ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಬೇಹುಗಾರಿಕೆ ವಿಮಾನ ಢಮಾರ್‌: ತಾಲಿಬಾನ್‌

By Staff
|
Google Oneindia Kannada News

ಇಸ್ಲಾಮಾಬಾದ್‌ : ಯಾವುದೇ ಕ್ಷಣದಲ್ಲಾದರೂ ಯುದ್ಧ ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌ ಘೋಷಿಸಿದ 24 ಗಂಟೆಗಳ ಅವಧಿಯಾಳಗೆ, ಅಮೆರಿಕದ ಮಾನವರಹಿತ ಬೇಹುಗಾರಿಕೆ ವಿಮಾನವನ್ನು ತಾನು ಹೊಡೆದುರುಳಿಸಿರುವುದಾಗಿ ತಾಲಿಬಾನ್‌ ಆಡಳಿತ ಶನಿವಾರ ಹೇಳಿಕೊಂಡಿದೆ.

ಈ ಬೇಹುಗಾರಿಕೆ ವಿಮಾನವನ್ನು ಉತ್ತರ ಪಾಂತ್ಯದ ಸಮನ್‌ಗನ್‌ನಲ್ಲಿ ಹೊಡೆದುರುಳಿಸಲಾಯಿತು ಎಂದು ಪಾಕಿಸ್ತಾನ ಮೂಲದ ಆಪ್ಘನ್‌ ಇಸ್ಲಾಮಿಕ್‌ ಪ್ರೆಸ್‌ ವರದಿ ಮಾಡಿದೆ. ಆಪ್ಘಾನಿಸ್ತಾನದ ಹಿರಿಯ ರಾಜತಾಂತ್ರಿಕ ಮೌಲ್ವಿ ನಜಿಬುಲ್ಲಾ ಅವರ ಹೇಳಿಕೆಯನ್ನುದ್ದರಿಸಿರುವ ವರದಿಯು ಹೆವಿ ಮೆಷಿನ್‌ಗನ್‌ ನೆರವಿನಿಂದ ಶನಿವಾರ ಬೆಳಗಿನ ಜಾವ ಈವಿಮಾನ ಹೊಡೆದುರುಳಿಸಿದ್ದಾಗಿ ಹೇಳಿದೆ.

ಯು.ಎ.ಇ. ಪ್ರಕಟಣೆ : ಆಪ್ಘಾನಿಸ್ತಾನದ ಮಿಲಿಟರಿ ಆಡಳಿತ ತಾಲಿಬಾನ್‌ನೊಂದಿಗೆ ಎಲ್ಲ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನೂ ತಾನು ಕಡಿದುಕೊಂಡಿರುವುದಾಗಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯು.ಎ.ಇ) ಪ್ರಕಟಿಸಿದೆ. ‘ಸಂಬಂಧ ಕಡಿತ’ ಎಂಬ ಎರಡು ಪದಗಳ ಅಧಿಕೃತ ಹೇಳಿಕೆಯನ್ನು ವ್ಯಾಮ್‌ ನ್ಯೂಸ್‌ ಸಂಸ್ಥೆ ಬಿತ್ತರಿಸಿದೆ. ಈ ಮಧ್ಯೆ...

  • ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಬೆಂಬಲ ಸೂಚಿಸಿರುವ ಪಾಕ್‌ ನಿಲುವನ್ನು ಮೆಚ್ಚಿರುವ ಜಪಾನ್‌ ಪಾಕ್‌ಗೆ 40.2 ದಶಲಕ್ಷ ಡಾಲರ್‌ ನೆರವು ನೀಡುವುದಾಗಿ ಘೋಷಿಸಿದೆ.
  • ತನ್ನ ಮೇಲೆ ಪ್ರತೀಕಾರಕ್ಕೆ ಸಿದ್ಧವಾಗಿರುವ ಅಮೆರಿಕಕ್ಕೆ ನೆರವಾಗುತ್ತಿರುವ ಪಾಕ್‌ ವಿರುದ್ಧ ದಾಳಿಗೆ ತಾಲಿಬಾನ್‌ ಸಿದ್ಧತೆ ನಡೆಸಿದೆ.
  • ಅಮೆರಿಕಕ್ಕೆ ನೆರವು ನೀಡುವ ಮುಷರ್ರಫ್‌ ನಿರ್ಧಾರ ವಿರೋಧಿಸಿ, ಪಾಕ್‌ನಲ್ಲಿ ಶುಕ್ರವಾರ ನಡೆದ ರಾಷ್ಟ್ರವ್ಯಾಪಿ ಪ್ರದರ್ಶನದಲ್ಲಿ ಕನಿಷ್ಠ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
  • ಸೆ.11ರಂದು ದಾಳಿಗೆ ಒಳಗಾದ ವಿಶ್ವ ವ್ಯಾಪಾರ ಕೇಂದ್ರದಲ್ಲಿ ಪರಿಹಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಈವರೆಗೆ 76 ಸಾವಿರ ಟನ್‌ ಅವಶೇಷ ಹೊರತೆಗೆಯಲಾಗಿದೆ. ಇನ್ನೂ 2 ಲಕ್ಷಕ್ಕೂ ಹೆಚ್ಚು ಟನ್‌ ಅವಶೇಷ ಹೊರತೆಗೆಯಬೇಕಾಗಿದೆ.
  • ಭಾರತ ಮತ್ತು ಪಾಕ್‌ ವಿರುದ್ಧದ ದಿಗ್ಬಂಧನ ತೆರವಿಗೆ ಅಮೆರಿಕಾ ಚಿಂತನೆ.
(ಪಿ.ಟಿ.ಐ/ಎಎಫ್‌ಪಿ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X