Get Updates
Get notified of breaking news, exclusive insights, and must-see stories!

ಅಫ್ಘಾನಿಸ್ತಾನ್‌ ನೆಪವಷ್ಟೆ, ಯುದ್ಧ ಭಯೋತ್ಪಾದನೆಯ ವಿರುದ್ಧ -ಅಟಲ್‌

ನವದೆಹಲಿ : ಭಯೋತ್ಪಾದನೆ ಅಂತರರಾಷ್ಟ್ರೀಯ ಪಿಡುಗು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಅಮೆರಿಕ ಶಕ್ಯವಾಗಿದೆ. ಪ್ರಸ್ತುತ ಜಗತ್ತಿನಲ್ಲಿರುವ ಭಯೋತ್ಪಾದನಾ ಪಿಡುಗಿನ ಸಂಕೇತವಾದ ಅಫ್ಘಾನಿಸ್ತಾನದ ವಿರುದ್ಧ ಹೋರಾಡುತ್ತದೋ ಅಥವಾ ಭಯೋತ್ಪಾದನೆಯನ್ನೇ ನಿರ್ಮೂಲಗೊಳಿಸಲು ಹೋರಾಡುತ್ತದೋ ಎನ್ನುವುದು ಸ್ವತಂತ್ರ ರಾಷ್ಟ್ರವಾದ ಅಮೆರಿಕದ ನಿರ್ಣಯಕ್ಕೇ ಬಿಟ್ಟದ್ದು ಎಂದು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ಭಾರತದ ಬಗ್ಗೆ ಮುಷರ್ರಫ್‌ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮಾತನಾಡುತ್ತಿದ್ದ ಅವರು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದ ಬೆಂಬಲವನ್ನು ಅಮೆರಿಕಾ ಸ್ವಾಗತಿಸಿದ್ದರೂ, ಭಾರತದ ಕಹಿ ಅನುಭವ, ಭಯೋತ್ಪಾದನೆ ನಿರ್ಮೂಲಗೊಳಿಸಲು ಭಾರತದ ಪ್ರಯತ್ನದ ಬಗ್ಗೆ ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ . ಲ್ಯಾಡೆನ್‌ನ್ನು ವಶಕ್ಕೆ ತೆಗೆದುಕೊಂಡ ನಂತರವಾದರೂ ಅಮೆರಿಕಾ ಈ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಪ್ರಧಾನಿ ಆಶಿಸಿದರು.

ಅಫ್ಘಾನಿಸ್ತಾನ ರಾಷ್ಟ್ರದ ಹೊರತಾಗಿಯೂ ಅಮೆರಿಕಾ ಯೋಚಿಸಬೇಕಾಗಿದೆ. ಭಯೋತ್ಪಾದನೆಯನ್ನು ಪೋಷಿಸಿರುವ ರಾಷ್ಟ್ರಗಳನ್ನೂ ಅಮೆರಿಕಾ ಪರಿಗಣಿಸಬೇಕಾಗಿದೆ. ಆ ಮೂಲಕ ಭಯೋತ್ಪಾದನೆಯ ಬೇರನ್ನು ಕಿತ್ತೊಗೆಯಲು ಮುಂದಾಗಬೇಕಾಗಿದೆ.

ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರಲು ಭಾರತ ಬಯಸುತ್ತಿದೆ ಎಂಬ ಮುಷರ್ರಫ್‌ಅವರ ಹೇಳಿಕೆಯ ಬಗೆ ್ಗ ಮಾತನಾಡಿದ ವಾಜಪೇಯಿ, ಪಾಕಿಸ್ತಾನದ ಹಲವು ಸಂಘಟನೆಗಳನ್ನು ಅಮೆರಿಕಾ ಭಯೋತ್ಪಾದಕ ಸಂಘಗಳೆಂದು ಘೋಷಿಸಿದೆ. ಪಾಕಿಸ್ತಾನವನ್ನು ಭಯೋತ್ಪಾಕ ದೇಶವೆಂದು ಘೋಷಿಸಬೇಕೆಂಬ ಬೇಡಿಕೆ ತುಂಬಾ ಹಳೆಯದು. ಈ ಬಗ್ಗೆ ಅಮೆರಿಕಾ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಅಮೆರಿಕಾ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಕೃತ್ಯಗಳೇನೂ ನಡೆದಿಲ್ಲವಷ್ಟೆ ಎಂದರು.

(ಇನ್ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+