• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದುಗಳನ್ನು ಮರೆತಿರಾ? ಬುಷ್‌ ಸಾಹೇಬರಿಗೊಂದು ಬಹಿರಂಗ ಪತ್ರ

By Staff
|

ಪ್ರೀತಿಯ, ಮಾನ್ಯಬುಷ್‌ ಅವರೇ,

ವಿಷಯ : ನಿಮ್ಮ ಪ್ರಾರ್ಥನೆಯಲ್ಲಿ ಅಮೆರಿಕನ್‌ ಹಿಂದೂಗಳನ್ನೇಕೆ ಕೈಬಿಟ್ಟಿರಿ ?

ಮೊನ್ನೆ ಭಾನುವಾರ ನ್ಯೂಯಾರ್ಕ್‌ ದುರಂತದಲ್ಲಿ ಮಡಿದವರ ಆತ್ಮಗಳಿಗೆ ಶಾಂತಿ ಕೋರಿ ನೀವು ನಡೆಸಿದ ಪ್ರಾರ್ಥನೆಯಲ್ಲಿ ಕ್ರಿಶ್ಚಿಯನ್‌, ಜ್ಯೂಗಳು ಮತ್ತು ಮುಸ್ಲಿಮರನ್ನು ಹೆಸರಿಸಿದಿರಿ. ಅಲ್ಲದೆ ನಿಮ್ಮ ಉದ್ಘಾಟನಾ ಭಾಷಣದಲ್ಲಿ ತಮ್ಮ ಪ್ರಾರ್ಥನಾ ಮಂದಿರ, ಚರ್ಚ್‌ ಮತ್ತು ಮಸೀದಿಗೆ ತೆರಳಿ ಪ್ರಾರ್ಥಿಸುವಂತೆ ಅಮೆರಿಕನ್ನರನ್ನು ಆಗ್ರಹಿಸಿದಿರಿ. ನಮ್ಮನ್ನು ಮರೆತಿರಿ !

ಅಂದು, ಜನವರಿಯಲ್ಲಿ ನಾವು ಅಚ್ಚರಿಪಟ್ಟಿದ್ದೆವು. ಈಗ ಮತ್ತೊಮ್ಮೆ ಅಚ್ಚರಿ ಪಡಬೇಕಾದ ಸಂದರ್ಭ ಬಂದಿದೆ. ಯಾಕೆ ನೀವು ನಿಮ್ಮ ಪ್ರಾರ್ಥನೆಗಳಲ್ಲಿ ಹಿಂದೂಗಳನ್ನು ಉಲ್ಲೇಖಿಸುವುದಿಲ್ಲ ?ಮುಸ್ಲಿಂ ಉಲೇಮಾರು, ಧಾರ್ಮಿಕ ಉಪನ್ಯಾಸಕರು ಮತ್ತು ರಬ್ಬಿಗಳಿರುವ ಪ್ರಾರ್ಥನಾ ಸಭೆಯ ವೇದಿಕೆಗೆ ನೀವೇಕೆ ಹಿಂದೂ ಅರ್ಚಕನೊಬ್ಬನನ್ನು ಆಹ್ವಾನಿಸುವುದಿಲ್ಲ ? ರಾಷ್ಟ್ರದ ನಾಯಕನಾಗಿ ನೀವು ಅಮೆರಿಕಾದ ಬಹು ಸಾಂಸ್ಕೃತಿಕ ಸಮಾಜವನ್ನು ಗೌರವಿಸುತ್ತಲೇ ಬಂದಿದ್ದೀರಿ. ಆದರೆ ಇನ್ನೊಂದು ಕಡೆ, ನಿಮ್ಮ ಪ್ರಾರ್ಥನಾ ಸಭೆಯಲ್ಲಿ ಹಿಂದೂ ಅಮೆರಿಕನ್ನರನ್ನು ಮತ್ತೆ ಮತ್ತೆ ಕೈಬಿಡುತ್ತಲೇ ಬಂದಿದ್ದೀರಿ.

ವಿಶ್ವ ವ್ಯಾಪಾರ ಕೇಂದ್ರದಲ್ಲಿ ಎಷ್ಟು ಸಾವಿರ ಭಾರತೀಯರು ಕೆಲಸ ಮಾಡುತ್ತಿದ್ದರು ಗೊತ್ತೇ ? ಅವರಲ್ಲಿ ನೂರಾರು ಮಂದಿ ಕಾಣೆಯಾಗಿದ್ದಾರೆ ಅಥವಾ ಮೃತರಾಗಿದ್ದಾರೆ ಎಂಬುದೂ ನಿಮ್ಮ ಮನಸ್ಸಿಗೆ ಬರುವುದಿಲ್ಲವೇ ?

ಉತ್ತರ ಅಮೆರಿಕಾದಲ್ಲಿ 800 ಹಿಂದೂ ದೇವಸ್ಥಾನಗಳಿವೆ. ಅಮೆರಿಕಾದ ಪ್ರತಿ ಪ್ರಮುಖ ನಗರದಲ್ಲಿ ಕನಿಷ್ಠ ಒಂದು ದೇವಸ್ಥಾನವಾದರೂ ಇದೆ. ಉತ್ತರ ಅಮೆರಿಕಾದಲ್ಲಿರುವ ಪ್ರತಿಯಾಂದು ದೇವಸ್ಥಾನವೂ ವಿಶ್ವ ವ್ಯಾಪಾರ ಕೇಂದ್ರದ ದುರಂತದಲ್ಲಿ ಮಡಿದವರಿಗಾಗಿ, ಕಾಣೆಯಾದವರಿಗಾಗಿ ವಾರಾಂತ್ಯದಲ್ಲಿ ಪ್ರಾರ್ಥನೆಗಳನ್ನು ಆಯೋಜಿಸಿತ್ತು.

ಅಮೆರಿಕದ ಬೊಕ್ಕಸಕ್ಕೆ ಹಿಂದೂಗಳು ಎಷ್ಟು ಟ್ಯಾಕ್ಸ್‌ ಕೊಡುತ್ತಾರೆ ಗೊತ್ತಾ ?

ಹಿಂದೂ ಅಮೆರಕನ್ನರು ಈ ದೇಶದ ಪ್ರಜೆಗಳೇ. ಅಮೆರಿಕನ್‌ ಸಮಾಜಕ್ಕೆ ಹಿಂದೂಗಳ ಕೊಡುಗೆ ಇದ್ದೇ ಇದೆ. ಹಿಂದೂ ಅಮೆರಿಕನ್‌ ಪ್ರಜೆ ಎಷ್ಟೊಂದು ತೆರಿಗೆ ನೀಡುತ್ತಾನೆ ! ಈ ದೇಶದ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ನಮ್ಮ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಶಾಲೆ- ಕಾಲೇಜುಗಳು, ಬ್ಯಾಂಕ್‌, ಆಸ್ಪತ್ರೆ, ಕಾನೂನು ಸಂಸ್ಥೆಗಳು, ಲೆಕ್ಕ ಪರಿಶೋಧನಾ ವಿಭಾಗಗಳು, ಉನ್ನತ ತಂತ್ರಜ್ಞಾನ ಸಂಸ್ಥೆಗಳು, ಸಣ್ಣ ಉದ್ಯಮಗಳು, ಹೊಟೇಲ್‌ಗಳು, ಟ್ಯಾಕ್ಸಿ ಡ್ರೆೃವರ್‌ಗಳು, ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳು, ಗ್ಯಾಸ್‌ ಸ್ಟೇಷನ್‌ಗಳಲ್ಲಿ... ಹೀಗೆ ದೇಶದಲ್ಲಿ ಎಲ್ಲೆಲ್ಲೂ ಹಿಂದೂಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎನ್ನು ವ ಸಂಗತಿ ಅಂಗೈ ಮೇಲಿನ ನೆಲ್ಲಿಕಾಯಿ !

ಅಮೆರಿಕಾದ ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ಅಡಿಪಾಯದಲ್ಲಿ ಹಿಂದೂಗಳ ಮುಖ್ಯ ಪಾತ್ರವಿದೆ. ಆದರೆ ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಸೇರಿಸಿಕೊಳ್ಳದೇ ಹೋದಿರಿ. ನಿಮ್ಮ ದೇಶದ ಧಾರ್ಮಿಕ ಸಂಸ್ಕೃತಿಯ ಮಾತುಗಳಲ್ಲಿ ನಮ್ಮ ದೇವಸ್ಥಾನಗಳ ಉಲ್ಲೇಖವೇ ಇಲ್ಲ ! ಅಮೆರಿಕಾದ ಎಲ್ಲ ಕ್ಷೇತ್ರಗಳಲ್ಲೂ ದುಡಿಯಲು ನಾವು ಬೇಕು. ಆದರೆ ಇಡೀ ಅಮೆರಿಕಾದ ಸಮುದಾಯದ ವಿಚಾರ ಬಂದಾಗ ನಾವು ಬೇಡ, ಏನ್ಸಮಾಚಾರ ? ನಾವೇನು ಕರಿಬೇವಿನ ಸೊಪ್ಪಾ ?

ಮಾನ್ಯ ಬುಷ್‌ ಅವರೇ, ದಯವಿಟ್ಟು, ಮುಂದಿನ ಸಾರಿಯಾದರೂ ನಿಮ್ಮ ಸಾರ್ವಜನಿಕ ಶಾಂತಿ ಪ್ರಾರ್ಥನಾ ಸಭೆಯ ವೇದಿಕೆಯಲ್ಲಿ ಜರ್ಮನಿಯ ಪುರೋಹಿತಶಾಹಿ, ಮುಲ್ಲಾಗಳು, ರಬ್ಬಿಗಳು, ಕ್ಯಾಥೊಲಿಕ್‌ ಅರ್ಚಕರ ಜೊತೆ ಹಿಂದೂ ಅರ್ಚಕರೊಬ್ಬರು ಇರಲಿ. ಹಿಂದೂಗಳು ಶಾಂತಿ ಪ್ರಿಯರು. ನಮಗೆ ಆತಿಥ್ಯ ನೀಡಿದ ದೇಶದ ವಿರುದ್ಧ ಹಿಂಸಾತ್ಮಕ ಬೆದರಿಕೆಯನ್ನು ನಾವೆಂದೂ ಹಾಕಲಾರೆವು. ಜಾಗತಿಕ ಹಿಂದೂ ಭಯೋತ್ಪಾದಕ ಸಂಘಟನೆಯೆಂಬುದು ಈ ಲೋಕದಲ್ಲಿಯೇ ಇಲ್ಲ. ಆದರೆ ಬಿಲಿಯಗಟ್ಟಲೆ ಹಿಂದೂಗಳು ಈ ಭೂಮಿ ಮೇಲೆ ಬದುಕುತ್ತಿದ್ದಾರೆ. ಇದು ಜಗತ್ತಿನ ಅತ್ಯಂತ ಪುರಾತನ ಧರ್ಮ.

ಅಮೆರಿಕನ್‌ ಹಿಂದೂಗಳನ್ನು ಆದರ್ಶ ಪ್ರಜೆಗಳೆಂದು ಕರೆಯುತ್ತಾರೆ. ಯಾಕೆ ಗೊತ್ತೇ ? ನಾವು ಬಹು ಸಾಂಸ್ಕೃತಿಕತೆಯನ್ನು ಮತ್ತು ಸಹಿಷ್ಣುತೆಯನ್ನು ಅಳವಡಿಸಿಕೊಂಡು ಬಂದ ಧರ್ಮದವರು. ಕುಟುಂಬ ಜೀವನನ್ನು ಪೋಷಿಸುವವರು. ನಮ್ಮಲ್ಲಿ ವಿಚ್ಛೇದನಗಳ ಸಂಖ್ಯೆ ತೀರಾ ಸಣ್ಣದು. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಉಳಿತಾಯ ಮಾಡುತ್ತೇವೆ. ನಮ್ಮ ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತೇವೆ. ಮನೆ ನಮಗೆ ಪವಿತ್ರ. ಅಲ್ಲದೆ, ಅಮೆರಿಕನ್‌ ಹಿಂದೂಗಳು ಉನ್ನತ ವಿದ್ಯಾಭ್ಯಾಸ ಪಡೆದವರು. ಪ್ರಜ್ಞಾವಂತರು. ನಿಮ್ಮ ಸಾರ್ವಜನಿಕ ಪ್ರಾರ್ಥನಾ ಸಭೆಯನ್ನು ಪ್ರತಿನಿಧಿಸಲು ಹಿಂದೂಗಳು ಖಂಡಿತಾ ಅರ್ಹರು.

ಹಿಂದೂಗಳು ಯಾರೆನ್ನುವುದನ್ನು ಅಮೆರಿಕಾಕ್ಕೆ ಹೇಳಿ

ವಿಶ್ವ ವ್ಯಾಪಾರ ಕೇಂದ್ರದ ದಾಳಿಯ ನಂತರ ಉತ್ತರ ಅಮೆರಿಕಾದ ಹಿಂದೂ ಭಾರತೀಯರು ಮತ್ತು ಅವರ ಪ್ರಾರ್ಥನಾ ಮಂದಿರಗಳು ದಾಳಿಗೆ ತುತ್ತಾದವು. ಯಾಕೆಂದರೆ ಅಮೆರಿಕ್ನರಿಗೆ ಹಿಂದೂತ್ವ ಮತ್ತು ಇಸ್ಲಾಂ ಮತದ ಬಗೆಗಿನ ವ್ಯತ್ಯಾಸ ಗೊತ್ತಿಲ್ಲ. ಹಿಂದೂಗಳು ಶಾಂತಿ ಪ್ರಿಯರು ಮತ್ತು ಅಮೆರಿಕಾ ಸಮಾಜದ ಅವಿಭಾಜ್ಯಅಂಗ ಎಂಬ ನಿಮ್ಮ ಮಾತು ಹಿಂದೂತ್ವದ ಬಗ್ಗೆ ಅಮೆರಿಕನ್ನರಿಗೆ ಸಾಕಷ್ಟು ತಿಳಿಸಿ ಕೊಟ್ಟೀತು. ದಯವಿಟ್ಟು ಈ ನಿಟ್ಟಿನಲ್ಲಿ ನೀವು ಅಮೆರಿಕನ್ನರಿಗೆ ಸಹಕರಿಸಬೇಕು.

ಈ ದೇಶದ ಆಗುಹೋಗುಗಳಲ್ಲಿ ಸುಮಾರು ಎರಡು ಮಿಲಿಯನ್‌ ಹಿಂದೂಗಳು ಪಾತ್ರವಹಿಸಿದ್ದಾರೆ. ಜೊತೆಗೆ ಇನ್ನೂ 20 ಮಿಲಿಯನ್‌ ಜನರು ಹಿಂದೂ ಧರ್ಮದ ಯೋಗ, ಧ್ಯಾನ ಮುಂತಾದ ಪದ್ಧತಿಗಳನ್ನು ಮೆಚ್ಚಿಕೊಂಡವರು. ಆದ್ದರಿಂದ ದಯವಿಟ್ಟು ಇನ್ನು ಮುಂದೆ ನಮ್ಮನ್ನು ಅಲಕ್ಷಿಸಬೇಡಿ. ವಾಷಿಂಗ್ಟನ್‌ನ ಕಾನೂನು ತಜ್ಞರು ಮತ್ತಿತರರು ಹಿಂದೂಗಳನ್ನು ತಮ್ಮ ಪ್ರಾರ್ಥನಾ ಸಭೆಯಲ್ಲಿ ಸೇರಿಸಿಕೊಳ್ಳುತ್ತಾರೆ. ಮತ್ತೊಮ್ಮೆ ವಿಜ್ಞಾಪನೆ : ನಿಮ್ಮ ಧಾರ್ಮಿಕ ಸಭೆಯಲ್ಲಿ ಇನ್ನು ಮುಂದೆ ಹಿಂದೂಗಳನ್ನು ಸೇರಿಸಿಕೊಳ್ಳಿ ಮತ್ತು ಪೂಜಾ ಸ್ಥಳಗಳ ಪಟ್ಟಿಯಲ್ಲಿ ಹಿಂದೂ ದೇವಸ್ಥಾನಗಳ ಉಲ್ಲೇಖವಿರಲಿ.

ದೇವರು ಅಮೆರಿಕಾವನ್ನು ಚೆನ್ನಾಗಿಟ್ಟಿರಲಿ !

ಗೌರವ ಪೂರ್ವಕ,

ವಿ.ಎಂ. ಕುಮಾರ ಸ್ವಾಮಿ,

‘ಅಕ್ಕ’ ಟ್ರಸ್ಟಿ ಮತ್ತು ನಿರ್ದೇಶಕ,

ದಕ್ಷಿಣ ಕ್ಯಾಲಿಫೋರ್ನಿಯಾ ಕೆಸಿಎಯ ಮತ್ತು ‘ಅಕ್ಕ’ದ ಆಜೀವ ಸದಸ್ಯ

949-857-8044

949-857-8578

714-542-9976.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more