ಮುಖ್ಯಮಂತ್ರಿಯಾಗಿ ಜಯಾ ನೇಮಕ ರದ್ದು-ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ : ತಮಿಳುನಾಡು ಮುಖ್ಯಮಂತ್ರಿಯಾಗಿ ಎ.ಐ.ಎ.ಡಿ.ಎಂ.ಕೆ. ನಾಯಕಿ ಜಯಲಲಿತಾ ಅವರ ನೇಮಕವನ್ನು ಸುರ್ಪಿಂಕೋರ್ಟ್ ರದ್ದು ಮಾಡಿದೆ. ಮೇ 14,2001ರಂದು ಅಧಿಕಾರವಹಿಸಿಕೊಂಡ ಜಯಲಲಿತಾ ಅವರ ನೇಮಕವು ಸಂವಿಧಾನ ಬಾಹಿರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ನೇಮಕ ನ್ಯಾಯಸಮ್ಮತವಲ್ಲದ ಕಾರಣ ಮತ್ತು ಸಂವಿಧಾನದ ಪರಿಧಿಯಾಳಗೆ ಬಾರದ ಕಾರಣ ಈ ನೇಮಕವನ್ನು ನಾವು ರದ್ದುಪಡಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ. ಐವರು ಸದಸ್ಯರ ನ್ಯಾಯಪೀಠ ಬಹುಮತದಿಂದ ಈ ತೀರ್ಮಾನ ಕೈಗೊಂಡಿದೆ. ಈ ನೇಮಕವನ್ನು ಸರ್ವೋನ್ನತ ನ್ಯಾಯಾಲಯ ಅಸಿಂಧು ಎಂದು ಘೋಷಿಸಿದೆ.
ನ್ಯಾಯಮೂರ್ತಿಗಳಾದ ಭರೂಚ, ನ್ಯಾಯಮೂರ್ತಿ ವೈ.ಕೆ. ಸಬರ್‌ವಾಲ್ ಮತ್ತು ನ್ಯಾಯಮೂರ್ತಿ ರುಮಾಪಾಲ್ ಅವರ ಬಹುಮತದ ಈ ಅಭಿಪ್ರಾಯಕ್ಕೆ ಉಳಿದಿಬ್ಬರು ನ್ಯಾಯಾಯಮೂರ್ತಿಗಳಾದ ನ್ಯಾಯಾಧೀಶ ಜಿ.ಬಿ. ಪಟ್ಟನಾಯಕ್ ಮತ್ತು ನ್ಯಾಯಾಧೀಸ ಬ್ರಿಜೇಶ್ ಕುಮಾರ್ ತಮ್ಮ ಅನುಮೋದನೆ ನೀಡಿದರು. ಈ ಮಹತ್ವದ ತೀರ್ಪು ಸರ್ವಸಮ್ಮತ ತೀರ್ಮಾನವಾಗಿ ಹೊರಬಿದ್ದಿದೆ.
ರಾಜ್ಯಪಾಲರ ಬಳಿಗೆ ಜಯಾ : ಸುಪ್ರೀಂಕೋರ್ಟ್ ಶುಕ್ರವಾರ ಬೆಳಗ್ಗೆ ನೀಡಿರುವ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ಕುಮಾರಿ ಜಯಲಲಿತಾ ಅವರು, ಶುಕ್ರವಾರ ಮಧ್ಯಾಹ್ನ ರಾಜ್ಯಪಾಲರಾದ ರಂಗರಾಜನ್ ಅವರನ್ನು ಭೇಟಿ ಮಾಡಲಿದ್ದಾರೆ.
ಜಯಲಲಿತಾ ಅವರಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಈಗ ಅನಿವಾರ್ಯವಾಗಿದ್ದು, ಶನಿವಾರ ಎಐಡಿಎಂಕೆ ಶಾಸಕಾಂಗ ಪಕ್ಷದ ತುರ್ತು ಸಭೆ ಕರೆದಿದ್ದಾರೆ. ಶನಿವಾರದ ಸಭೆಯಲ್ಲಿ ಹೊಸ ನಾಯಕನ ಆಯ್ಕೆ ಮಾಡುವ ಸಂಭವ ಇದೆ.
(ಪಿ.ಟಿ.ಐ / ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications