ಕೇಬಲ್ ಆಪರೇಟರ್ - ಸ್ಟಾರ್‌ಟಿವಿ ಯುದ್ಧದಲ್ಲಿ ಮಂಕಾದ ಕೆ.ಬಿ.ಸಿ.
ಬೆಂಗಳೂರು : ಸ್ಟಾರ್ ಟಿ.ವಿ. ಜಾಲ ತನ್ನ ಚಾನೆಲ್‌ಗಳ ಪ್ರಸಾರಕ್ಕೆ ಇಂತಿಷ್ಟು ಹಣ ನೀಡಬೇಕು ಎಂದು ಕೇಬಲ್ ಆಪರೇಟರ್‌ಗಳಿಗೆ ತಿಳಿಸಿದೆ. ಸ್ಟಾರ್ ಟಿವಿ ವಿಧಿಸಿರುವ ದರ ದುಬಾರಿ ಎಂದು ಬೆಂಗಳೂರಿನ ಕೆಲವು ಬಡಾವಣೆಯ ಕೇಬಲ್ ಆಪರೇಟರ್‌ಗಳು ಸ್ಟಾರ್ ಟಿವಿ ಬಳಗದ ಚಾನೆಲ್‌ಗಳ ಪ್ರಸಾರವನ್ನೇ ನಿಲ್ಲಿಸಿದ್ದಾರೆ.
ಕೇಬಲ್ ಆಪರೇಟರ್ ಹಾಗೂ ಸ್ಟಾರ್ ಟಿವಿ ಹೋರಾಟದ ಪರಿಣಾಮವಾಗಿ ಬೆಂಗಳೂರಿನ ಬಾಲೆ ಕೌನ್ ಬನೇಗ ಕರೋಡ್‌ಪತಿ (ಜೂನಿಯರ್)ಯಲ್ಲಿ ಭಾಗವಹಿಸಿ, ಲಕ್ಷಾಂತರ ರುಪಾಯಿ ಗೆದ್ದ ರಸಕ್ಷಣಗಳನ್ನು ನೋಡುವ ಭಾಗ್ಯ ಕೆಲವು ಬಡಾವಣೆಗಳ ಬೆಂಗಳೂರಿಗರಿಗೆ ಇಲ್ಲವಾಯ್ತು.
ಸೆಪ್ಟೆಂಬರ್ 16ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ 6,40,000 ಗೆದ್ದಿದ್ದ ಬೆಂಗಳೂರಿನ ಭಾರ್ಗವಿ, ರೋಲ್ ಓವರ್ ಸ್ಪರ್ಧಿಯಾಗಿದ್ದರು. ಆ ಹುಡುಗಿ ಮತ್ತೆಷ್ಟು ಹಣ ಗೆಲ್ಲುತ್ತಾಳೆ ನೋಡಬೇಕು ಎಂದು ಕಾದಿದ್ದ ಬೆಂಗಳೂರಿಗರಿಗೆ 23ರಂದು ಸ್ಟಾರ್‌ಪ್ಲಸ್ ನೋಡುವ ಭಾಗ್ಯ ದೊರಕಲೇ ಇಲ್ಲ.
ಕೇಬಲ್ ಆಪರೇಟರ್‌ಗಳು ಪ್ರಸಾರ ನಿಲ್ಲಿಸಿ, ದರ ಇಳಿಸುವಂತೆ ಪ್ರತಿಭಟನೆಯಲ್ಲಿ ತೊಡಗಿದ್ದರು. ಬೆಂಗಳೂರು ಕಾಲೇಜು ವಿದ್ಯಾರ್ಥಿನಿ, ಭರತನಾಟ್ಯ ಪ್ರವೀಣೆ ಭಾರ್ಗವಿಯೂ ಕೂಡ 12.50 ಲಕ್ಷದ ಪ್ರಶ್ನೆಗೆ ಉತ್ತರಿಸಲಾರದೆ, ಸ್ಪರ್ಧೆಯಿಂದ ಹಿಂದೆಸರಿದಳು.
ಈ ಮಧ್ಯೆ ಸ್ಟಾರ್ ಟಿ.ವಿ ಕೂಡ ಕೇಬಲ್ ಆಪರೇಟರ್‌ಗಳ ವಿರುದ್ಧ ತನ್ನ ಎಫ್‌ಎಂ ಚಾನೆಲ್‌ನಲ್ಲಿ ಜಾಹೀರಾತು ಯುದ್ಧ ಸಾರಿದೆ. ಈ ಮಧ್ಯೆ, ತಮ್ಮ ಈ ಹೋರಾಟಕ್ಕೆ ಸಮಸ್ತ ಬೆಂಗಳೂರಿಗರೂ ಬೆಂಬಲ ನೀಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಮ್ಮ ಎಲ್ಲ ಗ್ರಾಹಕರೂ ಕೇಬಲ್ ಬಾಡಿಗೆ ಹಣವನ್ನು ಪೂರ್ತಿ ನೀಡುತ್ತಾರೆ ಎನ್ನುತ್ತಾರೆ ಆಪರೇಟರ್‌ಗಳು. ಈ ಯುದ್ಧದಲ್ಲಿ ಸ್ಟಾರ್ ಸೋಲತ್ತೋ, ಕೇಬಲ್ ಆಪರೇಟರ್‌ಗಳು ಸೋಲುತ್ತಾರೋ ಇಲ್ಲ ಪ್ರೇಕ್ಷಕರು ಸೊರಗುತ್ತಾರೋ ಕಾದು ನೋಡಬೇಕು.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications