ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್‌ನನ್ನು ಬೇಷರತ್ತಾಗಿ ಒಪ್ಪಿಸಲು ತಾಲಿಬಾನ್‌ಗೆ ವಿಶ್ವಸಂಸ್ಥೆ ಸೂಚನೆ

By Staff
|
Google Oneindia Kannada News

ವಿಶ್ವಸಂಸ್ಥೆ : ಅಮೆರಿಕ ಮೇಲೆ ಕಳೆದ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಕಾರಣ ಎನ್ನಲಾಗಿರುವ ಒಸಾಮಾ ಬಿನ್‌ ಲಾಡೆನ್‌ನನ್ನು ಬೇಷರತ್ತಾಗಿ ಹಾಗೂ ತತ್‌ಕ್ಷಣವೇ ಒಪ್ಪಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆಫ್ಘಾನಿಸ್ತಾನದ ಮಿಲಿಟರಿ ಆಡಳಿತಕ್ಕೆ ಸೂಚಿಸಿದೆ.

ಯಾವುದೇ ಷರತ್ತುಗಳನ್ನು ವಿಧಿಸದೆ, ಕೂಡಲೇ ಶಂಕಿತ ಉಗ್ರಗಾಮಿ ನಾಯಕ ಲಾಡೆನ್‌ನನ್ನು ಅಮೆರಿಕ ವಶಕ್ಕೆ ಒಪ್ಪಿಸುವಂತೆ ಭದ್ರತಾ ಮಂಡಳಿಯ ಅಧ್ಯಕ್ಷ ಜೀನ್‌ ಡೇವಿಡ್‌ ಲೆವಿಟ್ಟೆ ಅವರು ತಿಳಿಸಿದ್ದಾರೆ. ಸೌದಿ ಮೂಲದ ಆತಂಕವಾದಿ ಲಾಡೆನ್‌ನೇ ಮಂಗಳವಾರದ ವಿಧ್ವಂಸಕ ಕೃತ್ಯಕ್ಕೆ ಕಾರಣ ಎಂದು ಅಮೆರಿಕಾ ಘೋಷಿಸಿದೆ.

ಸುಮಾರು 6 ಸಾವಿರಕ್ಕೂ ಹೆಚ್ಚು ಅಮಾಯಕರನ್ನು ಬಲಿತೆಗೆದುಕೊಂಡಿರುವ ಮಂಗಳವಾರದ ದಾಳಿಗೆ ಸಂಬಂಧಿಸಿದಂತೆ ತಾಲಿಬಾನ್‌ ಸರಕಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈವರೆಗೆ ನೀಡಿರುವ ಏಕಮಾತ್ರ ಸಂದೇಶದಲ್ಲಿ ಲೆವಿಟ್ಟೆ ಮಂಗಳವಾರ ಈ ಸೂಚನೆ ನೀಡಿದ್ದಾರೆ.

ಸೆಪ್ಟೆಂಬರ್‌ 12ರಂದು ಭದ್ರತಾ ಮಂಡಳಿಯ 15 ಮಂದಿ ಸದಸ್ಯರ ಸಭೆಯಲ್ಲಿ ಅಂಗೀಕರಿಸಲಾಗಿದ್ದ ನಿರ್ಣಯವು ಅಮೆರಿಕಾ ಮೇಲಿನ ದಾಳಿಯನ್ನು ಉಗ್ರವಾಗಿ ಖಂಡಿಸಿತ್ತು. ಈ ವಿಧ್ವಂಸಕ ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸಲು ಸಂಘಟಿತ ಹೋರಾಟಕ್ಕೆ ಅದು ಕರೆ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಉಲೇಮಾಗಳ ಸಭೆ : ಹಲವು ಪಾಂತ್ಯಗಳ ಉಲೇಮಾಗಳ (ಇಸ್ಲಾಮಿಕ್‌ ಪಂಡಿತರ) ಗೈರು ಹಾಜರಿಯಿಂದ ಮಂಗಳವಾರ ಮುಂದೂಡಲಾಗಿದ್ದ, ಸಭೆ ಬುಧವಾರ ನಡೆಯುತ್ತಿದೆ. ಈ ಸಭೆಯಲ್ಲಿ ಬಿನ್‌ ಲಾಡೆನ್‌ನನ್ನು ಅಮೆರಿಕಕ್ಕೆ ಒಪ್ಪಿಸಬೇಕೆ - ಬೇಡವೆ ಎಂದು ನಿರ್ಧರಿಸಲಾಗುತ್ತದೆ. ಈ ಮಧ್ಯೆ...

  • ಆಫ್ಘಾನಿಸ್ತಾನಕ್ಕೆ ಆರ್ಥಿಕ ಅಥವಾ ಮಿಲಿಟರಿ ನೆರವು ನೀಡಿಲ್ಲ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.
  • ಆಂತರಿಕ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಪಾಕ್‌ ಅಧ್ಯಕ್ಷ ಮುಷರ್ರಫ್‌ ರಾಷ್ಟ್ರವನ್ನುದ್ದೇಶಿಸಿ ಪ್ರಸಾರ ಭಾಷಣ ಮಾಡುತ್ತಿದ್ದಾರೆ.
  • ಭಯೋತ್ಪಾದನೆ ವಿರುದ್ಧದ ವಿಶ್ವವ್ಯಾಪಿ ಹೋರಾಟದ ನೇತೃತ್ವ ವಹಿಸಿಕೊಳ್ಳಲು ವಿಶ್ವಸಂಸ್ಥೆ ಸಿದ್ಧವಿದೆ ಎಂದು ಮಹಾಕಾರ್ಯದರ್ಶಿ ಕೋಫಿ ಅನ್ನಾನ್‌ ಘೋಷಿಸಿದ್ದಾರೆ.
  • ಭಯೋತ್ಪಾದನೆ ವಿರುದ್ಧ ನಡೆಯಲಿರುವ ಜಾಗತಿಕ ಸಮರದಲ್ಲಿ ಅಮೆರಿಕದೊಂದಿಗೆ ಕೈಜೋಡಿಸುವುದಾಗಿ ಪ್ಯಾಲೆಸ್ಟೀನಿಯನ್‌ ನಾಯಕ ಯಾಸಿರ್‌ ಅರಾಫತ್‌ ಅಮೆರಿಕ ಅಧ್ಯಕ್ಷ ಬುಷ್‌ ಅವರಿಗೆ ತಿಳಿಸಿದ್ದಾರೆ.
(ಪಿ.ಟಿ.ಐ)

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X