Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ‘ಜ್ಯುವೆಲ್‌ ಆಫ್‌ ಇಂಡಿಯಾ’ ಚಿನ್ನಾಭರಣ ಮೇಳ

Necklaceಬೆಂಗಳೂರು : ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 28ರ ಶುಕ್ರವಾರದಿಂದ ಐದು ದಿನಗಳ ಚಿನ್ನಾಭರಣ ಮೇಳ ‘ಜ್ಯುವೆಲ್‌ ಆಫ್‌ ಇಂಡಿಯಾ’ ಆರಂಭವಾಗಲಿದೆ. ಈ ಮೇಳದಲ್ಲಿ ರಾಷ್ಟ್ರದ ಮೂಲೆ ಮೂಲೆಗಳ ಚಿನ್ನಾಭರಣ ತಯಾರಕರು ಪಾಲ್ಗೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ಹಾಗೂ ನವನವೀನ ವಿನ್ಯಾಸದ ಕಣ್ಕುಕ್ಕುವ ಚಿನ್ನಾಭರಣಗಳನ್ನು ಇಲ್ಲಿ ನೋಡಲೂ ಬಹುದು, ಕೊಳ್ಳಲೂ ಬಹುದು. ಒಂದೇ ವೇದಿಕೆಯಲ್ಲಿ ರಾಷ್ಟ್ರದ ಸುಪ್ರಸಿದ್ಧ 60ಕ್ಕೂ ಹೆಚ್ಚು ಚಿನ್ನಾಭರಣ ವ್ಯಾಪಾರಿಗಳು ತಮ್ಮ ಅತ್ಯಾಕರ್ಷಕ ಆಭರಣಗಳನ್ನು ಪ್ರದರ್ಶನಕ್ಕಿಡುತ್ತಿದ್ದಾರೆ.

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಮತ್ತು ಬೆಂಗಳೂರು ಚಿನ್ನಾಭರಣ ವ್ಯಾಪಾರಿಗಳ ಸಂಘ ಸಂಯುಕ್ತವಾಗಿ ಈ ಮೇಳ ಆಯೋಜಿಸಿದೆ. ಎಕ್ಸ್‌ಪೋ ವರ್ಲ್ಡ್‌ ಸಂಘಟಕರಾದ ಸುದೀಪ್‌ ಬೇಕಲ್‌ ಈ ವಿಷಯ ತಿಳಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಮೇಳ ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು ಆಕರ್ಷಿಸಿತ್ತು.

ಈ ಬಾರಿಯ ಮೇಳಕ್ಕೆ ಕನಿಷ್ಠ 60 ಸಾವಿರ ಮಂದಿ ಬರುತ್ತಾರೆ ಎಂಬುದು ಸಂಘಟಕರ ನಿರೀಕ್ಷೆ. ರಾಜ್ಯದ ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಅವರು ಈ ಮೇಳವನ್ನು ಉದ್ಘಾಟಿಸಲಿದ್ದಾರೆ.

(ಪಿ.ಟಿ.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+