ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜ್‌ ಕ್ಯಾಂಪಸ್ಸಿನ ಸುತ್ತ- ಮುತ್ತ....

By Staff
|
Google Oneindia Kannada News

A view of IIJNM buildingಸುಗತ ಅವರ ಪ್ರತಿಕ್ರಿಯೆ...ಸನ್ಯಾಲ್‌ ಅವರೂ ಇಲ್ಲಿ ಕೆಲಸ ಮಾಡುತ್ತಿದ್ದರು. ನಾನೂ ಮಾಡುತ್ತಿದ್ದೇನೆ. ಅವರನ್ನು ಮನೆಗೆ ಕಳುಹಿಸಿದ್ದು ಯಾಕೆ ಅಂತ ನಾನು ಹೇಳಲಾರೆ. ಮೇನೇಜ್‌ಮೆಂಟ್‌ ನಿಮಗೆ ಉತ್ತರ ಕೊಡಬಹುದು. (ಸುಗತ ಮುಗುಮ್ಮಾಗುತ್ತಾರೆ)

ವಿದ್ಯಾರ್ಥಿಗಳನ್ನು ಪ್ರಶ್ನೆ ಕೇಳಿದರೆ.... ಖರೆ ಉತ್ತರ ಸಿಗುತ್ತಿಲ್ಲ. ಕಂಡಾಪಟ್ಟೆ ದುಡ್ಡು ಕೊಟ್ಟು ಬಂದಿರುವ ಅವರಿಗೆ ಕೋರ್ಸು ಎಲ್ಲಿ ಮಧ್ಯದಲ್ಲಿ ನಿಂತುಹೋಗುತ್ತದೋ ಅನ್ನುವ ಆತಂಕ. ಕೆಲವರು ಹಿಂದೂಮುಂದೂ ನೋಡಿ ಜ್ಯೋತಿ ಸನ್ಯಾಲ್‌ ಒಳ್ಳೆ ಮೇಷ್ಟ್ರು ಅಂತ ಹೇಳುತ್ತಾರೆ. ಇದರ ಬಗ್ಗೆ ಏನೂ ಹೇಳದೇ ಇರೋದೇ ಒಳ್ಳೇದು ಅನ್ನುವ ಥರಾ ಮಾತಾಡುತ್ತಾರೆ.

ಕೋರ್ಸು ಶುರುವಾದದ್ದು ವರ್ಷದ ಹಿಂದೆ. ಮೊದಲ ಬ್ಯಾಚ್‌ನಲ್ಲಿ ಸೇರಿದ್ದು ಐದೇ ವಿದ್ಯಾರ್ಥಿಗಳು. ಎರಡನೇ ಬ್ಯಾಚ್‌ನಲ್ಲಿ 15 ವಿದ್ಯಾರ್ಥಿಗಳು ಪತ್ರಿಕೋದ್ಯಮ ಕಲಿಯುವ ತುಡಿತದಿಂದ ಈ ಸಂಸ್ಥೆಗೆ ಸೇರಿದ್ದಾರೆ. ಸಿಕ್ಕಾಪಟ್ಟೆ ದುಡ್ಡು ಸುರಿದು ಕಟ್ಟಿಸಿರುವ ಹಾಸ್ಟೆಲ್‌ಗೆ ಮಳೆ ಬಂದರೆ ನೀರು ನುಗ್ಗುತ್ತದೆ. ಇದಕ್ಕೆ ಪ್ರತಿ ವಿದ್ಯಾರ್ಥಿ ವರ್ಷಕ್ಕೆ 25 ಸಾವಿರ ರುಪಾಯಿಗೂ ಹೆಚ್ಚು ಹಣ ತೆರುತ್ತಿದ್ದಾನೆ.

IIJNM, inner view of the buildingಇಲ್ಲಿ ಪಾಠ ಹೇಳುವವರ್ಯಾರು? : ಕೊಲಂಬಿಯಾ ಯೂನಿವರ್ಸಿಟಿ ಗ್ರ್ಯಾಜುಯೇಟ್‌ ಸ್ಕೂಲ್‌ ಆಫ್‌ ಜರ್ನಲಿಸಂಗೂ ಐಐಜೆಎನ್‌ಎಂಗೂ ಸಂಬಂಧವಿದೆ ಅನ್ನುವ ಮಾತಿತ್ತು. ಅದು ಪುಕಾರು, ಎಂಥದ್ದೂ ಇಲ್ಲ ಅನ್ನುತ್ತಾರೆ ಜ್ಯೋತಿ ಸನ್ಯಾಲ್‌. ಅಂದಹಾಗೆ, ದೂರದರ್ಶನದ ವೀಕ್ಷಕ ಸಂಶೋಧನಾ ವಿಭಾಗದ ನಿರ್ದೇಶಕರಾಗಿ ಅನುಭವವಿರುವ ಬಿ.ಎಸ್‌.ಚಂದ್ರಶೇಖರ್‌, ಇಂಡ್ಯಾ ಡಾಟ್‌ ಕಾಂನಲ್ಲಿ ಸುದ್ದಿ ವಿಭಾಗಕ್ಕೆ ರೂಪು ಕೊಟ್ಟ ಸುಭಾಷ್‌ ರಾಯ್‌, ಎ.ನಾರಾಯಣ ಮೊದಲಾದವರು ಇಲ್ಲಿ ಪೂರ್ಣ ಪ್ರಮಾಣದ ಅಸೋಸಿಯೇಟ್‌ ಪ್ರೊಫೆಸರ್ಸ್‌.

ಹಿಂದೂ ಪತ್ರಿಕೆಯಲ್ಲಿ ಕೆಲಸ ಮಾಡಿರುವ ಹಿರೀಕ, ಕ್ರೀಡಾ ವರದಿಗಾರ ಪಿ.ಆರ್‌.ವಿಶ್ವನಾಥ್‌, ‘ಔಟ್‌ಲುಕ್‌’ನ ಕೃಷ್ಣ ಪ್ರಸಾದ್‌, ಪ್ರಜಾವಾಣಿಯ ಸಹಾಯಕ ಸಂಪಾದಕ ನಾಗೇಶ ಹೆಗಡೆ ಮೊದಲಾದವರು ವಿಸಿಟಿಂಗ್‌ ಪ್ರೊಫೆಸರ್ಸ್‌. ಕೇಂದ್ರ ರಕ್ಷಣಾ ಸಚಿವಾಲಯದ ಲಂಚ ಪ್ರಕರಣ ಬಯಲಿಗೆಳೆದ ತೆಹಲ್ಕಾ ಡಾಟ್‌ ಕಾಂನ ಅನಿರುದ್ಧ್‌ ಬೆಹ್ಲ್‌ ಕಾಲೇಜಿನಲ್ಲಿ ಕಮ್ಮಟವೊಂದನ್ನು ಕೂಡ ನಡೆಸಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯ ವಾಷಿಂಗ್ಟನ್‌ ಪ್ರತಿನಿಧಿಯಾಗಿ ಕೆಲಸ ಮಾಡಿರುವ ರಮೇಶ್‌ ಚಂದ್ರನ್‌ ಇಲ್ಲಿನ ಸಲಹಾ ಮಂಡಳಿಯಲ್ಲಿದ್ದಾರೆ.

ಭಾರತದಲ್ಲಿ ಈ ರೀತಿ ಪತ್ರಿಕೋದ್ಯಮ ಕಲಿಸುವ ಕಾಲೇಜುಗಳೇ ಬೆರಳೆಣಿಕೆಯಷ್ಟು. ಬೆಂಗಳೂರು ಇದೀಗ ಎಲ್ಲಕ್ಕೂ ಹೇಳಿಮಾಡಿಸಿದ ಜಾಗೆಯಂತಾಗಿದೆ. ದಕ್ಷಿಣ ಕನ್ನಡದ ಮಣಿಪಾಲದಲ್ಲಿರುವ ಇನ್ನೊಂದು ದುಬಾರಿ ಪತ್ರಿಕೋದ್ಯಮ ಕಲಿಕಾ ಕಾಲೇಜಿನ ಸದ್ದೇ ಕೇಳುತ್ತಿಲ್ಲ. ವರ್ಷಕ್ಕೆ 25 ಸಾವಿರ ರುಪಾಯಿ ಫೀಸು ಕಟ್ಟಿಸಿಕೊಳ್ಳುತ್ತಿದ್ದ ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಚೆನ್ನೈಗೆ ಶಿಫ್ಟ್‌ ಆಗಿದೆ. ಇಂಥಾ ಹಿನ್ನೆಲೆಯಲ್ಲಿ ಆಶಾಕಿರಣದಂತೆ ಹುಟ್ಟಿದ್ದ ಐಐಜೆಎನ್‌ಎಂನಲ್ಲಿ ಇದೀಗ ಬಿಂ ಸದ್ದು ಕೇಳುತ್ತಿರುವುದು ಪತ್ರಿಕೋದ್ಯಮ ತರಪೇತಿಯ ಹಿತದೃಷ್ಟಿಯಿಂದ ಸಲ್ಲ.

ವಿಜ್ಞಾನ, ತಂತ್ರಜ್ಞಾನ ವಿಷಯದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳೂ ಕ್ಲಿಷ್ಟವಾದ ಪ್ರವೇಶ ಪರೀಕ್ಷೆ ಬರೆದು, ಇಷ್ಟೆಲ್ಲಾ ಹಣ ತೆತ್ತು ಈ ಕಾಲೇಜು ಸೇರಿದ್ದಾರೆ. ಕಾರಣ- ಅವರಲ್ಲಿ ಪತ್ರಿಕೋದ್ಯಮದ ಬಗೆಗಿರುವ ತುಡಿತ (ಅ ಥವಾ ಭ್ರಮೆ!). ಇಗೋ ಜಗಳಗಳ ನಡುವೆ ವಿದ್ಯಾರ್ಥಿಗಳ ಭವಿಷ್ಯಕ್ಕೇ ಕೊಡಲಿ ಪೆಟ್ಟು ಬೀಳುವ ಅಪಾಯವಿದೆ. ವಿದ್ಯಾಸಂಸ್ಥೆಗಳ ನೇತಾರ, ಕೋಟಿ ಗಿಡ ನೆಡುವ ಠರಾವು ಮಾಡಿರುವ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕಿವಿಗೆ ಇನ್ನೂ ಈ ವಿಷಯ ಬಿದ್ದಂತಿಲ್ಲ!

ಕಾಲೇಜಿನ ಇತಿ ವೃತ್ತಾಂತ ತಿಳಿಯಲು- http://www.iijnm.org/ ಕ್ಲಿಕ್ಕಿಸಿ.

ನಿಮ-ಗೇ-ನ-ನಿ-ಸು-ತ್ತ-ದೆ ?

ಭಾರತೀಯ ಪತ್ರಿಕೋದ್ಯಮ ಸಾಗುತ್ತಿರುವುದೆತ್ತ ?

ಮುಖಪುಟ / ಲೋಕೋಭಿನ್ನರುಚಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X