ಮನೆ ಕಟ್ಟಿಕೊಡಲಾಗುತ್ತದೆ, ರಿಟೈರಾದವರಿಗೆ ಮಾತ್ರ-ಎಲ್‌ಐಸಿ ಮನೆ ಘಟಕ
ಬೆಂಗಳೂರು : ಮನೆಯಿಂದ ದೂರ, ಇನ್ನೊಂದು ಮನೆ ಇವತ್ತಿನ ಹೆಚ್ಚುತ್ತಿರುವ ಬೇಡಿಕೆಗಳಲ್ಲೊಂದು. ಮನೆಯಾಳಗೆ ಮನೆಯಾಡೆಯನಿದ್ದರೂ ಇಲ್ಲ. ಮುಪ್ಪಡರಿತಲ್ಲ. ಈ ಮನೆ ಸುಮ್ಮನೆ. ಅಲ್ಲೊಂದಿದೆ ನಿಮ್ಮನೆ. ನಗರೀಕರಣ ತಂದ ನಾಜೂಕುತನದಲ್ಲಿ ಹೆತ್ತವರ ಹೊರೆಯೂ ಭಾರ. ಕಳ್ಳ ತಲೆ ಒಡೆವ. ಕರೆಂಟು ಬಿಲ್ ಕಟ್ಟಲು ಕ್ಯೂನಿಂತರೆ ಕುಸಿದು ಬೀಳುವ. ವೃದ್ಧಾಶ್ರಮ ಸೇರಿಸಲು ಇವೆಲ್ಲಾ ನೆವ. ಇಂಥಾ ಕರಳುಬಳ್ಳಿ ಕಳಚುವಿಕೆಗೂ ಒಂದರ್ಥ ಕೊಡಲು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಿರ್ಧರಿಸಿದೆ.
ಸಹಕಾರಿ ಜೀವನ ಸಾಮೂಹಿಕ ಕೇಂದ್ರಗಳನ್ನು ಕಟ್ಟಲು ಹುಟ್ಟಿದೆ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಉಪಘಟಕ ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಹೋಂ ಕೇರ್. ಹಿರಿಯ ನಾಗರಿಕರಿಗಾಗಿ ನಗರದ ಹೊರ ವಲಯಗಳಲ್ಲಿ ಸಮುಚ್ಚಯಗಳನ್ನು ಕಟ್ಟಿಕೊಡುವುದು ಈ ಉಪಘಟಕದ ಉಮೇದಿ ಎಂದು ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ನಿರ್ದೇಶಕ ಕ್ರಾಂತಿ ಸಿನ್ಹ ಮಂಗಳವಾರ ಸುದ್ದಿಗಾರರಿಗೆ ಹೇಳಿದರು.
ಈ ನಿವೃತ್ತರ ಮನೆಗಳನ್ನು ಕಟ್ಟಿಸಿಕೊಳ್ಳುವ ಭಾಗ್ಯ ಈ ವರ್ಷ ಸಂದಿರುವುದು ಪುಣೆ ಮತ್ತು ನೋಯಿಡಾಗೆ. 50ರಿಂದ 60 ಮನೆಗಳ ಕಟ್ಟಲು 10 ಕೋಟಿ ರುಪಾಯಿ ಸುರಿಯುತ್ತದಂತೆ ಸಂಸ್ಥೆ. ಮುಂಬಯಿಯಲ್ಲೂ ಈ ಯೋಜನೆ ಜಾರಿಗೆ ತರಲು ಜಾಗೆಯ ತಲಾಷು ನಡೆದಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೂ ಈ ಯೋಜನೆ ತೀರಾ ದೂರವೇನಿಲ್ಲ.
ವಿದೇಶೀ ಸಂಸ್ಕೃತಿಯನ್ನು ಅನಾಮತ್ತು ಎತ್ತಿಕೊಂಡು ಬಂದಿರುವ ಕಂಪನಿಯ ಈ ಸೌಕರ್ಯ ಪಡೆಯಲು ಬೇಕಾದ ಅರ್ಹತೆಗಳು...
- ವಯಸ್ಸು 60 ದಾಟಿರಬೇಕು
- ಥೈಲಿಯಲ್ಲೋ ತಿಜೋರಿಯಲ್ಲೋ ಸಾಕಷ್ಟು ಹಣ ಇರಬೇಕು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications