Get Updates
Get notified of breaking news, exclusive insights, and must-see stories!

ಹುಬ್ಬಳ್ಳಿಯಲ್ಲಿ ಮತ್ತೆ ಕದಡಿದ ಶಾಂತಿ: ಇರಿತ, ಕರ್ಫ್ಯೂ ವಿಸ್ತರಣೆ

ಹುಬ್ಬಳ್ಳಿ : ನಗರದಲ್ಲಿ ಸೋಮವಾರ ಸಂಜೆ ಹಿಂಸಾಚಾರ ಮತ್ತೆ ಆರಂಭವಾಗಿದ್ದು, ಮೂವರು ವ್ಯಕ್ತಿಗಳು ಚೂರಿ ಇರಿತದಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ವರದಿ ತಿಳಿಸಿದೆ.

ಸಂಜೆ ವೇಳೆಗೆ ದುಷ್ಕರ್ಮಿಗಳ ಗುಂಪೊಂದು ಕಸಬಾ ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳ ಮೇಲೆ ಚೂರಿಯಿಂದ ಇರಿದು ಪರಾರಿಯಾಗಿದೆ. ಗಾಯಗೊಂಡವರನ್ನು ಪ್ರಭು ಮಮದಾಪುರ(28), ರಮೇಶ ಕೃಷ್ಣಾಜಿ( 35), ಸುನೀಲ್‌ ವಿಶ್ವನಾಥ್‌(22) ಎಂದು ಗುರುತಿಸಲಾಗಿದೆ.

ನಗರದ ದುರ್ಗಬೈಲ್‌, ನಗರ ಸಾರಿಗೆ ಬಸ್‌ ನಿಲ್ದಾಣ ಹಾಗೂ ಗಣೇಶ ಪೇಟೆಗಳಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಘನೆಗಳು ನಡೆದಿವೆ ಎಂದು ಪೊಲೀಸ್‌ಕಮಿಶನರ್‌ ವೈ. ಆರ್‌. ಪಾಟೀಲ ತಿಳಿಸಿದ್ದಾರೆ. ಅಲ್ಲದೆ ಕೆಲವೆಡೆ ಕಲ್ಲು ತೂರಾಟ ನಡೆದ ಘಟನೆಗಳೂ ವರದಿಯಾಗಿವೆ.

ಈ ಘಟನೆಯಿಂದ ನಗರದಲ್ಲಿ ಮತ್ತೆ ಪರಿಸ್ಥಿತಿ ಬಿಗಿಗೊಂಡಿದ್ದು, ನೂರಾರು ಮಂದಿಯನ್ನುಪೊಲೀಸರು ಬಂಧಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ಮತ್ತೆ ಸಣ್ಣ ಪುಟ್ಟ ಹಿಂಸಾಚಾರದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಪೊಲೀಸರು ಕರ್ಫ್ಯೂವನ್ನು ಮತ್ತೆ ವಿಸ್ತರಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+