ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನಗಳ ಮೇಲಿನ ದಿಗ್ಬಂಧನಗಳ ತೆರವುಗೊಳಿಸಿದ ಅಮೆರಿಕ

By Staff
|
Google Oneindia Kannada News

ವಾಷಿಂಗ್ಟನ್‌ : ಭಾರತ ಹಾಗೂ ಪಾಕಿಸ್ತಾನಗಳ ಮೇಲೆ ಹೇರಲಾಗಿದ್ದ ದಿಗ್ಬಂಧನಗಳನ್ನು ಅಮೆರಿಕಾದ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ ಬುಷ್‌ ಶನಿವಾರ ತೆರವುಗೊಳಿಸಿದ್ದಾರೆ. 1998 ರಲ್ಲಿ ಉಭಯ ದೇಶಗಳು ಅಣು ಪರೀಕ್ಷೆ ನಡೆಸಿದ ಕಾರಣ ಅಮೆರಿಕ ಈ ದಿಗ್ಬಂಧನವನ್ನು ಹೇರಿತ್ತು.

ತಾಲಿಬಾನ್‌ ಮೇಲಿನ ದಾಳಿಗೆ ಪಾಕಿಸ್ತಾನ ನೀಡಿರುವ ಸಂಪೂರ್ಣ ಸಹಕಾರದ ಹಿನ್ನೆಲೆಯಲ್ಲಿ ಅಮೆರಿಕ ಈ ಪ್ರಮುಖ ರಾಜತಾಂತ್ರಿಕ ನಿರ್ಣಯವನ್ನು ಕೈಗೊಂಡಿದೆ ಎನ್ನಲಾಗಿದೆ. ಮುಸ್ಲಿಂ ಕಟ್ಟಾವಾದಿಗಳ ವಿರೋಧವನ್ನು ಲೆಕ್ಕಿಸದೆ, ಮುಷರ್ರಫ್‌ ಅವರು ಸಂಪೂರ್ಣ ಬೆಂಬಲ ಘೋಷಿಸಿದ್ದಕ್ಕೆ ಪ್ರತಿಯಾಗಿ ಅಮೆರಿಕ ತಕ್ಕ ಪ್ರತಿಫಲವನ್ನು ನೀಡುತ್ತದೆಂದು ಇತ್ತೀಚೆಗೆ ತಾನೆ ಬುಷ್‌ ಆಶ್ವಾಸನೆ ನೀಡಿದ್ದರು.

ಮಿಲಿಟರಿ ಹಾಗೂ ಆರ್ಥಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ಮೇಲೆ ಅಮೆರಿಕ ಈ ದಿಗ್ಬಂಧನಗಳನ್ನು ಹೇರಿತ್ತು. ಆದರೆ, ಭಾರತದ ವಿರುದ್ಧ ಹೇರಲಾಗಿದ್ದ ಬಹುತೇಕ ದಿಗ್ಬಂಧನಗಳು ಕ್ಲಿಂಟನ್‌ ಆಡಳಿತಾವಧಿಯಲ್ಲಿಯೇ ತೆರವುಗೊಂಡಿದ್ದವು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X