ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧ ಕ್ಷಣಗಣನೆ.. ತಾಲಿಬಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

By Staff
|
Google Oneindia Kannada News

ಇಸ್ಲಮಾಬಾದ್‌ : ಸಂಭವನೀಯ ಅಮೆರಿಕ ದಾಳಿಯ ಹಿನ್ನೆಲೆಯಲ್ಲಿ ತಾಲಿಬಾನ್‌ ಆಡಳಿತ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು , ಯುದ್ಧ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.

ಎಲ್ಲ ಧಾರ್ಮಿಕ ಪಾಠಶಾಲೆಗಳನ್ನು ಮುಚ್ಚಿರುವ ತಾಲಿಬಾನ್‌ ಆಡಳಿತ, ಮರು ಹೋರಾಟಕ್ಕೆ ವಿದ್ಯಾರ್ಥಿಗಳನ್ನು ಶಸ್ತ್ರ ಸಜ್ಜಿತರನ್ನಾಗಿಸಿದೆ ಎಂದು ತಾಲಿಬಾನ್‌ನ ಹಿರಿಯ ಅಧಿಕಾರಿಯಾಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಅಮೆರಿಕ ಹಾಗೂ ತಾಲಿಬಾನ್‌ ನಡುವಣ ತಿಕ್ಕಾಟ ಹೆಚ್ಚೂ ಕಡಿಮೆ ಆರಂಭವಾದಂತಾಗಿದೆ.

ಪ್ರಸ್ತುತ ಕಾಂದಹಾರ್‌ನ ಮೈದಾನದಲ್ಲಿ ಕೇಂದ್ರೀಕೃತವಾಗಿರುವ ತಾಲಿಬಾನ್‌ನ ವಾಯುಶಕ್ತಿ, ಹಾರಾಟದ ಅಭ್ಯಾಸಗಳನ್ನು ನಡೆಸಿದೆ. ಈ ವಾಯುಪಡೆ ಯಾವುದೇ ಕ್ಷಣದ ದಾಳಿಯನ್ನು ಎದುರಿಸಲು ಸಿದ್ಧವಾಗಿದೆ. ಧಾರ್ಮಿಕ ಶಾಲೆಗಳನ್ನು ಮುಚ್ಚಲಾಗಿದ್ದು , ವಿದ್ಯಾರ್ಥಿಗಳು ಯಾವುದೇ ಹೋರಾಟ ಎದುರಿಸಲು ಸಿದ್ಧರಿದ್ದಾರೆ ಎಂದು ಕಾಂದಹಾರ್‌ನ ರಾಜ್ಯಪಾಲ ಮೌಲ್ವಿ ಮಹಮದ್‌ ಹಸನ್‌ ತಿಳಿಸಿರುವುದಾಗಿ ಉರ್ದು ದೈನಿಕ ಜಂಗ್‌ ವರದಿ ಮಾಡಿದೆ.

ತಾಲಿಬಾನ್‌ ಎಂದಿಗೂ ದಾಸ್ಯವನ್ನು ಒಪ್ಪಿಕೊಳ್ಳುವುದಿಲ್ಲ

ಈ ಮುನ್ನ ಆಪ್ಘಾನಿಸ್ತಾನವನ್ನು ಆಕ್ರಮಿಸಿದ ರಷ್ಯಾದ ಗತಿ ಏನಾಯಿತು ಎನ್ನುವುದನ್ನು ತಾಲಿಬಾನ್‌ ಅರ್ಥ ಮಾಡಿಕೊಳ್ಳಬೇಕು ಎಂದು ಹಸನ್‌ ಅಮೆರಿಕವನ್ನು ಎಚ್ಚರಿಸಿದ್ದಾರೆ.

ತಾಲಿಬಾನ್‌ ಮೇಲೆ ದಾಳಿ ನಡೆಸಲು ತನ್ನ ನೆಲವನ್ನು ಬಳಸಿಕೊಳ್ಳಲು ಪಾಕಿಸ್ತಾನ ಅವಕಾಶ ಮಾಡಿಕೊಡಬಾರದು. ಈ ರೀತಿ ಅವಕಾಶ ಕಲ್ಪಿಸುವುದು ಇಸ್ಲಾಂಗೆ ಅವಮಾನ. ಒಂದು ವೇಳೆ ಅಮೆರಿಕಾಗೆ ಸಹಾಯ ಮಾಡಿದಲ್ಲಿ ಪಾಕಿಸ್ತಾನದ ಮೇಲೆ ತಾಲಿಬಾನ್‌ ದಾಳಿ ನಡೆಸುವುದೆಂದು ಈಗಾಗಲೇ ಎಚ್ಚರಿಸಲಾಗಿದೆ ಎಂದು ಹಸನ್‌ ಹೇಳಿದರು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X