ಜಗತ್ತಿಗೆ ಸೆಡ್ಡುಹೊಡೆದಿರುವ ತಾಲಿಬಾನ್ನಿಂದ ಜೆಹಾದ್ಗೆ ಫತ್ವಾ ?
ಇಸ್ಲಮಾಬಾದ್ : ಪಾಕಿಸ್ತಾನ ಹಾಗೂ ಆಪ್ಘಾನಿಸ್ತಾನದ ಗಡಿಯ ಎರಡೂ ಬದಿ ಶಸ್ತ್ರ ಸಜ್ಜಿತ ಪಡೆಗಳು ಕಟ್ಟೆಚ್ಚರದಲ್ಲಿ ನಿಂತಿರುವ ನಡುವೆ, ಬಿನ್ ಲ್ಯಾಡೆನ್ನನ್ನು ಅಮೆರಿಕದ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿರುವ ಪಾಕಿಸ್ತಾನದ ಆಗ್ರಹದ ಕುರಿತು ಚರ್ಚಿಸಲು ಇಸ್ಲಾಮಿಕ್ ಸ್ಕಾಲರ್ಗಳ ಸಭೆಯನ್ನು ಓಮರ್ ಸೋಮವಾರ ಕರೆದಿದ್ದಾರೆ. ಈ ಸಭೆಯಲ್ಲಿ ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ ತಾಲಿಬಾನ್ ತಳೆಯಬೇಕಾದ ನಿಲುವನ್ನು ಕುರಿತು ನಿರ್ಣಯಿಸಲಾಗುವುದು.
ಈ ನಡುವೆ, ತಾಲಿಬಾನ್ ಆಡಳಿತ ಪಾಕಿಸ್ತಾನದ ಒತ್ತಾಯಕ್ಕೆ ಮಣಿಯುವ ಸಾಧ್ಯತೆಗಳು ತೀರಾ ಕಡಿಮೆ ಇವೆಯೆಂದು ಕಾಬೂಲ್ ಮೂಲಗಳು ತಿಳಿಸಿವೆ. ಓಮರ್ ಅವರು ಜೆಹಾದ್ನ್ನು ಜಾರಿಗೊಳಿಸುವ ಫತ್ವಾ ಹೊರಡಿಸುವ ನಿರೀಕ್ಷೆ ಯಿದೆ ಎಂದೂ ಈ ಮೂಲಗಳು ತಿಳಿಸಿವೆ. ಈಗಾಗಲೇ ತಾನು ಪ್ರತೀಕಾರಕ್ಕೆ ಸಿದ್ಧವಿರುವುದಾಗಿ ತಾಲಿಬಾನ್ ಆಡಳಿತ ಸ್ಪಷ್ಟಪಡಿಸಿರುವುದನ್ನು ಇಲ್ಲಿ ನೆನೆಯಬಹುದು.
ಇಸ್ಲಾಮಿಕ್ ಸ್ಕಾಲರ್ಗಳ ಸಭೆಯ ಬೆನ್ನಿನಲ್ಲೇ, ಲ್ಯಾಡೆನ್ನನ್ನು ಅಮೆರಿಕಾದ ವಶಕ್ಕೆ ಒಪ್ಪಿಸುವಂತೆ ತಾಲಿಬಾನ್ ಸರ್ಕಾರದ ಮನವೊಲಿಸುವ ಪ್ರಯತ್ನಗಳನ್ನು ಐಎಸ್ಐನ ಮುಖ್ಯಸ್ಥ ಜನರಲ್ ಮೆಹಮೂದ್ ಅಹಮದ್ ನೇತೃತ್ವದ 6 ಮಂದಿಯ ಪಾಕ್ ತಂಡ ನಡೆಸಲಿದೆ.
(ಪಿಟಿಐ)
ಮುಖಪುಟ / ಭಯೋತ್ಪಾದನೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications