Get Updates
Get notified of breaking news, exclusive insights, and must-see stories!

ಅಂತೂ ಇಂತೂ ಬಿತ್ತು ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರು : ಮಳೆಯ ಕಾಣದಿದ್ದ ಬೆಂಗಳೂರಿನಲ್ಲಿ ಕಳೆದ ಕೆಲವು ದಿನದಿಂದ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿಯಂತೂ ಬೆಂಗಳೂರಿನಲ್ಲಿ ಭಾರೀ ಮಳೆ. ಧಾರಾಕಾರ ಮಳೆ. ದಪ್ಪ ಹನಿಯ ಜೋರು ಮಳೆ. ಗುಡುಗು - ಸಿಡಿಲಿನ ಅಬ್ಬರದ ಮಳೆ. ಸಂಜೆ 8 ಗಂಟೆಗೆ ಆರಂಭವಾದ ಮಳೆ ಮಧ್ಯರಾತ್ರಿಯರೆಗೂ ಸುರಿದೇ ಇತ್ತು.

ಮಳೆಯಾದೊಡನೆ ಮಾಮೂಲಿನಂತೆ ಬೆಂಗಳೂರಿನ ರಸ್ತೆಗಳೆಲ್ಲಾ ಕೆರೆಗಳಾದವು. ನೀರು ಮನೆಗೆ ನುಗ್ಗಿತ್ತು. ತಗ್ಗು ಪ್ರದೇಶದ ಜನ ರಾತ್ರಿಯೆಲ್ಲಾ ನಿದ್ದೆ ಗೆಟ್ಟು, ಈಜುಕೊಳವಾಗಿದ್ದ ಮನೆಯಿಂದ ನೀರನ್ನು ಹೊರಕ್ಕೆ ಹಾಕುವ ಕಾಯಕದಲ್ಲಿ ನಿರತರಾಗಿದ್ದರು. ಇದು ಒಳಚರಂಡಿಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಜೆ.ಪಿ. ನಗರ, ಮುನೇಶ್ವರ ಬಡಾವಣೆ, ಶಾಕಾಂಬರಿ ನಗರ, ಪದ್ಮನಾಭನಗರ, ಚಾಮರಾಜಪೇಟೆ, ಬಸವನಗುಡಿ, ಕೋರಮಂಗಲ, ಅಲಸೂರು, ಇಂದಿರಾನಗರ, ದೊಮ್ಮಲೂರು, ರಾಜಾಜಿನಗರ, ಮಲ್ಲೇಶ್ವರದ, ವೈಯಾಲಿಕಾವಲ್‌ನ ತಗ್ಗು ಪ್ರದೇಶದ ಹಲವು ಮನೆಗಳು ಜಲಾವೃತವಾದವು.

ಜೆ.ಪಿ. ನಗರದ 2ನೇ ಹಂತದ 21ನೇ ಮುಖ್ಯರಸ್ತೆಯಲ್ಲಿ ಮಳೆ -ಗಾಳಿಗೆ ಮರಗಳು ನೆಲಕಚ್ಚಿದವು. ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆಯ ಮೇಲೆ ನಾಲ್ಕಾರು ಅಡಿ ನೀರು ಹರಿಯುತ್ತಿದ್ದರಿಂದ ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.

ಸಾಲದ್ದಕ್ಕೆ ಕೆಲವು ಬಡಾವಣೆಗಳಲ್ಲಿ ವಿದ್ಯುತ್‌ ಕೈಕೊಟ್ಟು, ಕತ್ತಲಲ್ಲಿ ಜನ ಮನೆಗೆ ನುಗ್ಗಿದ ನೀರು ಎತ್ತಲು ಪಟ್ಟ ಬವಣೆ ಅಷ್ಟಿಷ್ಟಲ್ಲ. ಕೆಲವು ಬಡಾವಣೆಗಳಲ್ಲಿ ಅಗ್ನಿಶಾಮಕ ಪಡೆಗಳು ಮನೆಗೆ ನುಗ್ಗಿದ ನೀರು ಹೊರತೆಗೆಯಲು ನೆರವಾದವು. ಬೆಂಗಳೂರಿನ ಹಲವು ಬಡಾವಣೆಯ ನಾಗರಿಕರು ಬೆಂಗಳೂರು ನಗರ ಪಾಲಿಕೆಗೆ ಫೋನ್‌ ಮಾಡಿದರಾದರೂ ಏನೂ ಪ್ರಯೋಜನ ಆಗಲಿಲ್ಲ.

ನೆನಪಿಡಿ, ಮಳೆ ಹಾವಳಿ ಅತಿಯಾದಾಗ ನೀವು ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ - 2221188. ಅವರು ನೆರವಿಗೆ ಬಾರದಿದ್ದರೆ ನಾವಂತೂ ಜವಾಬ್ದಾರರಲ್ಲ.

ಬಾಲಂಗೋಚಿ : ಅಮೆರಿಕಕ್ಕೆ ಹೋಗಿದ್ದ ಹಿರಿಯ ಪತ್ರಕರ್ತ ಮಿತ್ರರೊಬ್ಬರು. ಶುಕ್ರವಾರ ಬೆಂಗಳೂರಿಗೆ ಮರಳಿದರು. ಅವರು ಮೊನ್ನೆ ಜಾನ್‌ ಎಫ್‌ ಕೆನಡಿ ವಿಮಾನ ನಿಲ್ದಾಣಕ್ಕೆ ಬಂದಾಗ ಅಲ್ಲೂ ಧಾರಾಕಾರ ಮಳೆ ಸುರಿಯುತ್ತಿತ್ತು. ಅಲ್ಲಿಂದ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಾಗಲೂ ಭಾರೀ ವರ್ಷ ಧಾರೆ.

ಹೀಥ್ರೂನಿಂದ ಮುಂಬಯಿಗೆ ಬಂದಾಗ, ಬಾಂಬೆಯಲ್ಲೂ ಬೊಂಬಾಟ್‌ ಮಳೆ. ಅಲ್ಲಿಂದ ಬೆಂಗಳೂರಿಗೆ ಬಂದ ಅವರು, ಭಾರಿ ಮಳೆಯಲ್ಲಿ ನೆಂದು ಮನೆಗೆ ಬಂದರು. ಅಲ್ಲೂ ಮಳೆ, ಇಲ್ಲೂ ಮಳೆ, ಎಲ್ಲೆಲ್ಲೂ ಮಳೆ. (ಬರಪೀಡಿತ ಪ್ರದೇಶ ಹೊರತುಪಡಿಸಿ)

(ಇನ್‌ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+