ಅಮೆರಿಕಾ ದುರಂತ: ಪುತ್ತೂರು ಮತ್ತು ಮಂಗಳೂರಿನ ಯುವಕರು ಕ್ಷೇಮ
ಮಂಗಳೂರು : ಅಮೆರಿಕಾದಲ್ಲಿ ನೌಕರಿ ಮಾಡುತ್ತಿರುವ ಪುತ್ತೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಹೇಮಂತ್ ಕುಮಾರ್(28) ಅವರು ಸುರಕ್ಷಿತವಾಗಿರುವುದಾಗಿ ಗೊತ್ತಾಗಿದೆ.
ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದಿರು ದಾಳಿಯ ಹಿನ್ನೆಲೆಯಲ್ಲಿ ಹೇಮಂತ್ ಅವರ ಬಗ್ಗೆ ಮನೆಯವರು, ಬಂಧುಗಳು ಆತಂಕಗೊಂಡಿದ್ದರು.ಕಳೆದ ಎಂಟು ವರ್ಷಗಳಿಂದ ಅವರು ವಿಪ್ರೋ ಕಂಪೆನಿಯಡಿಯಲ್ಲಿ ಕೆಲಸ ಮಾಡುತ್ತಿದ್ದರು. ಹೇಮಂತ್ ಅವರ ಹೆಸರು ಟಿವಿ ಚಾನೆಲ್ ಒಂದರಲ್ಲಿ ಕೇಳಿ ಬಂದಿದ್ದು, ಅವರು ದಾಳಿಗೆ ತುತ್ತಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಹೆಚ್ಚಿನ ಮಾಹಿತಿ ಇನ್ನೂ ಗೊತ್ತಾಗಿಲ್ಲ.
ಟಾಟಾ ಕನ್ಸಲ್ಟೆನ್ಸಿಯ ಉದ್ಯೋಗಿ, ಗಣೇಶ್ ನಾಯಕ್ ಅವರೂ ಯಾವುದೇ ತೊಂದರೆಗೆ ಒಳಗಾಗಿಲ್ಲ . ವಿಶ್ವವ್ಯಾಪಾರ ಕೇಂದ್ರದ ಬಳಿಯೇ ಎನ್ವೈಸಿ ಬ್ಯಾಂಕ್ನಲ್ಲಿ ಪ್ರೊಜೆಕ್ಟ್ ಒಂದರ ಮೇಲೆ ಅವರು ಕೆಲಸ ಮಾಡಲು ಕಳೆದ ಆಗಸ್ಟ್ನಲ್ಲಿ ಅಮೆರಿಕಾಕ್ಕೆ ತೆರಳಿದ್ದರು.
ಮಂಗಳೂರಿನ ಸುಚೇತಾ ಅಮೀನ್ ಮತ್ತು ನೊಯಿಲ್ ವಾಸ್, ವಿಟ್ಲದ ಸಾಫ್ಟ್ವೇರ್ ಇಂಜಿನಿಯರ್ ನಾರಾಯಣ ಜಿ. ಹೆಗ್ಡೆ ಮತ್ತು ಅವರ ಬಂಧು, ಗಜಾನನ ಹೆಗ್ಡೆ ಕೂಡ ಸುರಕ್ಷಿತರ ಪಟ್ಟಿಯಲ್ಲಿರುವುದಾಗಿ ವರದಿಯಾಗಿದೆ.(ಇನ್ಫೋ ವಾರ್ತೆ)
Post Your Views
ಮುಖಪುಟ / ಭಯೋತ್ಪಾದನೆ
More From
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications