ಗೆರಿಲ್ಲಾ ತಂತ್ರಕ್ಕೆ ಜಿಬಿಯು- 28 ಬಾಂಬ್ಗಳು ಉತ್ತರವಾದಾವೆ?
ನ್ಯೂಯಾರ್ಕ್ : ಆಪ್ಘಾನಿಸ್ತಾನದ ಗಿರಿ ಕಂದರಗಳಲ್ಲಿ ಅಡಗಿರುವ ಒಸಾಮ ಬಿನ್ ಲ್ಯಾಡೆನ್ನನ್ನು ಶಿಕ್ಷಿಸಲು ಹಾಗೂ ಗೆರಿಲ್ಲಾ ಯುದ್ಧದಲ್ಲಿ ಕುಖ್ಯಾತಿ ಗಳಿಸಿರುವ ಆಪ್ಘನ್ ಭಯೋತ್ಪಾದಕರ ಹುಟ್ಟಗಿಸಲು ಹೊಸ ಜಮಾನದ ಗುಹೆ ಸ್ಫೋಟಕಗಳನ್ನು ಬಳಸಲು ಅಮೆರಿಕ ಉದ್ದೇಶಿಸಿದೆ.
ಜೀವಂತವಾಗಿ ಅಥವಾ ಹೆಣವಾಗಿ ಬಿನ್ ಲ್ಯಾಡೆನ್ನ ವಶಕ್ಕೆ ಪಡೆದುಕೊಳ್ಳಲು ಪಣ ತೊಟ್ಟಿರುವ ಅಮೆರಿಕ ಮಿಲಿಟರಿ, ಯುದ್ಧದಲ್ಲಿ ಜಿಬಿಯು- 28 ಅಸ್ತ್ರ ಸೇರಿದಂತೆ, ಎಲ್ಲ ರೀತಿಯ ಆಧುನಿಕ ಯುದ್ಧದ ತಾಂತ್ರಿಕ ಮಜಲುಗಳನ್ನು ವೈರಿ ನಿಗ್ರಹಕ್ಕೆ ಬಳಸಲಿದೆ ಎಂದು ಇಂಟೆಲಿಜೆನ್ಸ್ ಮಾಹಿತಿಯನ್ನಾಧರಿಸಿ ‘ನ್ಯೂಯಾರ್ಕ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.
ಲ್ಯಾಡೆನ್ನ ಬೆಂಗಾವಲಿನ ಹೊಣೆ ಹೊತ್ತಿರುವ ಸುಮಾರು 3 ರಿಂದ 4 ಸಾವಿರ ಫೈಟರ್ಗಳು ಉತ್ತರ ಆಪ್ಘಾನಿಸ್ತಾನದ ಗಿರಿ ಕಂದರಗಳಲ್ಲಿ ಅಡಗಿದ್ದಾರೆ ಎನ್ನಲಾಗಿದೆ. ಅಡಗುತಾಣಗಳಲ್ಲಿ ಅಡಗಿರುವ ಈ ಉಗ್ರರನ್ನು ಹೊರಗೆಡಹುವ ‘ಅರ್ಥ್ ಪೆನೆಟ್ರೇಟರ್’ ಎನ್ನುವ ಬಾಂಬ್ಗಳನ್ನು ಪೆಂಟಗನ್ ಅಭಿವೃದ್ಧಿಪಡಿಸಿದೆ ಎಂದು ವರದಿ ತಿಳಿಸಿದೆ.
2000 ಪೌಂಡ್ ತೂಕವನ್ನು ಹೊಂದಿರುವ ಜಿಬಿಯು-28 , ಪರ್ಷಿಯನ್ ಗಲ್ಫ್ ಯುದ್ಧದಲ್ಲಿ ಬಳಸಿದ ಬಂಕರ್ ಬಸ್ಟರ್ಸ್ನ ಸುಧಾರಿತ ರೂಪವಾಗಿದೆ. ಬಿ-2 ಸ್ಟೀಲ್ತ್ ಬಾಂಬರ್ಸ್ ನಿಂದ ಪ್ರಯೋಗಿಸುವ ಬಿಜಿಯು-20 ಬಾಂಬ್ಗಳು ಲೇಸರ್ ಟೆಕ್ನಾಲಜಿಯ ಮೂಲಕ ನಿರ್ದೇಶಿತ ಗಮ್ಯವನ್ನು ತಲುಪುತ್ತವೆ. ಈ ಬಾಂಬ್ಗಳಿಗೆ ಆಫ್ಘನ್ ಉಗ್ರರು ಬಗ್ಗುತ್ತಾರಾ ಅನ್ನುವುದನ್ನು ಕಾದು ನೋಡಬೇಕು!!
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications