Get Updates
Get notified of breaking news, exclusive insights, and must-see stories!

ಸಮರಕ್ಕೆ ಸಿದ್ಧವಾಗುವಂತೆ ಸೇನಾಪಡೆಗಳಿಗೆ ಬುಷ್‌ ಕರೆ : ಮೊಳಗಲಿದೆ ರಣಕಹಳೆ

ವಾಷಿಂಗ್ಟನ್‌ : ಸೆಪ್ಟೆಂಬರ್‌ 11ರಂದು ತನ್ನ ದೇಶದ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಮುಂದಾಗಿರುವ ಅಮೆರಿಕಾ, ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ಒಸಾಮಾ ಬಿನ್‌ ಲಾಡೆನ್‌ ವಿರುದ್ಧ ಹಾಗೂ ಭಯೋತ್ಪಾದನೆ ವಿರುದ್ಧ ಸಮರಕ್ಕೆ ಸಜ್ಜಾಗುವಂತೆ ಬುಷ್‌ ಕರೆ ನೀಡಿದ್ದಾರೆ.

ಭಾರತೀಯ ಕಾಲಮಾನದ ಪ್ರಕಾರ ಶುಕ್ರವಾರ ಬೆಳಗ್ಗೆ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ ಬುಷ್‌ ಈ ಕರೆ ನೀಡಿದ್ದಾರೆ. ಬುಷ್‌ ಅವರ ಭಾಷಣವನ್ನು ಅಮೆರಿಕ ಕಾಂಗ್ರೆಸ್‌ ಸ್ವಾಗತಿಸಿದೆ. ತಾವು ಯುದ್ಧಕ್ಕೆ ಸರ್ವ ಸಜ್ಜಾಗಿರುವುದಾಗಿ ಅಮೆರಿಕದ ರಕ್ಷಣಾ ಸಚಿವರು ತಿಳಿಸಿದ್ದಾರೆ.

ಈಗಾಗಲೇ ಅಮೆರಿಕದ 180ಕ್ಕೂ ಹೆಚ್ಚು ಅತ್ಯಾಧುನಿಕ ಸಮರ ವಿಮಾನಗಳು ಹಾಗೂ 14 ಸಮರ ನೌಕೆಗಳು ಹಾಗೂ ಸೇನಾಪಡೆ ಕಾಬೂಲ್‌ ಮೇಲೆ ದಾಳಿ ಮಾಡಲು ಆಯಕಟ್ಟಿನ ಸ್ಥಳದತ್ತ ಸಾಗಿವೆ. ಅಮೆರಿಕದ ದಾಳಿಗೆ ಪ್ರತಿದಾಳಿ ನೀಡಲು ಆಫ್ಘಾನಿಸ್ತಾನ ಕೂಡ ಸಿದ್ಧತೆ ನಡೆಸಿದೆ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಎಲ್ಲ ಉಗ್ರರಿಗೂ, ಅಮೆರಿಕಾ ವಿರುದ್ಧ ಯುದ್ಧ ಮಾಡಲು ಬರುವಂತೆ ತಾಲಿಬಾನ್‌ ಬುಲಾವ್‌ ನೀಡಿದೆ. ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಮೊಹಮ್ಮದ್‌ ಓಮರ್‌ ಕಾಶ್ಮೀರಿ ಉಗ್ರರಿಗೆ ಈ ಆಹ್ವಾನ ನೀಡಿದ್ದಾರೆ.

ಕಾಬೂಲ್‌, ಕಂದಹಾರ್‌ಗಳಲ್ಲಿ ಸರಕಾರಿ ಕಚೇರಿಗಳನ್ನು ತೆರವುಗೊಳಿಸಲಾಗಿದ್ದು, ಪರ್ವತ ಪ್ರದೇಶಗಳಲ್ಲಿ ಯುದ್ಧ ಸಿದ್ಧತೆ ನಡೆದಿದೆ. ಇದಕ್ಕೂ ಮುನ್ನ ಗುರುವಾರ ಮತ್ತೊಮ್ಮೆ ನಡೆದ ಉಲೇಮಾಗಳ (ಇಸ್ಲಾಮಿಕ್‌ ಪಂಡಿತರ) ಸಭೆಯಲ್ಲಿ ಸ್ವ ಇಚ್ಛೆಯಿಂದ ಆಫ್ಘಾನಿಸ್ತಾನ ತೊರೆಯುವಂತೆ ಬಿನ್‌ ಲಾಡೆನ್‌ಗೆ ಉಲೇಮಾಗಳು ಕರೆ ನೀಡಿದ್ದಾರೆ.

ಆಫ್ಘನ್‌ ಸೇನಾ ಕಚೇರಿಯನ್ನು ಸ್ಥಳಾಂತರಗೊಳಿಸಲಾಗಿದೆ. ಉಜ್ಬೇಕಿಸ್ತಾನದ ಗಡಿ ಪ್ರದೇಶವಾದ ಮಝುರ್‌ - ಇ - ಷರೀಫ್‌ ಮತ್ತು ಪಾಕ್‌ ಗಡಿಯಲ್ಲಿ ಭೂಸೇನಾ ಪಡೆಗಳನ್ನು ನಿಯೋಜಿಸಿದೆ. ಅಮೆರಿಕದ ಸಂಭವನೀಯ ವಾಯು ದಾಳಿಯನ್ನು ಎದುರಿಸಲು ತಾಲಿಬಾನ್‌ನ ಪ್ರಧಾನ ನಿಯಂತ್ರಣ ಕಚೇರಿಯನ್ನು ದುರ್ಬೇಧ್ಯವಾದ ಪರ್ವತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಷ್ಯದ ಬೇಹುಗಾರಿಕೆ ಮೂಲಗಳು ತಿಳಿಸಿವೆ.

  • ಅಮೆರಿಕನ್ನರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಬುಷ್‌ ಘೋಷಣೆ
  • ಯುದ್ಧಕ್ಕೆ ಪಾಕ್‌ ನೆರವಾಗುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ವಿರುದ್ಧದ ದಿಗ್ಭಂದನ ತೆರವುಗೊಳಿಸುವ ಬಗ್ಗೆ ಸಮಾಲೋಚನೆ ನಡೆದಿದೆ.
  • ಅಮೆರಿಕ ಅಥವಾ ಬ್ರಿಟನ್‌ನ ಎರಡು ಯುದ್ಧ ವಿಮಾನಗಳನ್ನು ತಾನು ಗುರುವಾರ ಹೊಡೆದುರುಳಿಸಿರುವುದಾಗಿ ಇರಾಕ್‌ ತಿಳಿಸಿದೆ ಎಂದು ಬಾಗ್ದಾದ್‌ ವರದಿಗಳು ಹೇಳಿವೆ.
  • ಸೆ.11ರ ದಾಳಿಗೆ ಕಾರಣ ಎನ್ನಲಾದ ಲಾಡೆನ್‌ ಸ್ವಇಚ್ಛೆಯಿಂದ ದೇಶ ತೊರೆಯುವಂತೆ ಉಲೇಮಾಗಳು ನೀಡಿರುವ ಕರೆಯನ್ನು ಅಮೆರಿಕಾ ವಿರೋಧಿಸಿದೆ. ಲಾಡೆನ್‌ನನ್ನು ಬೇಷರತ್ತಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿದೆ.
  • ಆಫ್ಘನ್‌ ವಿರುದ್ಧ ದಾಳಿ ನಡೆಸಲು ವಾಯು ನೆಲೆ ಕೇಳಿದರೆ, ಭಾರತ ಕೊಡಲು ಸಿದ್ಧ ಎಂದು ಆಡ್ವಾಣಿ ಹೇಳಿದ್ದಾರೆ.
  • ಹಿಂದೂ ಮಹಾಸಾಗರ, ಉಜ್ಬೇಕಿಸ್ತಾನ, ತಜಕಿಸ್ತಾನದ ನೆಲೆಗಳು ಯುದ್ಧನೌಕೆ, ಯೋಧರಿಂದ ತುಂಬಿವೆ. ವಾಷಿಂಗ್ಟನ್‌, ನ್ಯೂಯಾರ್ಕ್‌ ಮೇಲೆ ದಾಳಿ ಮಾಡಿದ ವಿಧ್ವಂಸಕರ ಸರ್ವನಾಶ ಮಾಡಲು ನಾವು ಹೊರಟಿದ್ದೇವೆ ಎಂದು ಅಮೆರಿಕದ ಭೂಸೇನಾ ಕಾರ್ಯದರ್ಶಿ ಥಾಮಸ್‌ ವೈಟ್‌ ಸಾರಿದ್ದಾರೆ.
(ಪಿ.ಟಿ.ಐ / ಇನ್‌ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+