ಅಮೆರಿಕ ವಿರುದ್ಧ ಪವಿತ್ರ ಯುದ್ಧಕ್ಕೆ ಸಜ್ಜಾಗಿರುವಂತೆ ಆಫ್ಘನ್ನರಿಗೆ ಕರೆ
ಕಾಬೂಲ್ : ಅಮೆರಿಕದ ವಿರುದ್ಧ ಪವಿತ್ರ ಯುದ್ಧ ನಡೆಸಲು ಸಿದ್ಧರಾಗಿರುವಂತೆ ಆಫ್ಘಾನಿಸ್ತಾನೀಯರಿಗೆ ಕರೆ ನೀಡಲಾಗಿದೆ ಎಂದು ತಾಲಿಬಾನ್ ವಾರ್ತಾ ಸಂಸ್ಥೆ ವರದಿ ತಿಳಿಸಿದೆ. ಈ ವಿಷಯವನ್ನು ಎ.ಪಿ. ಸುದ್ದಿ ಸಂಸ್ಥೆ ಮಂಗಳವಾರ ಪ್ರಸಾರ ಮಾಡಿದೆ.
ಇಸ್ಲಾಮಾಬಾದ್ ವರದಿ : ಈ ಮಧ್ಯೆ ಶಂಕಿತ ಉಗ್ರಗಾಮಿ ನಾಯಕ ಒಸಾಮ ಬಿನ್ ಲಾಡೆನ್‌ನ ಹಣೆಬರಹ ನಿರ್ಧರಿಸಲು ಮಂಗಳವಾರ ಕಂದಹಾರ್‌ನಲ್ಲಿ ಉಲಾಮಾಗಳ ಸಭೆ ಕರೆದಿದ್ದಾಗ್ಯೂ ಕೂಡ ಲಾಡೆನ್ ಗಡಿಪಾರಿಗೆ, ಆಫ್ಘಾನಿಸ್ತಾನದ ಮಿಲಿಟರಿ ಆಡಳಿತ ವಿಶ್ವಸಂಸ್ಥೆ ವಿಧಿಸಿರುವ ದಿಗ್ಭಂಧನ ತೆರವೂ ಸೇರಿದಂತೆ ಹಲವು ಷರತ್ತುಗಳನ್ನು ಹಾಕಿದೆ.
ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಓಮರ್ ಸಿದ್ಧಪಡಿಸಿರುವ ಷರತ್ತುಗಳನ್ನು ಪಾಕಿಸ್ತಾನದಿಂದ ಆಗಮಿಸಿರುವ ಐ.ಎಸ್.ಐ. ಮುಖ್ಯಸ್ಥ ಲೆ.ಜ. ಮೊಹಮದ್ ಆಹ್ಮದ್ ನೇತೃತ್ವದ ತಂಡಕ್ಕೆ ತಿಳಿಸಲಾಗಿದೆ. ಆಫ್ಘನ್‌ನ ಇತರ ಷರತ್ತುಗಳಲ್ಲಿ ಒಸಾಮಾ ಬಿನ್ ಲಾಡೆನ್ ವಿರುದ್ಧ ತಟಸ್ಥ ದೇಶವೊಂದರಿಂದ ವಿಚಾರಣೆ ನಡೆಸಬೇಕು. ಆಫ್ಘಾನಿಸ್ತಾನಕ್ಕೆ ಅಂತಾರಾಷ್ಟ್ರೀಯ ಆರ್ಥಿಕ ನೆರವು ಮುಂದುವರಿಸಬೇಕು.
ಉತ್ತರದ ಮಿತ್ರರಾಷ್ಟ್ರಗಳಿಗೆ ಸೈನಿಕ ನೆರವು ನಿಲ್ಲಿಸಬೇಕು ಎಂಬ ಷರತ್ತುಗಳೂ ಸೇರಿವೆ ಎಂದು ಆಫ್ಘಾನಿಸ್ತಾನದ ದೈನಿಕ ‘ದಿ ನೇಷನ್’ ಸೆಪ್ಟೆಂಬರ್ 18ರಂದು ವರದಿ ಮಾಡಿದೆ. ಆಫ್ಘನ್‌ಗೆ ತೆರಳಿದ್ದ ನಿಯೋಗದ ಕನಿಷ್ಠ ಇಬ್ಬರು ಆ ದೇಶದ ಷರತ್ತುಗಳೊಂದಿಗೆ ಇಸ್ಲಾಮಾಬಾದ್‌ಗೆ ಮರಳಿದ್ದಾರೆ ಎಂದೂ ಅದು ಹೇಳಿದೆ. ಆದರೆ, ಈ ಸುದ್ದಿಯನ್ನು ಅಧಿಕಾರಿಗಳು ದೃಢಪಡಿಸಿಲ್ಲ.
(ಪಿ.ಟಿ.ಐ)
ಮಂಗಳವಾರ ಲಾಡೆನ್ ಅಳಿವು- ಉಳಿವು ನಿರ್ಧರಿಸುವ ಉಲೇಮರ ಸಭೆ
Post Your Views
ಮುಖಪುಟ / ಭಯೋತ್ಪಾದನೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications