Get Updates
Get notified of breaking news, exclusive insights, and must-see stories!

ಪಾಕ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಖರೀದಿಸಲು ಲ್ಯಾಡನ್‌ ಬಳಗ ಸಿದ್ಧ

ಇಸ್ಲಮಾಬಾದ್‌: ಅತ್ಯಾಶ್ಚರ್ಯಕರ ಬೆಳವಣಿಗೆಯಾಂದರಲ್ಲಿ ಒಸಾಮಾ ಬಿನ್‌ ಲ್ಯಾಡೆನ್‌ನ ಸೌದಿ ಅರೇಬಿಯಾ ಮೂಲದ ಸಹಚರರ ಗುಂಪು ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ಮತ್ತು ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಇನ್‌ವೆಸ್ಟ್‌ ಮೆಂಟ್‌ ಲಿಮಿಟೆಡ್‌ನ(ಪಿಐಎಐಎಲ್‌) ಎಲ್ಲ ಷೇರುಗಳನ್ನು ಕೊಳ್ಳಲು ಮುಂದೆ ಬಂದಿರುವುದಾಗಿ ವರದಿಯಾಗಿದೆ.

ಬಿನ್‌ ಲ್ಯಾಡೆನ್‌ ಗುಂಪು ಪಿಐಎ ಮತ್ತು ಪಿಐಎಐಎಲ್‌ನ್ನು ಕೊಳ್ಳುವ ಪ್ರಸ್ತಾವನೆಯನ್ನು ಮುಂದಿಟ್ಟಿರುವುದಾಗಿ ಪಾಕ್‌ನ ‘ದ ನ್ಯೂಸ್‌’ ಪತ್ರಿಕೆ ಗುರುವಾರ ವರದಿ ಮಾಡಿದೆ. ಸೌದಿ ಅರೇಬಿಯಾದಲ್ಲಿ ಬಿನ್‌ ಲ್ಯಾಡೆನ್‌ ಗುಂಪೇ ಅತೀ ಹೆಚ್ಚು ಸಂಪತ್ತನ್ನು ಹೊಂದಿದೆ. ಪಿಐಎ, ಪಾಕ್‌ ಸರಕಾರದ ಅಧೀನದಲ್ಲಿರುವ ಏಕೈಕ ಏರ್‌ಲೈನ್ಸ್‌ ಆಗಿದೆ. ಪಿಐಎಐಎಲ್‌ ಸ್ವಾಯತ್ತ ಸಂಸ್ಥೆಯಾಗಿದ್ದು ನ್ಯೂಯಾರ್ಕ್‌ ಹೋಟೆಲ್‌ ಮತ್ತು ಇತರ ಇಂಟರ್‌ನ್ಯಾಷನಲ್‌ ಹೊಟೇಲ್‌ ವ್ಯವಹಾರಗಳನ್ನು ಹೊಂದಿದೆ.

ಪಿಐಎಯ ಇತರ ವ್ಯವಹಾರಗಳನ್ನೂ ಕೊಳ್ಳಲು ಲ್ಯಾಡೆನ್‌ ಗ್ರೂಪ್‌ ಸಿದ್ಧವಿದೆ. ಆದರೆ ಈ ಬಗ್ಗೆ ಪಿಐಎ ಆಡಳಿತ ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಈ ಪ್ರಸ್ತಾವನೆ ಪರಿಶೀಲನೆಯಲ್ಲಿರುವುದಾಗಿ ಪಿಐಎಯ ಉನ್ನತ ಮೂಲಗಳು ತಿಳಿಸಿರುವುದಾಗಿ ಪಿಟಿಐ ಹೇಳಿದೆ.

(ಪಿಟಿಐ)

Post Your Views

ಮುಖಪುಟ / ಭಯೋತ್ಪಾದನೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+