ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾರ ಹುಡುಕುತ್ತಾ ಮೈಸೂರಿಗೆ ನುಗ್ಗಿದ ಕಾಡು ಚಿರತೆ

By Staff
|
Google Oneindia Kannada News

ಮೈಸೂರು: ಶುಕ್ರವಾರ ಬೆಳಗ್ಗೆ ಮೈಸೂರಿನ ವಿದ್ಯಾವರ್ಧಕ ಕಾಲೇಜು ಬಳಿ ಹಠಾತ್‌ ಕಾಣಿಸಿಕೊಂಡ ದೊಡ್ಡಗಾತ್ರದ ಗಂಡು ಚಿರತೆಯಾಂದು ಹಲವರ ಮೇಲೆ ದಾಳಿ ಮಾಡಿ, ಗಾಯಗೊಳಿಸಿದೆ. ಚಿರತೆಯ ದಾಳಿಗೆ ಓರ್ವ ಪೊಲೀಸ್‌ ಪೇದೆ ಸಹಿತ ನಾಲ್ವರು ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ವಿದ್ಯಾವರ್ಧಕ ಕಾಲೇಜು ಬಳಿ ಚಿರತೆಯನ್ನು ನೋಡಿದ ಕೆಲವರು ದಿಕ್ಕಾಪಾಲಾಗಿ ಓಡಿದರೆ, ಹಲವರು ಚಿರತೆಯನ್ನು ನೋಡಲು ಗುಂಪುಗೂಡಿದರು. ಜನರ ಕೂಗಾಟ, ಕಿರುಚಾಟಕ್ಕೆ ಹೆದರಿದ ಚಿರತೆ ಮನೆಯಾಂದಕ್ಕೆ ನುಗ್ಗಿತು.

ವಿಷಯ ತಿಳಿದ ಮೈಸೂರು ಪೊಲೀಸ್‌ ಕಮೀಷನರ್‌ ಚಂದ್ರಶೇಖರ್‌ ಅವರು, ಅರಣ್ಯ ಇಲಾಖೆ ಮತ್ತು ಮೃಗಾಲಯದ ಸಿಬ್ಬಂದಿಯಾಂದಿಗೆ ಸ್ಥಳಕ್ಕೆ ಧಾವಿಸಿ, ಡಾ. ಲಾವಂಡಿಕರ್‌ ಮಾರ್ಗದರ್ಶನದಲ್ಲಿ ಮನೆಯಾಳಗೆ ಅಡಗಿದ್ದ ಚಿರತೆಗೆ, ತುಪಾಕಿಯ ಮೂಲಕ ಪ್ರಜ್ಞೆ ತಪ್ಪಿಸುವ ಇಂಜಕ್ಷನ್‌ ಚುಚ್ಚಿ , ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

90ಕ್ಕೂ ಹೆಚ್ಚು ನಿಮಿಷಗಳ ಕಾಲ ಈ ಚಿರತೆ ಬೇಟೆ ಕಾರ್ಯಾಚರಣೆ ಜರುಗಿತು. ಚಿರತೆಯು ಆಹಾರ ಹುಡುಕಿಕೊಂಡು ಊರಿಗೆ ನುಗ್ಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದ, ಪಡುವಾರಹಳ್ಳಿ ಚಿರತೆ ಕಾಣಿಸಿಕೊಂಡು ಪರಾರಿಯಾಗಿತ್ತು. ಆದರೆ, ಕೆಆರ್‌ಎಸ್‌ ಬಳಿಯ ಬೆಳಗೊಳ ಪ್ರದೇಶದ ಹುಲ್ಲಿನ ಪೊದೆಯಲ್ಲಿ ಅಡಗಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X