದಿಗೆ ಯು.ಎ.ಇ. ತನ್ನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡ ಮೂರು ದಿನಗಳ ಬಳಿಕ ಸೌದಿ ಕೂಡ ಅದೇ ನಿರ್ಧಾರ ತಳೆದಿದೆ. ಭಯೋತ್ಪಾದನೆಗೆ ಇಂಬು ನೀಡುತ್ತಿರುವ ಆಫ್ಘನ್‌ನೊಂದಿಗೆ ತಾನು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಸೌದಿ ಸರಕಾರದ ಪ್ರಕಟಿಸಿದೆ ಎಂದು ರಿಯಾದ್‌ನ ಎಸ್‌ಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

  • ಈ ಮಧ್ಯೆ ತನ್ನ ಮೇಲೆ ಆಕ್ರಮಣ ಮಾಡುವವರ ವಿರುದ್ಧ ಪ್ರತಿ ಆಕ್ರಮಣ ಮಾಡುವುದಾಗಿ ತಾಲಿಬಾನ್‌ ಕಟ್ಟೆಚ್ಚರಿಕೆ ನೀಡಿದೆ.
  • ತನ್ನ ವಿರುದ್ಧ ದಾಳಿ ಮಾಡಲು ಸಹಾಯ ಮಾಡುವ ರಾಷ್ಟ್ರಗಳ ಮೇಲೂ ತಾನು ಪ್ರತಿದಾಳಿ ಮಾಡೇ ತೀರುತ್ತೇನೆ ಎಂದು ಕಟ್ಟಾ ಉಗ್ರವಾದಿ ತಾಲಿಬಾನ್‌ ಹೇಳಿದೆ.
  • ಸಂಭವನೀಯ ಯುದ್ಧದಲ್ಲಿ ಜೈವಿಕ ಹಾಗೂ ರಾಸಾಯನಿಕ ದಾಳಿ ನಡೆಯುವ ಸಾಧ್ಯತೆ ಇದ್ದು, ಎಲ್ಲ ರಾಷ್ಟ್ರಗಳೂ ಜಾಗರೂಕರಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಗ್ರೋ ಹಾರ್ಲೆಮ್‌ ಬ್ರೂಂಡ್‌ ಲ್ಯಾಂಡ್‌ ಎಚ್ಚರಿಕೆ ನೀಡಿದ್ದಾರೆ.
  • ಅಮೆರಿಕದ ಸೇನಾ ಪಡೆ ಎಲ್ಲ ಕಡೆಯಿಂದಲೂ ಆಫ್ಘಾನಿಸ್ತಾನವನ್ನು ಸುತ್ತುವರಿಯುತ್ತಿದ್ದು, ಯುದ್ಧದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
  • ಜೇಹಾದ್‌ (ಧರ್ಮಯುದ್ಧ)ದಲ್ಲಿ 3 ಲಕ್ಷ ತಾಲಿಬಾನ್‌ ಸೈನಿಕರು ಪಾಲ್ಗೊಳ್ಳುವರೆಂದು ತಾಲಿಬಾನ್‌ ಮಿಲಿಟರಿ ಆಡಳಿತ ಹೇಳಿದೆ.
  • ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ದದ ಹೋರಾಟಕ್ಕೆ ಅಮೆರಿಕಕ್ಕೆ ಬೆಂಬಲ ನೀಡುವುದಾಗಿ ರಷ್ಯದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಘೋಷಿಸಿದ್ದಾರೆ.
  • ಮಧ್ಯ ಏಷ್ಯಾದಲ್ಲಿರುವ ಸೋವಿಯತ್‌ ಯುದ್ಧ ವಿಮಾನ ಪೂರೈಕೆ ಸೇರಿದಂತೆ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಬೆಂಬಲ ಸೂಚಿಸಿರುವ ರಷ್ಯದ ನಿರ್ಧಾರವನ್ನು ಅಮೆರಿಕ ಕಾರ್ಯದರ್ಶಿ ಕೋಲಿನ್‌ ಪೋವೆಲ್‌ ಸ್ವಾಗತಿಸಿದ್ದಾರೆ.
  • ಸೆ.11ರಂದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ ಈವರೆಗೆ 353 ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.
  • ಭಯೋತ್ಪಾದನೆ ವಿರುದ್ಧವನ್ನು ತಾವು ಸರಳವಾಗಿ ಗೆಲ್ಲಬೇಕಿದ್ದು, ಲಾಡೆನ್‌ ವಿರುದ್ಧ ಸಾಕ್ಷ್ಯಾಧಾರ ಬಹಿರಂಗಮಾಡಿ ಯುದ್ಧವನ್ನು ಮತ್ತಷ್ಟು ಕ್ಲಿಷ್ಟಕರ ಮಾಡಿಕೊಳ್ಳುವುದಿಲ್ಲ ಎಂದು ಬುಷ್‌ ಹೇಳಿದ್ದಾರೆ.
(ಪಿ.ಟಿ.ಐ/ಇನ್‌ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X