ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ ಮಾತುಕತೆಗೆ ಲೆ.ಜ. ಮೊಹಮ್ಮದ್‌ ನೇತೃತ್ವದ ನಿಯೋಗ

By Staff
|
Google Oneindia Kannada News

ಇಸ್ಲಾಮಾಬಾದ್‌ : ಶಂಕಿತ ಭಯೋತ್ಪಾದಕ ಒಸಮಾ ಬಿನ್‌ ಲಾಡೆನ್‌ನನ್ನು ಅಮೆರಿಕಕ್ಕೆ ಒಪ್ಪಿಸುವಂತೆ ಮಾತುಕತೆ ನಡೆಸುವ ಸಲುವಾಗಿ ಪಾಕಿಸ್ತಾನವು ಐ.ಎಸ್‌.ಐ. ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಮೊಹಮದ್‌ ಅಹ್ಮದ್‌ ನೇತೃತ್ವದ 6 ಸದಸ್ಯರ ನಿಯೋಗವನ್ನು ನಿಯೋಜಿಸಿದೆ.

ಈ ನಿಯೋಗವು ತಾಲಿಬಾನ್‌ ನಾಯಕರೊಂದಿಗೆ ಮಾತುಕತೆ ನಡೆಸಲು ಆಫ್ಘಾನಿಸ್ತಾನದ ಕಂದಹಾರ್‌ ನಗರಕ್ಕೆ ಸೋಮವಾರ ತೆರಳುತ್ತಿದೆ. ಕೇವಲ ಒಬ್ಬ ವ್ಯಕ್ತಿಯ ಸಲುವಾಗಿ 25 ದಶಲಕ್ಷ ಅಮಾಯಕ ಜನರನ್ನು ಬಲಿಕೊಡುವುದು ತರವಲ್ಲ ಎಂದು ಈ ನಿಯೋಗ ತಾಲಿಬಾನ್‌ ಆಡಳಿತದ ಮನವೊಲಿಸುವ ಪ್ರಯತ್ನ ಮಾಡಲಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿ ಹೇಳಿದೆ.

ಪಾಕ್‌ ಆಂತರಿಕ ಮಾಧ್ಯಮಗಳ ರೀತ್ಯ ಈ ನಿಯೋಗವು ಆಫ್ಘಾನಿಸ್ತಾನದ ಮಿಲಿಟರಿ ಆಡಳಿತಕ್ಕೆ ಬಿನ್‌ ಲಾಡೆನ್‌ನನ್ನು ಒಪ್ಪಿಸಲು 3 ದಿನಗಳ ಗಡುವು ನೀಡಲಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮೂಲಗಳ ಸಮಜಾಯಿಷಿ ಈವರೆಗೆ ಲಭ್ಯವಾಗಿಲ್ಲ.

ಪಾಕಿಸ್ತಾನದಿಂದ ಕಾಬೂಲ್‌ಗೆ ತೆರಳುತ್ತಿರುವ ನಿಯೋಗದಲ್ಲಿ ಆಫ್ಘಾನಿಸ್ತಾನದ ರಾಜಭಾರಿಯಾಗಿ ಸೇವೆ ಸಲ್ಲಿಸಿದ್ದ ಹಾಲಿ ವಿದೇಶಾಂಗ ವ್ಯವಹಾರಗಳ ಖಾತೆಯ ಹೆಚ್ಚುವರಿ ಕಾರ್ಯದರ್ಶಿ ಅಜೀಜ್‌ ಖಾನ್‌ ಸಹ ಇದ್ದಾರೆ ಎಂದು ವರದಿಗಳು ಹೇಳಿವೆ.

(ಪಿ.ಟಿ.ಐ)

ಲಾಡೆನ್‌ನನ್ನು ಅಮೆರಿಕೆಗೆ ಒಪ್ಪಿಸಲು ತಾಲಿಬಾನ್‌ಗೆ ಪಾಕ್‌ ಗಡುವು

Post Your Views

ಮುಖಪುಟ / ಭಯೋತ್ಪಾದನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X