ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿಯಲ್ಲಿ ಕಾಲಿಡುತ್ತಿದೆ ಕರ್ನಾಟಕದ ಕೊಲ್ಹಾಪುರ್‌ ಚಪ್ಪಲಿ

By Staff
|
Google Oneindia Kannada News

ಬೆಂಗಳೂರು : ಜರ್ಮನಿಯ ಡಸೆಲ್‌ ಡಾರ್ಫ್‌ನಲ್ಲಿ ಅಂತಾರಾಷ್ಟ್ರೀಯ ಪಾದರಕ್ಷೆ ಮೇಳದಲ್ಲಿ ಕರ್ನಾಟಕದ ಕೊಲ್ಹಾಪುರಿ ಚಪ್ಪಲಿಯೂ ಕಾಲಿಡುತ್ತಿದೆ. ಈ ಮೇಳದಲ್ಲಿ ಪಾಲ್ಗೊಳ್ಳಲು ಬೆಳಗಾವಿ ಜಿಲ್ಲೆ ಅಥಣಿಯಲ್ಲಿರುವ ಟೋ ಹೋಲ್ಡ್‌ ಸಂಸ್ಥೆಯ ಇಬ್ಬರು ಕುಶಲಕರ್ಮಿಗಳು ತೆರಳುತ್ತಿದ್ದಾರೆ.

ಕೊಲ್ಹಾಪುರಿ ಚಪ್ಪಲಿಗಳ ತಯಾರಿಕೆಗೆ ಖ್ಯಾತವಾದ ಅಥಣಿಯ ಟೋಹೋಲ್ಡ್‌ನ ಪುತಲಾ ನವಲೆ ಹಾಗೂ ಸಾವಿತ್ರಿ ಯಾದವ್‌ ಜರ್ಮನಿ ಮೇಳಕ್ಕೆ ಆಯ್ಕೆಯಾಗಿರುವ ಕುಶಲಕರ್ಮಿಗಳು. ಈ ವಿಷಯವನ್ನು ಅಸೆಂಟ್‌ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಯೋಜನೆಯ ಪ್ರಾಯೋಜಕತ್ವದಲ್ಲಿ ಈ ಅಂತಾರಾಷ್ಟ್ರೀಯ ಪಾದುಕೆ ಮೇಳ ಜರುಗುತ್ತಿದೆ. ಅಸೆಂಟ್‌ ಸಂಸ್ಥೆಯ ನೆರವಿನಿಂದ ನಡೆಯುತ್ತಿರುವ ಟೋಹೋಲ್ಡ್‌ ಸಂಸ್ಥೆಯ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ಇದು ಮೂರನೇ ಬಾರಿ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X