ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 18, 2001 ಭಯೋತ್ಪಾದನೆ ವಿರುದ್ಧ ಐಕ್ಯತಾ ದಿನ

By Staff
|
Google Oneindia Kannada News

ನವದೆಹಲಿ : ಭಯೋತ್ಪಾದನೆ ಭಾರತವನ್ನು ಹಲವು ದಶಕಗಳಿಂದ ಕಾಡುತ್ತಿರುವ ಪರಮ ಶತ್ರು. ಈ ಭಯೋತ್ಪಾದನೆಗೆ ಹಲವು ಅಮಾಯಕರ ಬಲಿ ಆಗಿದೆ. ಈಗ ಭಯೋತ್ಪಾದನೆ ವಿಶ್ವವ್ಯಾಪಿ ಆಗುತ್ತಿದೆ. ಕಳೆದ ಮಂಗಳವಾರ ಅಮೆರಿಕದ ಮೇಲೆ ನಡೆದ ಉಗ್ರರ ದಾಳಿ ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾರತ ಸರಕಾರ ಸೆಪ್ಟೆಂಬರ್‌ 18, 2001ರ ಮಂಗಳವಾರವನ್ನು ‘ಭಯೋತ್ಪಾದನೆ ವಿರುದ್ಧದ ಐಕ್ಯತಾ ದಿನ’ವಾಗಿ ಆಚರಿಸಲು ನಿರ್ಧರಿಸಿತು. ಮಂಗಳವಾರ ಬೆಳಗ್ಗೆ 10.30ಕ್ಕೆ ನೀವು ಎಲ್ಲೇ ಇರಿ. ಭಯೋತ್ಪಾದಕರ ದಾಳಿಯಿಂದ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 2 ನಿಮಿಷಗಳ ಕಾಲ ಮೌನ ಆಚರಿಸಿ, ಮೌನ ಪ್ರಾರ್ಥನೆಯ ಮೂಲಕ ಮೌನ ನಿರ್ಣಯ ಕೈಗೊಳ್ಳೋಣ ಎಂದು ಸರಕಾರ ನಾಗರಿಕರಲ್ಲಿ ಮನವಿ ಮಾಡಿದೆ.

ಈ ಸಂಬಂಧ ಹೇಳಿಕೆ ನೀಡಿರುವ ಪ್ರಧಾನಿ ವಾಜಪೇಯಿ ಅವರು, ‘ಪ್ರತಿಯಾಬ್ಬ ಭಾರತೀಯನೂ ಭಯೋತ್ಪಾದನೆ ವಿರುದ್ಧ ನಡೆದಿರುವ ಈ ಜಾಗತಿಕ ಯುದ್ಧದಲ್ಲಿ ಭಾಗಿಯಾಗಬೇಕು...
ನಮ್ಮ ನೆಲದಿಂದ ಹಾಗೂ ವಿಶ್ವದಿಂದ ಈ ದುಷ್ಕೃತ್ಯವನ್ನು ನಾವು ತೊಡೆದು ಹಾಕಲೇಬೇಕು.... ತೊಡೆದು ಹಾಕೋಣ’ ಎಂದು ಕರೆ ಕೊಟ್ಟಿದ್ದಾರೆ.

1993ರ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ, 2001ರಂದು ಅನಂತ್‌ನಾಗ್‌ನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡ, ಡಿಸೆಂಬರ್‌ 1999ರಲ್ಲಿ ನಡೆದ ಕಂದಹಾರ್‌ ವಿಮಾನ ಅಪಹರಣ ಹಾಗೂ ಕಳೆದ ಕರಾಳ ಮಂಗಳವಾರ ನ್ಯೂಯಾರ್ಕ್‌ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಸ್ಮರಿಸಿದ್ದಾರೆ.

(ಇನ್‌ಫೋ ವಾರ್ತೆ)

Post Your Views

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X