ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಥಮಿಕ ಶಿಕ್ಷಣ ಮೂಲಭೂತ ಹಕ್ಕು: ಕೇಂದ್ರ ಸಂಪುಟ ನಿರ್ಧಾರ

By Staff
|
Google Oneindia Kannada News

ನವದೆಹಲಿ : ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಕೇಂದ್ರಸಚಿವ ಸಂಪುಟ ಮಂಗಳವಾರ ನಿರ್ಧರಿಸಿದೆ. 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ತನ್ನ ಸಂಪೂರ್ಣ ಸಮ್ಮತಿ ನೀಡಿದೆ.

ಆರು ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ತಂದೆ - ತಾಯಿ- ಪೋಷಕರ ಪ್ರಾಥಮಿಕ ಕರ್ತವ್ಯವನ್ನಾಗಿ ಮಾಡಲು ಸಂವಿಧಾನಕ್ಕೂ ತಿದ್ದುಪಡಿ ತರಲು ಸಭೆ ನಿರ್ಧರಿಸಿದೆ. ಇದಕ್ಕಾಗಿ ಸಂವಿಧಾನದಲ್ಲಿ 21 ಎ ಪರಿಚ್ಛೇದವನ್ನು ಸೇರಿಸಲು ತೀರ್ಮಾನಿಸಲಾಗಿದ್ದು, 93ನೇ ತಿದ್ದುಪಡಿ ಮಸೂದೆಯನ್ನು ಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು.

ಈ ವಿಷಯವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಮೋದ್‌ ಮಹಾಜನ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಂವಿಧಾನದ 93ನೇ ತಿದ್ದುಪಡಿಯ 45ನೇ ವಿಧಿಯನ್ನು ಪರಿಷ್ಕರಿಸಿ ಎಳೆಯ ಮಕ್ಕಳಿಗೆ ಪಾಲನೆ ಮತ್ತು 14 ವರ್ಷದವರೆಗೆ ಅವರಿಗೆ ಕಡ್ಡಾಯ ಶಿಕ್ಷಣ ನೀಡುವ ಹೊಣೆಯನ್ನು ರಾಜ್ಯ ಸರಕಾರಗಳ ಮೇಲೆ ಹೊರಿಸಲಾಗುತ್ತಿದೆ.

ಈ ಸಂಬಂಧ ರಾಜ್ಯ ಸಭೆ ಮುಂದಿರುವ 1997ರ ಸಂವಿಧಾನದ 83ನೇ ತಿದ್ದುಪಡಿ ಮಸೂದೆಯನ್ನು ವಾಪಸ್‌ ಪಡೆಯಲೂ ಸಂಪುಟ ಸಭೆ ನಿರ್ಧರಿಸಿದೆ.

ತುಟ್ಟಿಭತ್ಯೆ : ಕೇಂದ್ರಸರಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ನೀಡುವ ತುಟ್ಟಿಭತ್ಯೆ ಪರಿಹಾರವನ್ನು ಶೇ. 2ರಷ್ಟು ಹೆಚ್ಚಿಸಲು ಸಭೆ ತೀರ್ಮಾನಿಸಿದೆ. ಜನವರಿ 1, 1996ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ.43ರಿಂದ 45ಕ್ಕೆ ಏರಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ ವಾರ್ಷಿಕ 791 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಮಹಾಜನ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X