• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯ:‘ಶೇಷ’ ಪ್ರಶ್ನೆಗಳು..

By Staff
|

ಜ್ಯೋತಿಷ್ಯ ಶಾಸ್ತ್ರ ವಿಜ್ಞಾನವೇ? ಅದನ್ನು ವಿಶ್ವ ವಿದ್ಯಾಲಯಗಳಲ್ಲಿ ಕಲಿಸುವುದು ಅವಶ್ಯಕವೇ? ಈ ಕುರಿತಾದ ವಾದ ವಿವಾದಗಳು ದೇಶಾದ್ಯಂತ ಚುರುಕಿನಿಂದ ನಡೆಯುತ್ತಿರುವುದು ಸರಿಯಷ್ಟೇ. ಕೆಲವು ವಿಶ್ವ ವಿದ್ಯಾಲಯಗಳು ಜ್ಯೋತಿಷ್ಯ ತರಗತಿಗಳನ್ನು ನಡೆಸಲು ಉತ್ಸಾಹದಿಂದಲೇ ಮುಂದೆ ಬಂದಿವೆ. ಅದೇ ರೀತಿ ಜ್ಯೋತಿಷ್ಯವನ್ನು ವಿಶ್ವ ವಿದ್ಯಾಲಯಗಳಲ್ಲಿ ಕಲಿಸುವ ಕುರಿತು ಹಲವು ಬುದ್ಧಿಜೀವಿಗಳು ಕೂಡ ದೊಡ್ಡ ರೀತಿಯಲ್ಲೆ ದನಿ ಎತ್ತಿದ್ದಾರೆ. ಅದೇ ರೀತಿ ವಿರೋಧದ ದನಿಗಳು ಕೇಳಿಬಂದಿವೆ. ಈ ಸಾಲಿಗೆ ಹೊಸ ಸೇರ್ಪಡೆ ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ.ಎನ್‌.ಶೇಷನ್‌!

ಚುನಾವಣೆಗಳನ್ನು ಈ ರೀತಿಯೂ ನಡೆಸಬಹುದು ಎಂದು ತೋರಿಸಿದವರು ಟಿ.ಎನ್‌.ಶೇಷನ್‌. ಚುನಾವಣೆಗಳಲ್ಲಿ ಪಾರದರ್ಶಕತೆಯನ್ನು ತರುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಆಂದೋಲನದಲ್ಲಿ ತಮ್ಮ ಹೆಸರನ್ನು ಗುರ್ತಿಸಿಕೊಂಡವರು. ಶನಿವಾರ (ಸೆ. 22) ಶೇಷನ್‌ ಮೈಸೂರಿಗೆ ಬಂದಿದ್ದರು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಮೈಸೂರು ವಿವಿಯಲ್ಲಿ ಉಪನ್ಯಾಸ ನೀಡುತ್ತಿದ್ದರು.

‘ಢೋಂಗಿ ವಿಜ್ಞಾನಿಗಳು ಅದೇ ರೀತಿಯ ವಿಚಾರವಂತರು ಮಾತ್ರ ಜ್ಯೋತಿಷ್ಯ ಶಾಸ್ತ್ರವನ್ನು ವಿಶ್ವವಿದ್ಯಾಲಯದಲ್ಲಿ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ’ ಎಂದು ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ. ಎನ್‌. ಶೇಷನ್‌ ಗುಡುಗಿದರು. ಜ್ಯೋತಿಷ್ಯ ಶಾಸ್ತ್ರವನ್ನು ವಿರೋಧಿಸುವವರಿಗೆ ಆ ಬಗ್ಗೆ ಚಿಕ್ಕಾಸಿನಷ್ಟಾದರೂ ಗೊತ್ತಿದೆಯೇ ? ಯಾವುದೇ ವಿಷಯವನ್ನಾಗಲೀ ಆಳವಾಗಿ ಅಭ್ಯಸಿಸದೇ ತೆಗೆದು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಜ್ಯೋತಿಷ್ಯಶಾಸ್ತ್ರ ಕಲಿಕೆಯನ್ನು ವಿರೋಧಿಸುವವರನ್ನು ಶೇಷನ್‌ ಪ್ರಶ್ನಿಸಿದರು.

ವಿಶ್ವ ವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಕಲಿಸುವುದನ್ನು ಬಲವಾಗಿ ಸಮರ್ಥಿಸಿಕೊಂಡ ಶೇಷನ್‌, ತಮ್ಮ ವಾದಕ್ಕೆ ಹಲವು ಸಮರ್ಥನೆಗಳನ್ನು ನೀಡಿದರು. ವಿರೋಧಿಸುವವರನ್ನು ಹಿಗ್ಗಾಮುಗ್ಗಾ ಜಗ್ಗಾಡಿದರು. ಅವರ ಉಪನ್ಯಾಸದ ಮುಖ್ಯಾಂಶಗಳನ್ನು ಹೆಕ್ಕುವುದಾದರೆ..

 • ಜ್ಯೋತಿಷ್ಯವನ್ನು ವಿರೋಧಿಸುವವರಿಗೆ ವಿಜ್ಞಾನ ಎಂದರೇನೆಂದೇ ಗೊತ್ತಿಲ್ಲ. ಅಧ್ಯಯನ ಮತ್ತು ಸಂಶೋಧನೆಯನ್ನೇ ವಿಜ್ಞಾನ ಎಂದು ಗುರುತಿಸಲಾಗುತ್ತದೆ. ಅಭ್ಯಾಸ ಮತ್ತು ಅರಿವು ಇಲ್ಲದೇ ಇರುವವರು ಒಂದು ವಿಷಯವನ್ನು ತೆಗಳುವುದಕ್ಕಿಂತ ದೊಡ್ಡ ದಡ್ಡತನ ಇನ್ನೊಂದಿಲ್ಲ.
 • ಜ್ಯೋತಿಷ್ಯವನ್ನು ಹಿಂದುತ್ವ ಎಂದು ಹೀಗೆ ಕರೆಯುತ್ತೀರಿ ? ಈಜಿಪ್ಟ್‌ನಂತಹ ಪಾಶ್ಚಾತ್ಯ ದೇಶಗಳಲ್ಲಿ ಜ್ಯೋತಿಷ್ಯ ಇದೆ ಅಂದ ಮೇಲೆ ಅದು ಕೇಸರೀಕರಣ ಹೇಗಾಗುತ್ತದೆ ?
 • ನಕ್ಷತ್ರ, ಸೌರಕಾಯಗಳು, ಗ್ರಹಗಳು, ಗುರುತ್ವಾಕರ್ಷಣೆ, ವಿಕಿರಣ ಶೀಲತೆ, ಬೆಳಕು, ಪ್ರಕಾಶ ಮತ್ತಿತರ ಸೌರ ಚಟುವಟಿಕೆಗಳನ್ನು ಆಧರಿಸಿ ನಡೆಸುವ ಅಧ್ಯಯನದ ಅವಕಾಶವನ್ನು ಇಂದಿನ ವಿದ್ಯಾರ್ಥಿಗಳಿಂದ ವಂಚಿಸುತ್ತಿರುವ ಅರೆ ಬರೆ ವಿಚಾರವಾದಿಗಳನ್ನು ಏನನ್ನಬೇಕು ?
 • ವೇದ, ಕಲ್ಪ , ವ್ಯಾಕರಣ, ಛಂದಸ್ಸಿನ ಕಲ್ಪನೆಗಳು ವೇದ ಕಾಲದಿಂದಲೂ ಇವೆ. ತಿಥಿ, ವಾರ, ನಕ್ಷತ್ರ, ತಿಂಗಳು.. ಇವೆಲ್ಲ ಈ ಆಧುನಿಕ ಯುಗದಲ್ಲಿಯೂ ಸರಿಯಾಗಿಯೇ ಕೆಲಸ ಮಾಡುತ್ತಿವೆ. ಶತ ಶತಮಾನಗಳ ಹಿಂದಿನಿಂದ ನಡೆದು ಬಂದ ಈ ವಿಷಯಗಳು ಅಧ್ಯಯನಕ್ಕೆ ಅರ್ಹವಲ್ಲ ಎಂದು ಹೇಗೆ ಹೇಳುತ್ತೀರಿ ?
 • ಬಾಲಂಗೋಚಿ : ಜ್ಯೋತಿಷ್ಯವನ್ನು ವಿರೋಧಿಸುವ ಬುದ್ಧಿಜೀವಿಗಳನ್ನು ಶೇಷನ್‌ ಹಿಗ್ಗಾಮುಗ್ಗಾ ಜಗ್ಗಾಡಿದ ಈ ಸಭೆಯಲ್ಲಿ ಮೈಸೂರಿನ ವಿಚಾರವಾದಿ ಕೆ.ರಾಮದಾಸ್‌ ಹಾಜರಿದ್ದಂತಿರಲಿಲ್ಲ . ಇದ್ದಿದ್ದಲ್ಲಿ ಒಂಟಿಧ್ವನಿಯಾದರೂ ಕೇಳದಿದ್ದೀತೆ?

  (ಇನ್ಫೋ ವಾರ್ತೆ)

  do you agree this ?

  ವಾರ್ತಾ ಸಂಚಯ
  ಶ್ರಾದ್ಧದ ಬಗ್ಗೆ ಪಿಎಚ್‌ಡಿ ಪಡೆದೋರ ಏನನ್ನೋದು?
  ಮೈಸೂರು ವಿಶ್ವವಿದ್ಯಾಲಯದಲ್ಲಿ ಜೋತಿರ್ವಿಜ್ಞಾನ ಪದವಿ ಕೋರ್ಸ್‌
  ವಿವಿ ಹಂತದಲ್ಲಿ ಜ್ಯೋತಿಷ್ಯ: ಕೇಂದ್ರಸರ್ಕಾರಕ್ಕೆ ಸುಪ್ರಿಂಕೋರ್ಟ್‌ ನೋಟಿಸ್‌

  ಮುಖಪುಟ / ಲೋಕೋಭಿನ್ನರುಚಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more