Get Updates
Get notified of breaking news, exclusive insights, and must-see stories!

ದಾಖಲೆ ಪತ್ರದಲ್ಲಿ ಪ್ರಾಯವಾಗಿರುವಾಗ ಬಾಲಕಾರ್ಮಿಕತೆ ಎಲ್ಲಿ ಬಂತು?

ಬೆಂಗಳೂರು : ಪುಟ್ಟ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಅಂತ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಗೊಳಿಸುವ ದೃಷ್ಟಿಯಿಂದ ಸರಕಾರ ಆಜ್ಞೆ ಮಾಡಿದ್ದರೆ ಮಾಲಿಕರು ಸುಳ್ಳು ಪ್ರಮಾಣ ಪತ್ರದೊಂದಿಗೆ ರಂಗೋಲಿ ಕೆಳಗೆ ತೂರುವ ಜಾಣ್ಮೆ ತೋರಿದ್ದಾರೆ.

ಸಿಂಪಲ್‌ ! ಈ ಮಕ್ಕಳ ವಯಸ್ಸಿನ ಸುಳ್ಳು ಸರ್ಟಿಫಿಕೇಟನ್ನು ಮಾಡಿಟ್ಟುಕೊಂಡರೆ ಆಯ್ತು. ಕೈಗೆ ಸ್ವಲ್ಪ ಹಣ ಬಂದರೆ ಈ ಸರ್ಟಿ ಫಿಕೇಟ್‌ ಕೊಡಲು ಹಿಂದೆ ಮುಂದೆ ನೋಡುವ ವೈದ್ಯರು, ಅಧಿಕಾರಿಗಳೂ ಕಾಣಸಿಗುವುದು ಕಡಿಮೆ. ಮಾಲಿಕರ ಈ ಹೊಸ ವರಸೆಯನ್ನು ಸರಕಾರ ಪತ್ತೆ ಮಾಡಿದೆ. ಹಾಗೆ ಸರ್ಟಿಫಿಕೇಟ್‌ ನೀಡುವ ವೈದ್ಯರೊಬ್ಬರ ಮೇಲೆ ಮೊಕದ್ದಮೆಯನ್ನೂ ದಾಖಲಿಸಿದೆ.

ದೊಡ್ಡ ದೊಡ್ಡ ಯಂತ್ರಗಳು ಸದ್ದು ಮಾಡುವ ಕಾರ್ಖಾನೆಗಳಲ್ಲಿ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೆಲಸ ಮಾಡಬಾರದು ಎಂಬ ಆದೇಶವನ್ನು ಮಕ್ಕಳಿಗೆ 15 ಅಥವಾ 16 ವರ್ಷವಾಗಿದೆ ಎಂಬ ಪ್ರಮಾಣ ಪತ್ರಗಳು ಉಲ್ಲಂಘಿಸುತ್ತವೆ. ಇಂತಹ ಎಲ್ಲ ಪ್ರಕರಣವನ್ನೂ ಪತ್ತೆ ಹಚ್ಚುವುದು ಸರಕಾರಕ್ಕೆ ಕಷ್ಟ ಸಾಧ್ಯ. ಮಗುವಿಗೆ 14 ವರ್ಷವಾಗಿ ಒಂದೆರಡು ದಿನಗಳಾಗಿದ್ದರೂ ಕೇಸು ದಾಖಲಿಸುವುದಕ್ಕೆ ಕಾನೂನು ಬೆಂಬಲ ನೀಡುವುದಿಲ್ಲ.

ಬಾಲಕಾರ್ಮಿಕ ಪದ್ಧತಿಯ್ನು ಪೋಷಿಸುವಾತ 20 ಸಾವಿರ ರೂಪಾಯಿಯನ್ನು ದಂಡ ರೂಪದಲ್ಲಿ ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರಕ್ಕೆ ನೀಡಬೇಕು. ಆದರೆ ಈ ಕಾನೂನಿನಿಂದ ಹೆಚ್ಚಿನ ಮಾಲಿಕ ಮಹಾನುಭಾವರಿಗೆ ತೊಂದರೆಯಾಗಿಲ್ಲ. ಲೇಬರ್‌ ಇನ್‌ಸ್ಪೆಕ್ಟರ್‌ಗಳ ಪ್ರಕಾರ ಈ ಕೇಸುಗಳನ್ನು ಮಾಲಿಕರು ಕೋರ್ಟಿಗೆ ದೂಡುವ ಮೂಲಕ ಬಚಾವ್‌ ಆಗಲು ಯತ್ನಿಸುತ್ತಾರೆ.

ಇದರಿಂದ ಸಾವಿರಾರು ಮಕ್ಕಳನ್ನೂ ಯಾವ ಕಾಯ್ದೆಯೂ ನರಕದಿಂದ ಪಾರು ಮಾಡಿಲ್ಲ. ಪ್ರಸ್ತುತ ಕಾರ್ಮಿಕ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೂ ಬಾಲ ಕಾರ್ಮಿಕರ ಪತ್ತೆಗೆ ಅನಿರೀಕ್ಷಿತ ದಾಳಿ ನಡೆಸಲು ಸೂಚಿಸಿದೆ. ಸುಳ್ಳು ಸರ್ಟಿಫಿಕೇಟ್‌ಗಳ ಬಗ್ಗೆಯೂ ಒಂದು ಕಣ್ಣಿಟ್ಟಿರುವಂತೆಯೂ ಜಿಲ್ಲಾಡಳಿತಕ್ಕೆ ಹೇಳಲಾಗಿದೆ.

ರಾಜ್ಯದಲ್ಲಿ ಬಾಲಕಾರ್ಮಿಕ ನಿವಾರಣೆಗಾಗಿ 2,050 ಮಂದಿ ಕಾರ್ಮಿಕ ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಲಾಗಿದೆ. ಇವರೆಲ್ಲಾ ರೈಡ್‌ ನಡೆಸಿ ಆಗಾಗ ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಅಥವಾ ಮಾಡದೇ ಜಿಲ್ಲಾ ಕಾರ್ಮಿಕ ಉಪ ಆಯುಕ್ತರಿಗೆ ವರದಿ ನೀಡುತ್ತಾರೆ. ಆದರೂ ಹಳ್ಳಿಗಳಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲಿಯೂ ಪುಟಾಣಿಗಳು ಗ್ಲಾಸ್‌ ತೊಳೆಯುತ್ತಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+