Get Updates
Get notified of breaking news, exclusive insights, and must-see stories!

‘ಅಮೆರಿಕಕ್ಕೆ ಬೆಂಬಲ! ಆದರೆ,ಯುದ್ಧ ಚಟುವಟಿಕೆಗಳಿಂದ ದೂರವಿರೋಣ’

ಶಿರಸಿ : ಭಯೋತ್ಪಾದಕತೆಯನ್ನು ಹತ್ತಿಕ್ಕುವ ಅಮೇರಿಕದ ಕ್ರಮಕ್ಕೆ ಬಲವಾಗಿ ನಿಂತಿರುವ ಕೇಂದ್ರ ಸರ್ಕಾರದ ನಿಲುವನ್ನು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಬೆಂಬಲಿಸಿದೆ.

ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವಿಎಚ್‌ಪಿ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಈ ವಿಷಯ ತಿಳಿಸಿದರು. ಆದರೆ, ಯುದ್ಧರಂಗವಾಗಿ ಭಾರತವನ್ನು ಬಳಸಿಕೊಳ್ಳಲು ಅವಕಾಶ ನೀಡದಂತೆ ಕೇಂದ್ರ ಸರ್ಕಾರವನ್ನು ಸಿಂಘಾಲ್‌ ಒತ್ತಾಯಿಸಿದರು.

ಭಯೋತ್ಪಾದಕರಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಅಮೆರಿಕವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಆದರೆ, ತನ್ನೆಲ್ಲ ಅತ್ಯಾಧುನಿಕ ಉಪಕರಣಗಳನ್ನು ಬಳಸಿಯೂ ಅಮೆರಿಕ ಭಯೋತ್ಪಾದಕತೆಯನ್ನು ಹತ್ತಿಕ್ಕುವಲ್ಲಿ ಸಂಪೂರ್ಣ ಯಶಸ್ಸು ಗಳಿಸುವುದು ಸಾಧ್ಯವಿಲ್ಲ . ಇಂಥ ಸಂದರ್ಭದಲ್ಲಿ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸಿಂಘಾಲ್‌ ಹೇಳಿದರು.

ಭಾರತಕ್ಕೆ ವಿದೇಶಿಯರ ಆಗಮನ ಹಾಗೂ ನಿರ್ಗಮನದ ಚಟುವಟಿಕೆಗಳನ್ನು ಗಮನಿಸಲು ಪ್ರತ್ಯೇಕವಾದ ವಿಭಾಗವೊಂದನ್ನು ತೆರೆಯಬೇಕು. ಈ ವಿಭಾಗ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸಬೇಕು ಎಂದು ಅವರು ಸರ್ಕಾರಕ್ಕೆ ಸೂಚಿಸಿದರು. ಬರುವ ಮಹಾ ಶಿವರಾತ್ರಿಯ ನಂತರ ರಾಮ ಮಂದಿರ ನಿರ್ಮಾಣ ಪ್ರಾರಂಭವಾಗುವುದಾಗಿ ಹೇಳಿದ ಸಿಂಘಾಲ್‌, ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸಂಭವಿಸಿದ ಗೋಲಿಬಾರ್‌ ಸಾವಿನ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

(ಪಿಟಿಐ)

Post Your Views

ಮುಖಪುಟ / ಭಯೋತ್ಪಾದನೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+