ಜಯಲಲಿತಾ ಸ್ಪರ್ಧೆಗೆ ಅನುವಾಗುವಂತೆ ಎಐಡಿಎಂಕೆ ಶಾಸಕನ ರಾಜೀನಾಮೆ
ಚೆನ್ನೈ: ಕುತೂಹಲಕಾರಿ ಬೆಳವಣಿಗೆಯಾಂದರಲ್ಲಿ ಎಐಎಡಿಎಂಕೆ ಶಾಸಕ ತಂಗ ತಮಿಳುಸೆಲ್ವಂ ತಮ್ಮ ಆಂಡಿಪಟ್ಟಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯ ಕುರಿತೂ ಪ್ರಸ್ತುತ ಪ್ರಶ್ನೆಗಳು ಉಳಿದಿದ್ದರೂ, ಅವರು ಶಾಸಕರಾಗಿ ಚುನಾಯಿತರಾಗಲು ಅವಕಾಶ ಕಲ್ಪಿಸಿಕೊಡುವುದು ಈ ರಾಜೀನಾಮೆಯ ಉದ್ದೇಶ ಎನ್ನಲಾಗಿದೆ.
ನವಂಬರ್ 13 ಜಯಾ ಶಾಸಕರಾಗಿ ಆಯ್ಕೆಯಾಗಲು ಕೊನೆಯ ದಿನ. ಆದರೆ, ಈವರೆಗೂ ಜಯಲಲಿತಾ ಅವರ ಮೇಲಿನ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದ್ದು, ಜಯಲಲಿತಾ ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಷಯ ಕಗ್ಗಂಟಾಗಿಯೇ ಉಳಿದಿದೆ.
ಮೇ 10, 2000 ಚುನಾವಣೆಗಳಲ್ಲಿ ಜಯಲಲಿತಾ ಸ್ಪರ್ಧಿಸ ಬಯಸಿದ್ದ 4 ಕ್ಷೇತ್ರಗಳಲ್ಲಿ ಆಂಡಿಪಟ್ಟಿ ಕೂಡ ಒಂದಾಗಿತ್ತು . ಆದರೆ ಪೀಪಲ್ ಆಕ್ಟ್ ಪ್ರಕಾರ ಅವರ ನಾಲ್ಕೂ ನಾಮಪತ್ರಗಳನ್ನು ತಿರಸ್ಕರಿಸಲಾಗಿತ್ತು . ಜಯಲಲಿತಾ ಅವರ ಗುರು ಎಂ.ಜಿ.ರಾಮಚಂದ್ರನ್ ಅವರು ಕೂಡ ಆಂಡಿಪಟ್ಟಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ತಮಿಳುಸೆಲ್ವಂ ಅವರು ಸೆಪ್ಟಂಬರ್ 15 ರಿಂದಲೇ ಅನ್ವಯಿಸುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸಭಾಧ್ಯಕ್ಷ ಕೆ.ಕಾಲಿಮುತ್ತು ಅವರು ಸೆಲ್ವಂ ರಾಜೀನಾಮೆ ಅಂಗೀಕೃತವಾಗಿದ್ದು, ಆಂಡಿಪಟ್ಟಿ ಕ್ಷೇತ್ರ ತೆರವಾಗಿದೆಯೆಂದು ಬುಧವಾರ ಪ್ರಕಟಿಸಿದ್ದಾರೆ.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications