ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ತಲೆಯ ಮೇಲೆ ಗನ್ನಿಟ್ಟಾಗ ಬೆಂಬಲಿಸಬೇಕಾಯ್ತು - ಮುಷರ್ರಫ್‌

By Staff
|
Google Oneindia Kannada News

ಇಸ್ಲಮಾಬಾದ್‌: ಅಮೆರಿಕೆಗೆ ಸಂಪೂರ್ಣ ಸಹಕಾರ ನೀಡಿರುವ ಹಿಂದಿನ ಕಾರಣವನ್ನು ಪಾಕಿಸ್ತಾನದ ಅಧ್ಯಕ್ಷ ಜನರಲ್‌ ಮುಷರ್ರಫ್‌ ಕೊನೆಗೂ ಬಹಿರಂಗಪಡಿಸಿದ್ದಾರೆ. ಸಹಕಾರ ನೀಡದಿದ್ದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ರಾಷ್ಟ್ರವನ್ನಾಗಿ ಪರಿಗಣಿಸಲಾಗುವುದು ಎಂದು ಅಮೆರಿಕ ಸ್ಪಷ್ಟವಾಗಿ ತಿಳಿಸಿದ್ದರಿಂದ, ಅಮೆರಿಕಾಗೆ ಸಹಕಾರ ನೀಡದೆ ದಾರಿಯಿರಲಿಲ್ಲ ಎಂದು ಮುಷರ್ರಫ್‌ ತಿಳಿಸಿದ್ದಾರೆ.

ಅಮೆರಿಕಾಗೆ ಬೆಂಬಲ ಘೋಷಿಸಿರುವ ತಮ್ಮ ಕ್ರಮಕ್ಕೆ ಸಮಾಜದ ಎಲ್ಲ ವರ್ಗಗಳ ಬೆಂಬಲವನ್ನು ಕೋರುವ ಸಭೆಯಲ್ಲಿ ಮಂಗಳವಾರ ಮಾತನಾಡುತ್ತಿದ್ದ ಮುಷರ್ರಫ್‌ ಸಭೆಗೆ ಈ ವಿಷಯ ತಿಳಿಸಿದರು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ. ಮಾಜಿ ಮಂತ್ರಿಗಳು, ನಿವೃತ್ತ ಸೇನಾ ನಾಯಕರು ಹಾಗೂ ಬುದ್ಧಿಜೀವಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಪಾಕಿಸ್ತಾನ ಅಮೆರಿಕಾಗೆ ಶತ್ರುವೇ ಅಥವಾ ಮಿತ್ರನೇ ಅನ್ನುವುದನ್ನು ಸ್ಪಷ್ಟಪಡಿಸಲು ಬುಷ್‌ ಆಡಳಿತ ಕೇಳಿದಾಗ, ಆ ರಾಷ್ಟ್ರದ ಒತ್ತಡಗಳನ್ನು ಒಪ್ಪದೆ ಇರಲು ಸಾಧ್ಯವಿರಲಿಲ್ಲ . ಒಪ್ಪದೆ ಇದ್ದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಅಮೆರಿಕಾ ಘೋಷಿಸುತ್ತಿತ್ತು ಎಂದು ಮುಷರ್ರಫ್‌ ಸಭೆಯಲ್ಲಿ ತಿಳಿಸಿದರು. ಪ್ರಸ್ತುತ ಪಾಕಿಸ್ತಾನದ ನಡಾವಳಿ ಮುಂದಿನ ದಿನಗಳಲ್ಲಿ ವಾಷಿಂಗ್ಟನ್‌ನೊಂದಿಗೆ ಉತ್ತಮ ಸಂಬಂಧ ಸಾಧಿಸಲು ಅನುಕೂಲವಾದೀತು ಎನ್ನುವ ಆಶಾವಾದವನ್ನು ಅವರು ವ್ಯಕ್ತಪಡಿಸಿದರು.

ಪಾಕಿಸ್ತಾನದ ವಾಯುನೆಲೆಯನ್ನು ಬಳಕೆ, ಇಂಟೆಲಿಜೆನ್ಸ್‌ ಇನ್‌ಫಾರ್ಮೇಷನ್‌ ಸೇರಿದಂತೆ ಭಯೋತ್ಪಾದಕತೆಯ ವಿರುದ್ಧದ ಹೋರಾಟದಲ್ಲಿ ಬೆಂಬಲಿಸುವ ನಿರ್ಣಯ ತಿಳಿಸಲು ಅಮೆರಿಕ ಡೆಡ್‌ಲೈನ್‌ ಗೊತ್ತುಪಡಿಸಿತ್ತು . ನಾನು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧನಿರಲಿಲ್ಲ . ಬೇಡಿಕೆಗಳನ್ನು ಒಪ್ಪದಿದ್ದಲ್ಲಿ ಅಮೆರಿಕಾ ದಾಳಿ ನಡೆಸಲೂ ಸಿದ್ಧವಿತ್ತು ಎಂದು ಮುಷರ್ರಫ್‌ ಹೇಳಿದುದಾಗಿ ಡಾನ್‌ ವರದಿ ತಿಳಿಸಿದೆ.

ಮುಷರ್ರಫ್‌ ಅಮೆರಿಕವನ್ನು ಬೆಂಬಲಿಸುವ ಮುನ್ನ ಸಮಾಜದ ವಿವಿಧ ವರ್ಗಗಳ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಾಗಿತ್ತೆಂದು ಸಭೆಯಲ್ಲಿ ಕೆಲವು ನಾಯಕರು ಅಭಿಪ್ರಾಯಪಟ್ಟರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X