ಮಂಗಳವಾರ ಲಾಡೆನ್ ಅಳಿವು- ಉಳಿವು ನಿರ್ಧರಿಸುವ ಉಲೇಮರ ಸಭೆ
ಕಾಬೂಲ್ : ಕಳೆದ ಮಂಗಳವಾರ ಅಮೆರಿಕದ ಗಗನಚುಂಬಿ ಕಟ್ಟಡಗಳನ್ನು ನೆಲಸಮಗೊಳಿಸಿ, ವಿಶ್ವವನ್ನೇ ತಲ್ಲಣಗೊಳಿಸಿದನೆನ್ನಲಾಗಿರುವ ಶಂಕಿತ ಉಗ್ರಗಾಮಿ ನಾಯಕ ಒಸಮಾ ಬಿನ್ ಲಾಡೆನ್‌ನ ಹಣೆಬರಹ (ಅಳಿವು- ಉಳಿವು) ವನ್ನು ಈ ಮಂಗಳವಾರ ಇಸ್ಲಾಮಿಕ್ ಪಂಡಿತರು (ಉಲೇಮಾಗಳು) ನಿರ್ಧರಿಸಲಿದ್ದಾರೆ.
ಆಫ್ಘಾನಿಸ್ತಾನದ ಮೇಲೆ ಅಮೆರಿಕದ ಸಂಭವನೀಯ ದಾಳಿಯನ್ನು ತಪ್ಪಿಸಲು ಒಸಮಾ ಬಿನ್ ಲಾಡೆನ್‌ನನ್ನು ಅಮೆರಿಕದ ವಶಕ್ಕೆ ಒಪ್ಪಿಸುವಂತೆ ಪಾಕ್ ಗಡುವು ನೀಡಿದೆ. ಕೇವಲ ಒಬ್ಬ ವ್ಯಕ್ತಿಗಾಗಿ 25 ದಶಲಕ್ಷ ಅಮಾಯಕರ ಬಲಿಕೊಡುವುದು ಬೇಡ ಎಂಬ ಹಿತನುಡಿಗಳನ್ನೂ ಹೇಳಿದೆ.
ಈ ಹಿನ್ನೆಲೆಯಲ್ಲಿ ಪ್ರತಿಯಾಂದು ಪ್ರಾಂತ್ಯವನ್ನು ಪ್ರತಿನಿಧಿಸುವ ಇಸ್ಲಾಮಿಕ್ ಪಂಡಿತರು ಕಾಬೂಲ್‌ನಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಿ, ಲಾಡೆನ್ ಹಣೆ ಬರಹವನ್ನು ನಿರ್ಧರಿಸಲಿದ್ದಾರೆ ಎಂದು ತಾಲಿಬಾನ್ ನಾಯಕ ಮುಲ್ಲಾ ಮೊಹಮ್ಮದ್ ಓಮರ್ ತಿಳಿಸಿದ್ದಾರೆ ಎಂದು ಆಫ್ಘಾನಿಸ್ತಾನ್ ರೇಡಿಯೋ ಶರಿಯತ್ ವರದಿ ಮಾಡಿದೆ. ಈ ಮಧ್ಯೆ...
- ನಮಗೆ ನ್ಯಾಯಬೇಕು. ಬಿನ್ ಲಾಡೆನ್ ಬೇಕೇ ಬೇಕು. ಜೀವಂತ ಇಲ್ಲ ಅವನ ಹೆಣವಾದರೂ ಬೇಕು ಎಂದು ಬುಷ್ ಸೋಮವಾರ ಹೇಳಿದ್ದಾರೆ.
- ಒಸಾಮಾ ಬಿನ್ ಲ್ಯಾಡನ್‌ನನ್ನು ಒಪ್ಪಿಸುವ ವಿಷಯದಲ್ಲಿ ವಿಳಂಬ ಮಾಡದೆ ನಿರ್ಧಾರ ಕೈಗೊಳ್ಳುವಂತೆ ಪಾಕಿಸ್ತಾನ ಒತ್ತಾಯಿಸಿದೆ.
- ಅಮೆರಿಕದ ಕೋರಿಕೆಯ ಹಿನ್ನೆಲೆಯಲ್ಲಿ ಪಾಕ್ ಆಹಾರ ಸರಬರಾಜೊಂದನ್ನು ಹೊರತು ಪಡಿಸಿ, ಪಾಕ್ - ಆಫ್ಘಾನಿಸ್ತಾನ ಗಡಿಯನ್ನು ಮುಚ್ಚಿದೆ.
- ಅಮೆರಿಕದ ಮೇಲೆ ಉಗ್ರರ ದಾಳಿ ನಡೆದ ಸಂದರ್ಭದಲ್ಲಿ 2 ವಿಮಾನ ಕಳೆದುಕೊಂಡ ಯುನೈಟೆಡ್ ಏರ್‌ಲೈನ್ಸ್ ಭಾರತಕ್ಕೆ ತನ್ನ ವಿಮಾನ ಯಾನ ರದ್ದು ಪಡಿಸಿರುವುದಾಗಿ ಸೋಮವಾರ ಪ್ರಕಟಿಸಿದೆ.
- ಆಫ್ಘನ್ ಆಗಸದಲ್ಲಿ ಕದನದ ಕಾರ್ಮೋಡ ಕವಿದಿದ್ದು, ಆಫ್ಘನ್ನರು ಗುಳೆ ಏಳುತ್ತಿದ್ದಾರೆ.
- ವಾಷಿಂಗ್ಟನ್ - ನ್ಯೂಯಾರ್ಕ್ ಮೇಲಿನ ದಾಳಿಗೆ ಲಾಡೆನ್‌ನೇ ಕಾರಣ ಎಂಬುದಕ್ಕೆ ನಿಖರ ಮಾಹಿತಿ - ಪುರಾವೆ ಒದಗಿಸಿ, ಲಾಡೆನ್‌ನನ್ನು ವಶಕ್ಕೆ ತೆಗೆದುಕೊಳ್ಳಿ ಎಂದು ಹೇಳುವ ಮೂಲಕ ತಾಲಿಬಾನ್ ಲಾಡೆನ್‌ನನ್ನು ವಶಕ್ಕೊಪ್ಪಿಸಲು ನಿರಾಕರಿಸಿದೆ.
- 20 ರಿಂದ 25 ಸಾವಿರ ಸೈನಿಕರನ್ನು ಪಾಕ್ ಗಡಿಯಲ್ಲಿ ನಿಯೋಜಿಸಿರುವ ತಾಲಿಬಾನ್ ಯುದ್ಧಕ್ಕೆ ಸಜ್ಜಾಗುತ್ತಿದೆ
- ಇದಕ್ಕೆ ಪ್ರತಿಯಾಗಿ ಲಾಡೆನ್ ಅಡಗುದಾಣದ ಮೇಲೆ ದಾಳಿ ಮಾಡಲು ಅಮೆರಿಕಾ ಕ್ಷಿಪಣಿ ಮತ್ತು ಯುದ್ಧವಾಹಕಗಳನ್ನು ಕಳುಹಿಸಿಕೊಟ್ಟಿದೆ.
- ಕಂದಹಾರ್‌ನಲ್ಲಿ ಸೋಮವಾರ ನಡೆದ ಪಾಕ್ ನಿಯೋಗದ ಜತೆಗಿನ ಮಾತುಕತೆ ಬಹುತೇಕ ವಿಫಲ.
- ಯುದ್ಧ ಅನಿವಾರ್ಯವೇ ಆದಲ್ಲಿ ವಿಶ್ವಸಂಸ್ಥೆ ನೇತೃತ್ವದಲ್ಲಿ ಅದು ನಡೆಯಬೇಕು ಎಂಬ ಇಂಗಿತವನ್ನು ಪಾಕ್ ವ್ಯಕ್ತಪಡಿಸಿದೆ.
- ಆಂತರಿಕ ದಂಗೆ ಹಾಗೂ ಆಫ್ಘನ್ ನಿರಾಶ್ರಿತರು ದಂಗೆ ಎದ್ದಾರೆಂದು ಪಾಕ್ ಸೇನೆ ಸನ್ನದ್ಧ ಸ್ಥಿತಿಯಲ್ಲಿದೆ.
- ಅಮೆರಿಕಕ್ಕೆ ನೆರವಾದರೆ ಆಂತರಿಕ ಹಿಂಸಾತ್ಮಕ ದಂಗೆ ಎದುರಿಸಬೇಕಾದೀತು ಎಂದು 30 ಇಸ್ಲಾಮಿಕ್ ಮೂಲಭೂತವಾದಿಗಳ ಪಕ್ಷವು ಮುಷರ್ರಫ್ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
Post Your Views
ಮುಖಪುಟ / ಭಯೋತ್ಪಾದನೆ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications