ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರ್ಡೇಶ್ವರದಲ್ಲಿ 123 ಅಡಿಯ ವಿಶ್ವದ ಅತಿ ಎತ್ತರದ ಶಿವ ಪ್ರತಿಮೆ

By Staff
|
Google Oneindia Kannada News

ಮುರ್ಡೇಶ್ವರ : ಸಮುದ್ರತಟದ ಸುಂದರ ಹಾಗೂ ಯಾತ್ರಾರ್ಥಿಗಳಿಗೆ ಪವಿತ್ರವಾದ ಪ್ರವಾಸಿ ತಾಣ ಮುರ್ಡೇಶ್ವರ ತನ್ನ ಹೆಗ್ಗಳಿಕೆಯ ಬತ್ತಳಿಕೆಗೆ ಮತ್ತೊಂದು ಗರಿ ಅಲಂಕರಿಸಿಕೊಂಡಿದೆ. ವಿಶ್ವದ ಅತ್ಯಂತ ದೊಡ್ಡ ಶಿವ ಪ್ರತಿಮೆ, ಮುರ್ಡೇಶ್ವರದಲ್ಲಿ ಎದ್ದು ನಿಲ್ಲುವ ಗಳಿಗೆ ಹತ್ತಿರದಲ್ಲಿದೆ, ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.

123 ಅಡಿ ಎತ್ತರದ ನೀಲಕಂಠ ಪ್ರತಿಮೆಯನ್ನು ಕಡೆಯಲು ಶಿಲ್ಪಿಗಳಿಗೆ 2 ವರ್ಷವೇ ಹಿಡಿಯಿತು. ಇಂಥ ಶಿಲ್ಪಗಳನ್ನು ಕಟೆದಿರಿಸುವುದರಲ್ಲಿ ಎತ್ತಿದ ಕೈ ಎನಿಸಿದ ಶಿವಮೊಗ್ಗೆಯ ಶಿಲ್ಪಿ ಶ್ರೇಷ್ಠ ಕಾಶೀನಾಥ್‌ ಹಾಗೂ ಅವರ ಪುತ್ರ ಶ್ರೀಧರ್‌, ನೀಲಕಂಠ ಪ್ರತಿಮೆ ರೂಪುಗೊಳ್ಳುವಲ್ಲಿ ದುಡಿದಿದ್ದಾರೆ. ಸೂರ್ಯನ ಕಿರಣಗಳಿಗೆ ಮೈಯ್ಯಾಡ್ಡಿ, ಪ್ರತಿಮೆಯ ಕಣ್ಣುಗಳು ಹೊಳೆಯುವಂತೆ ಮಾಡಿರುವುದು ಶಿಲ್ಪಿಗಳ ಕರ ಕುಶಲತೆಗೆ ಸಾಕ್ಷಿ .

ಭಟ್ಕಳಕ್ಕೆ 12 ಕಿಮೀ ದೂರದಲ್ಲಿರುವ ಮುರ್ಡೇಶ್ವರ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾದುದು. ಮುರ್ಡೇಶ್ವರದ ವಾಸ್ತು ವೈಭವಕ್ಕೆ ಹೊಸ ಸೇರ್ಪಡೆ ನೀಲಂಕಂಠ ಪ್ರತಿಮೆ. ಇದರ ನಿರ್ಮಾಣಕ್ಕೆ 1 ಕೋಟಿ ರುಪಾಯಿ ಖರ್ಚಾಗಿದೆ. ತವರಿಗೆ ಏನನ್ನಾದರೂ ಸಲ್ಲಿಸಬೇಕು ಎನ್ನುವ ಕೈಗಾರಿಕೋದ್ಯಮಿ ಆರ್‌.ಎನ್‌.ಶೆಟ್ಟಿ ಅವರ ಸಂಕಲ್ಪದ ಫಲ ಈ ಪ್ರತಿಮೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X